ಸಿಂಧುವಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷ ಕೆಂಪಣ್ಣ ಮಾತನಾಡಿದರು. ಪಾಪಾರವ್, ಜಯಶಂಕರಪ್ಪ, ಶಿವನಾಗಪ್ಪ, ಶಾಂತಪ್ಪ, ಸುಜೇಂದ್ರ ರಾಜೇ ಅರಸ್ ಇತರರಿದ್ದರು.
ನಂಜನಗೂಡು: ಸಿಂಧುವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ಭರವಸೆ ನೀಡಿದರು.ಅವರು ಮಂಗಳವಾರ ತಾಲೂಕಿನ ಸಿಂಧುವಳ್ಳಿ ಗ್ರಾಮದಲ್ಲಿ ನಡೆದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಉತ್ತಮ ಗುಣಮಟ್ಟದ ಹಾಲು ಸರಬರಾಜು ಮಾಡುವ ನಿಟ್ಟಿನಲ್ಲಿ ನಾವು ಶ್ರಮ ವಹಿಸಬೇಕಾಗುತ್ತದೆ. ಗುಣಮಟ್ಟದ ಹಾಲು ಸರಬರಾಜು ಮಾಡಿದರೆ ಡೈರಿಗೆ ಉತ್ತಮ ಲಾಭಾಂಶ ದೊರಕುತ್ತದೆ. ಕಳಪೆ ಗುಣಮಟ್ಟದ ಹಾಲನ್ನು ಯಾರೇ ಸರಬರಾಜು ಮಾಡಿದರೂ ನಿರ್ದಾಕ್ಷಿಣ್ಯವಾಗಿ ಅದನ್ನು ಹಿಂತಿರುಗಿಸಬೇಕು. ಇಂತಹ ಕಠಿಣ ಕ್ರಮ ಕೈಗೊಂಡಾಗ ಮಾತ್ರ ಡೈರಿಗೆ ಒಳ್ಳೆಯ ಹೆಸರು ಬರಲು ಸಾಧ್ಯ ಎಂದರು. ಎಲ್ಲರೂ ಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳಬೇಕು ಆರೋಗ್ಯ ಸಮಸ್ಯೆಗಳಾದಾಗ ನಿಮಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.
ಸಿಂಧುವಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಉಪಾಧ್ಯಕ್ಷ ಪಾಪಾರವ್, ನಿರ್ದೇಶಕರಾದ ಜಯಶಂಕರಪ್ಪ, ಶಿವನಾಗಪ್ಪ, ಶಾಂತಪ್ಪ, ಸುಜೇಂದ್ರ ರಾಜೇ ಅರಸ್, ವೆಂಕಟ ಸ್ವಾಮಿಗೌಡ, ಮಾಲತಿ, ಚಂದ್ರಮ್ಮ, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗಿರೀಶ್, ಹಾಲು ಪರೀಕ್ಷಕ ಕೆ.ಎಸ್. ಮೂರ್ತಿ, ಸಂಘದ ಸದಸ್ಯರು ಹಾಗೂ ಗ್ರಾಮದ ಮುಖಂಡರು ಇದ್ದರು.