Simple weddings are the inspiration for new life 
ರಾಜ್ಯ

ಸರಳ ವಿವಾಹಗಳು ಹೊಸ ಜೀವನಕ್ಕೆ ಚೈತನ್ಯ

ಶಿರಾ: ಸಾಮೂಹಿಕ ವಿವಾಹನವ ವಧು ವರರ ಸರಳ ಜೀವನ ಹೊಸ ಚೈತನ್ಯ ನೀಡುತ್ತದೆ. ಆಡಂಬರದ ಮದುವೆಗಿಂತ ಸರಳ ವಿವಾಹ ಪ್ರಸಕ್ತ ಸಂದರ್ಭದಲ್ಲಿ ಅವಶ್ಯಕತೆ. ತಂದೆ-ತಾಯಿಯಂದಿರು ಮಕ್ಕಳ ಮೇಲೆ ಯಾವುದೇ ಆರ್ಥಿಕ ಒತ್ತಡ ಹಾಕದೆ ಜೀವನ ಸುಗಮವಾಗಿಸಲು ಸರಳ ವಿವಾಹಗಳು ಸಹಕಾರಿ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.
ಶಿರಾ ತಾಲೂಕಿನ ನೀಲಕಂಠ ಪುರದಲ್ಲಿ ಶ್ರೀರಾಮ ನವಮಿಯ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಾತನಾಡಿ, ಬಡ ಕುಟುಂಬಗಳ ತಂದೆ-ತಾಯಿಯಂದಿರು ತಮ್ಮ ಮಕ್ಕಳಿಗೆ ಮದುವೆ ವಾಡಲು ಕಷ್ಟಪಡಬಾರದು ಎಂಬ ಉದ್ದೇಶದಿಂದ ವಾಜಿ ಕೃಷಿ ಸಚಿವ ಡಾ.ಎನ್.ರುವೀರ್ ರೆಡ್ಡಿ ಶ್ರೀರಾಮನವಮಿಯಂದು ಹಲವಾರು ದಶಕಗಳಿಂದ ಸರಳ ಸಾಮೂಹಿಕ ವಿವಾಹ ವಾಡುತ್ತಿರುವುದು ಸವಾಜ ಸದಾ ಸ್ಮರಿಸುವಂತಹ ಉತ್ತಮ ಕಾರ್ಯ ಎಂದರು.
ವಿವಾಹ ಮಹೋತ್ಸವದಲ್ಲಿ 26 ಜೋಡಿಗಳು ನೂತನ ದಾಂಪತ್ಯ ಜೀವನಕ್ಕೆ ಪಾದರ್ಪಣೆ ವಾಡಿದರು.