ರಾಜ್ಯ

ಸಿಂಗಲ್ಸ್ ವಿಭಾಗ: ಭಾರತದ ಯುವ ಆಟಗಾರ್ತಿ ವೈಷ್ಣವಿ ಅಡ್ಕರ್ ಫೈನಲ್ ಗೆ ಎಂಟ್ರಿ

ಕಲಬುರಗಿ: ಸಿಂಗಲ್ಸ್ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ಯುವ ಆಟಗಾರ್ತಿ ವೈಷ್ಣವಿ ಅಡ್ಕರ್ ಭರ್ಜರಿ ಪ್ರದರ್ಶನ ನೀಡಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
ಇಲ್ಲಿನ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಲಾನ್ ಟೆನಿಸ್ ಮೈದಾನದಲ್ಲಿ ಆಯೋಜಿಸಿರುವ itf ಕಲಬುರಗಿ ಓಪನ್ ವುಮೆನ್ಸ್ ವರ್ಲ್ಡ್ ಟೂರ್ ನ ಶನಿವಾರದ ಪ್ರಥಮ ಮ್ಯಾಚ್ ಅಲ್ಲಿ ಟೂರ್ನಿಯ ಮೂರನೇ ಶ್ರೇಯಾಂಕಿತೆ ವೈಷ್ಣವಿ 6-3, 6-2 ನೇರ ಸೆಟ್ ಗಳಿಂದ ನೆದರ್ಲೆಂಡ್ ದೇಶದ ಟಾಪ್ ಆಟಗಾರ್ತಿ ಹಾಗೂ ಟೂರ್ನಿಯ ಮೊದಲ ಶ್ರೇಯಾಂಕಿತೆ ಜಸ್ಮಿನ್ ಗಿಂಬ್ರೆರ್ ಅವರನ್ನು ಮಣಿಸಿದರು.
ಪ್ರಥಮ ಸೆಟ್ ಅಲ್ಲಿ ಗಿಂಬ್ರೆರ್ ಒಂದಿಷ್ಟು ಪ್ರತಿರೋಧ ತೋರಿದರಾದ್ರೂ ವೈಷ್ಣವಿ ನಿರಂತರ ಗೇಮ್ ಪಾಯಿಂಟ್ ಪಡೆದು ಮುಂದೆ ಸಾಗಿದರು. ಎರಡನೇ ಸೆಟ್ ಅಲ್ಲಂತು ವೈಷ್ಣವಿ ಸಂಪೂರ್ಣ ಪಾರಮ್ಯ ಮೆರೆದರು.
ಪುಣೆ ಮೂಲದ 21 ವಯಸ್ಸಿನ ವೈಷ್ಣವಿ, ಒಮ್ಮೆ itf ಸಿಂಗಲ್, ಎರಡು ಬಾರಿ ಡಬಲ್ಸ್ ಟೈಟಲ್ ಮುಡಿಗೇರಿಸಿಕೊಂಡಿದ್ದಾರೆ. ಸಿಂಗಲ್ಸ್ ಅಲ್ಲಿ wta 468 ಹಾಗೂ ಡಬಲ್ಸ್ ಅಲ್ಲಿ 464 ರಾಂಕ್ ಹೊಂದಿದ್ದಾರೆ.