ನಾಗಯ್ಯ ಹಿರೇಮಠ 
ರಾಜ್ಯ

ಎಸ್​ಐಆರ್​ ಶೇ.96.65 ಗುರಿ ಸಾಧನೆ

ಚಿತ್ತಾಪುರ: ಮತದಾರ ವಿಶೇಷ ಪಟ್ಟಿ ಪರಿಷ್ಕರಣೆ (ಎಸ್​ಐಆರ್​) ಯಶಸ್ವಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ತಹಸೀಲ್ದಾರ್​ ನಾಗಯ್ಯ ಹಿರೇಮಠ ಮನವಿ ಮಾಡಿದರು.
ಕ್ಷೇತ್ರದಲ್ಲಿ ಒಟ್ಟು 257 ಮತಗಟ್ಟೆಗಳಿದ್ದು, 2,51,226 ಮತದಾರರಿಗೆ ಎನ್ಯುಮರೇಷನ್​ ಾಮ್​ರ್ ವಿತರಣೆ ಮಾಡಲಾಗಿದೆ. 1,93,767 ಮತದಾರರು ಾಮ್​ರ್ ಭರ್ತಿ ಮಾಡಿ ಹಿಂದುರುಗಿಸಿದ್ದಾರೆ. 49,044 ಗಣತಿ ನಮೂನೆ ಡಿಜಿಟೈಡ್​ ಮಾಡಲಾಗಿದೆ. ಎಎಸ್​ಡಿಡಿ ಒಟ್ಟು 242811 ಮತದಾರರ ಮಾಹಿತಿ ಸಂಗ್ರಹಿಸಿದ್ದು, ಶೇ.96.65 ಗುರಿ ಮುಟ್ಟಲಾಗಿದೆ. 8415 ಮತದಾರರು ಬಾಕಿ ಉಳಿದಿದ್ದು, ಸಂಪರ್ಕಿಸಿ ಮಾಹಿತಿ ಪಡೆಯುವ ಕೆಲಸ ನಡೆಯುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆ.5ರವರೆಗೆ ಎಲ್ಲ ಗ್ರಾಮ ಪಂಚಾಯಿತಿ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಿಮಿತ್ತ ಎಎಸ್​ಡಿಡಿ- ಕುರಿತು ಗ್ರಾಮ ಸಭೆ ಹಾಗೂ ವಾರ್ಡ್​ ಸಭೆ ಆಯೋಜಿಸಲಾಗಿದೆ. ಎಸ್​ಐಆರ್​ ಸಂಬಂಧಿಸಿದಂತೆ ಸಂಶಯ ನಿವಾರಣೆಗೆ ಪ್ರಜಾಸೌಧದಲ್ಲಿ ವಾರ್​ ರೂಮ್​ ಸ್ಥಾಪನೆ ಮಾಡಲಾಗಿದ್ದು, 9 ಸಿಬ್ಬಂದಿಯನ್ನು ನಿಯೋಜಿಸಿಲಾಗಿದೆ. ಆ.8 ಕೊನೇ ದಿನವಾಗಿದೆ ಎಂದು ಹೇಳಿದರು.
ಮತದಾರರ ನೋಂದಣಾಧಿಕಾರಿ ರಾಜಕುಮಾರ ರಾಠೋಡ್​ ಮಾತನಾಡಿದರು.