ಹುಲಸೂರು ತಾಲೂಕಿನ ತೋಗಲೂರ ಗ್ರಾಮದಲ್ಲಿ ಸೋಮವಾರ ಸಮುದಾಯ ಭವನಕ್ಕೆ ಶಾಸಕ ಶರಣು ಸಲಗರ ಭೂಮಿ ಪೂಜೆ ನೆರವೇರಿಸಿದರು. ಗ್ರಾಪಂ ಅಧ್ಯೆ ಲಕ್ಷಿ$್ಮಬಾಯಿ ಧಬಾಲೆ, ಉಪಾಧ್ಯ ಶೇಶಾರಾವ ರಾಜೋಳೆ, ಎಂ.ಜಿ.ರಾಜೋಳೆ, ಕಾಶಪ್ಪ ಬಿರಾದಾರ, ರಾಜಕುಮಾರ ಪಾಟೀಲ್​ ಇತರರಿದ್ದರು. 
ರಾಜ್ಯ

ತೊಗಲೂರು ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಶರಣು ಸಲಗರ ಭರವಸೆ
  • ಸಮುದಾಯ ಭವನಕ್ಕೆ ಭೂಮಿಪೂಜೆ
ಹುಲಸೂರು: ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್​ ಸೇರಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಹಾಗೂ ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಶರಣು ಸಲಗರ ಭರವಸೆ ನೀಡಿದರು.
ತೋಗಲೂರ ಗ್ರಾಮದ ವಿಠ್ಠಲ್​ ರುಕ್ಮಿಣಿ ದೇವಾಲಯದ ಹತ್ತಿರ ಕೆಕೆಆರ್​ಡಿಬಿ ಯೋಜನೆಯಡಿ 25 ಲ ರೂ. ವೆಚ್ಚದ ಸಮುದಾಯ ಭವನಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮಸ್ಥರ ಬಹುದಿನದ ಬೇಡಿಕೆಯಾದ ಸಮುದಾಯ ಭವನ ನಿರ್ಮಾಣದಿಂದ ಸಾಮಾಜಿಕ, ಸಾಂಸತಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗಲಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗ್ರಾಮದ ಮಹಾದೇವ ದೇವಸ್ಥಾನದ ಸ್ಥಿತಿಗತಿ ವೀಸಿದ ಅವರು, ದೇವಸ್ಥಾನ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಶಾಸಕ ಸಲಗರ, ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ, ಉಳಿದ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಶ್ರೀವೇ ಈಡೇರಿಸಲಾಗುವುದು ಎಂದು ತಿಳಿಸಿದರು.
ಬಸವಕಲ್ಯಾಣ ಜಿಲ್ಲಾ ಕೇಂದ್ರ ರಚನೆ ಹೋರಾಟ ಸಮಿತಿ ಸಂಚಾಲಕ ಎಂಜಿ ರಾಜೋಳೆ, ಗ್ರಾಪಂ ಅಧ್ಯೆ ಲಕ್ಷಿ$್ಮಬಾಯಿ ಧಬಾಲೆ, ಉಪಾಧ್ಯ ಶೇಶಾರಾವ ರಾಜೋಳೆ, ಕಾಶಪ್ಪ ಬಿರಾದಾರ, ರಾಜಕುಮಾರ ಪಾಟೀಲ್​, ಸಕುಬಾಯಿ ಶೇರಿಕಾರ, ಜನಾಬಾಯಿ ಶೇರಿಕಾರ, ರವಿ ಮಂಠಾಳೆ, ಬಂಡೆಪ್ಪ ಮಂಠಾಳೆ, ಪ್ರಭು ಕಾಮಣ್ಣ, ಶಿವಕುಮಾರ ಮಂಠಾಳೆ, ಕಾಶೀನಾಥಯ್ಯ ಸ್ವಾಮಿ ಇತರರಿದ್ದರು.