ಯಳಂದೂರು ಪಟ್ಟಣದ ಶ್ರೀ ಶಂಕರ ಸಭಾಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರೋಟರಿ ಸಂಸ್ಥೆ ಯಳಂದೂರು ಗ್ರೀನ್ ವೇ ಸಂಸ್ಥೆಯ ನೂತನ ಪದಾಧಿಕಾರಿಗಳ ಪದವಿ ಪ್ರದಾನ ಸಮಾರಂಭವನ್ನು ರೋಟರಿ ಜಿಲ್ಲಾ ಪ್ರಾಂತಪಾಲ ಯಶಸ್ವಿ ಎಸ್.ಸೋಮಶೇಖರ್ ಉದ್ಘಾಟಿಸಿದರು. ವೈ.ಕೆ.ಮೋಳೆ ನಾಗರಾಜು, ವೈ.ಎಚ್. ಹನುಮಂತೇಗೌಡ, ಆರ್.ದಕ್ಷಿಣ ಮೂರ್ತಿ, ವೈ.ಜಿ.ನಿರಂಜನಸ್ವಾಮಿ ಇತರರು ಇದ್ದರು. 
ರಾಜ್ಯ

ಸೇವಾ ಕಾರ್ಯದಲ್ಲಿ ಪ್ರಾಮಾಣಿಕತೆ ಮುಖ್ಯ

ಯಳಂದೂರು: ಜೀವನ ಸಾರ್ಥಕವಾಗಬೇಕಾದರೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಇದನ್ನು ಪ್ರಚಾರಕ್ಕೆ ಬಳಸಿಕೊಳ್ಳದೆ ಪ್ರಾಮಾಣಿಕವಾಗಿ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು ಎನ್ನುವ ಗುಣ ಮೈಗೂಢಿಸಿಕೊಳ್ಳಬೇಕಿದೆ ಎಂದು ರೋಟರಿ ಜಿಲ್ಲಾ ಪ್ರಾಂತಪಾಲ ಯಶಸ್ವಿ ಎಸ್.ಸೋಮಶೇಖರ್ ತಿಳಿಸಿದರು.

ಇತ್ತೀಚೆಗೆ ಪಟ್ಟಣದ ಶಂಕರ ಸಭಾ ಭವನದಲ್ಲಿ ಆಯೋಜಿಸಿದ್ದ ರೋಟರಿ ಸಂಸ್ಥೆ ಯಳಂದೂರು ಗ್ರೀನ್ ವೇ ಸಂಸ್ಥೆಯ ನೂತನ ಪದಾಧಿಕಾರಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ರೋಟರಿ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಸೇವೆ ಸಲ್ಲಿಸುವ ದೊಡ್ಡ ಸಂಸ್ಥೆಯಾಗಿದೆ. ಪೋಲಿಯೋ ನಿರ್ಮೂಲನೆಗಾಗಿ ನಮ್ಮ ಸಂಸ್ಥೆ ವಿಶ್ವಸಂಸ್ಥೆಯೊಂದಿಗೆ ಸಹಕರಿಸುತ್ತಿದೆ. ಇದನ್ನು ವಿಶ್ವದಿಂದ ನಿರ್ಮೂಲನೆ ಮಾಡಲು ಪಣತೊಟ್ಟಿದ್ದು ಈಗಾಗಲೇ ಇದರಲ್ಲಿ ಯಶಸ್ವಿಯೂ ಆಗಿದೆ. ಅಲ್ಲದೆ ಆರೋಗ್ಯ, ಶಿಕ್ಷಣ, ಜಾಗತಿಕ ತಾಪಮಾನ ಹೆಚ್ಚಳದಂತಹ ಕ್ಷೇತ್ರಗಳಲ್ಲೂ ಗಮನಾರ್ಹ ಕೆಲಸ ಮಾಡುತ್ತಿದೆ. ಕೋಟ್ಯಂತರ ರೂ.ಗಳನ್ನು ವಾರ್ಷಿಕವಾಗಿ ಸಂಘದ ಸದಸ್ಯರಿಂದ ದೇಣಿಗೆಯಾಗಿ ಸಂಗ್ರಹಿಸಿ ಇದನ್ನು ಸಮಾಜ ಸೇವೆಗೆ ಬಳಸಿಕೊಳ್ಳುತ್ತಿರುವುದು ನಮ್ಮ ಸಂಸ್ಥೆಯ ಹೆಮ್ಮೆಯಾಗಿದೆ. ಈ ನಿಟ್ಟಿನಲ್ಲಿ ನೂತನವಾಗಿ ಪದ ಗ್ರಹಣ ಮಾಡುತ್ತಿರುವ ಅಧ್ಯಕ್ಷರು, ಕಾರ್ಯದರ್ಶಿ ಸೇರಿದಂತೆ ಪ್ರತಿಯೊಬ್ಬರೂ ಸೇವೆಯನ್ನು ಪ್ರಮಾಣಿಕವಾಗಿ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎಂ.ಎಸ್.ರಿತೇಶ್, ನೂತನ ಕಾರ್ಯದರ್ಶಿ ವೈ.ಕೆ.ಮೋಳೆ ನಾಗರಾಜು ಅಧಿಕಾರ ಸ್ವೀಕರಿಸಿ ಮಾತನಾಡಿದರು. ಸಹಾಯಕ ವಲಯ ಪ್ರಾಂತಪಾಲ ವೈ.ಎಚ್. ಹನುಮಂತೇಗೌಡ, ಆರ್.ದಕ್ಷಿಣ ಮೂರ್ತಿ, ವೈ.ಜಿ.ನಿರಂಜನಸ್ವಾಮಿ, ಸಿ.ಪುಟ್ಟರಾಜು, ವೈ.ಬಿ.ನಟರಾಜು, ಎನ್.ಶಿವಕುಮಾರ್, ಆರ್.ಬಂಗಾರಸ್ವಾಮಿ, ಎಸ್.ಮಹಾದೇವ, ಎಸ್.ರವಿ, ಎಂ.ದೇವರಾಜು, ಎಂ. ನಟರಾಜು, ಬಿ.ಟಿ.ಶ್ರೀನಿವಾಸ್, ಅನಿಲ್‌ಕುಮಾರ್, ಡಾ.ಸಾಗರ್, ವೈ.ಡಿ.ಸೂರ್ಯನಾರಾಯಣ, ಕೃಷ್ಣಪುರ ದೇವರಾಜು, ಮಹೇಂದ್ರ, ಚಂದ್ರಮೌಳಿ ಇತರರು ಇದ್ದರು.