SIR helps prevent illegal activities 
ರಾಜ್ಯ

ಅಕ್ರಮ ತಡೆಗೆ ಎಸ್​ಐಆರ್​ ಸಹಕಾರಿ

ತುಮಕೂರು ಡೆಸ್ಕ್
ಚಿಕ್ಕನಾಯಕನಹಳ್ಳಿ: ಕೇಂದ್ರ ಚುನಾವಣಾ ಆಯೋಗ ಆಯೋಜಿಸಿರುವ ಎಸ್​ಐಆರ್​ ಕಾರ್ಯದಲ್ಲಿ ಜೆಡಿಎಸ್​ ಪಕ್ಷದ ಎಲ್ಲ ಬಿಎಲ್​ಎಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಶಾಸಕ ಸಿ.ಬಿ.ಸುರೇಶ್​ಬಾಬು ತಿಳಿಸಿದರು.
ಎಸ್​ಐಆರ್​ ಅಂಗವಾಗಿ ಪಟ್ಟಣದ ಜಯದೇವ ಕನ್ವೇಷನ್​ ಹಾಲ್​ನಲ್ಲಿ ಜೆಡಿಎಸ್​ನಿಂದ ಆಯೋಸಿದ್ದ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಮಾತನಾಡಿ, ಮತಗಟ್ಟೆ ವಿಶೇಷ ಪರಿಸ್ಕರಣೆಯಿಂದ ಮತದಾರರ ನಿಖರವಾದ ಮಾಹಿತಿ ಉಳಿಯಲಿದ್ದು, ಇನ್ಮುಂದೆ ಮತಪಟ್ಟಿಯಲ್ಲಿ ಅಕ್ರಮ ನಡೆಯಲು ಸಾಧ್ಯವಿಲ್ಲ ಎಂದರು.
ಜೆಡಿಎಸ್​ ಜಿಲಾಧ್ಯಕ್ಷ ನಿಂಗಪ್ಪ ಮಾತನಾಡಿ, ನೈಜ ಮತದಾರರನ್ನು ಗುರುತಿಸಲು ಆಯೋಗ ಪರಿಷ್ಕರಣೆಯ ಕಾರ್ಯ ಮಾಡುತ್ತಿದೆ. ನಕಲಿ ಮತದಾರರನ್ನು ರದ್ದುಪಡಿಸಿ ಅರ್ಹರನ್ನು ಪಟ್ಟಿಯಲ್ಲಿ ಸೇರಿಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಪ್ರತಿಯೊಬ್ಬರ ಮೇಲೆ ತೆರಿಗೆ ಹಾಗೂ ಸಾಲದ ಹೊರೆ ವಿಧಿಸುತ್ತಿದೆ. ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದು, ರಾಜ್ಯದ ಜನ ಸರ್ಕಾರದ ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಜೆಡಿಎಸ್​ ಪಕ್ಷದ ಹಿರಿಯ ಮುಖಂಡ ದೇವರಾಜು ಮಾತನಾಡಿ, ಕೇಂದ್ರ ಚುನಾವಣಾ ಆಯೋಗ ಎಸ್​ಐಆರ್​ ಕಾರ್ಯವನ್ನು ಕಳೆದೊಂದು ವರ್ಷದಿಂದ ಮಾಡುತ್ತಿದ್ದು, ಪ್ರತಿಯೊಂದು ಬೂತ್​ಗೆ ಒಬ್ಬ ಬಿಎಲ್​ಒ ಅಧಿಕಾರಿಯನ್ನು ನೇಮಕ ಮಾಡಿದೆ. ಕಳೆದ 2002ರಿಂದ 2025ವರೆಗಿನ ಎಲ್ಲ ಮತದಾರರ ಪಟ್ಟಿಯ ಮ್ಯಾಪಿಂಗ್​ ಸಿದ್ಧಪಡಿಸಿಕೊಂಡಿದೆ. ಇದರ ಬಗೆ ್ಗರಾಜಕೀಯ ಪಕ್ಷಗಳ ಆಕ್ಷೇಪಣೆಗಳು ಹೆಚ್ಚಾಗುತ್ತಿವೆ ಎಂಬ ಕಾರಣಕ್ಕೆ ಪರಿಷ್ಕರಣೆಗೆ ರಾಜಕೀಯ ಪಕ್ಷಗಳ ಸಹಕಾರ ಕೋರಿದ್ದು, ಎಲ್ಲ ಪಕ್ಷದವರು ತಮ್ಮ ಪಕ್ಷದಿಂದ ಪ್ರತಿಬೂತ್​ಗೆ ಬಿಎಲ್​ಎ ನೇಮಿಸಬಹುದಾಗಿದೆ ಎಂದರು.
ತಾಲೂಕು ಜೆಡಿಎಸ್​ ಪಕ್ಷದ ಅಧ್ಯಕ್ಷ ರಾಮಚಂದ್ರಯ್ಯ, ಡಿಸಿಸಿ ಬ್ಯಾಂಕ್​ ನಿರ್ದೇಶಕ ಸಿಂಗದಹಳ್ಳಿ ರಾಜ್​ಕುಮಾರ್​, ಜಿಪಂ ಮಾಜಿ ಸದಸ್ಯೆ ಲೋಹಿತಾಬಾಯಿ, ಮಹಿಳಾ ಟಕದ ಅಧ್ಯೆ ಹೇಮಾವತಿ, ತಾಪಂ ಮಾಜಿ ಅಧ್ಯೆ ಚೇತನಾಗಂಗಾಧರ್​, ಪುರಸಭೆ ಮಾಜಿ ಅಧ್ಯೆ ರೇಣುಕಮ್ಮಮತ್ತಿತರರು ಇದ್ದರು.
28 ಸಿಎನ್​ ಹಳ್ಳಿ ಎಸ್​ಐಆರ್​
ವಿಶೇಷ ಸಮಗ್ರ ಮತಪಟ್ಟಿ ಪರಿಷ್ಕರಣೆಯ ಅಂಗವಾಗಿ ಚಿಕ್ಕನಾಯಕನಹಳ್ಳಿಯ ಜಯದೇವ ಕನ್ವೇಷನ್​ ಹಾಲ್​ನಲ್ಲಿ ಜೆಡಿಎಸ್​ನಿಂದ ಆಯೊಜಿಸಿದ್ದ ಕಾರ್ಯಗಾರವನ್ನು ಎಚ್​.ನಿಂಗಪ್ಪ ಉದ್ಘಾಟಿಸಿದರು. ಸಿ.ಬಿ.ಸುರೇಶ್​ಬಾಬು, ರಾಮಚಂದ್ರಯ್ಯ, ಸಿಂಗದಹಳ್ಳಿ ರಾಜ್​ಕುಮಾರ್​ ಇದ್ದರು.