ಕಲಬುರಗಿ ಸೇಡಂ ರಸ್ತೆಯ ಗೀತಾನಗರದ ಅಮೃತ ಸರೋವರದಲ್ಲಿ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಭಾನುವಾರ ಆಯೋಜಿಸಿದ್ದ ವ್ಯಸನಮುಕ್ತ ಭಾರತ ಅಭಿಯಾನದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಕೇಂದ್ರೀಯ ವಿವಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಬಿ.ಕೆ.ವಿಜಯಾದೀದಿ, ಬಿ.ಕೆ.ಪಿಯೂಷ್, ಡಾ.ಬಿ.ಕೆ.ಪ್ರೇಮ, ಶಾಸಕ ಎಂ.ವೈ.ಪಾಟೀಲ್, ಪ್ರೊ.ವಿ.ಡಿ.ಮೈತ್ರಿ, ಡಾ.ಶುಭಾಂಗಿ, ದೇವಕಿ ನಂದನ, ವರ್ಷಾ ಜಾನೆ, ತೃಪ್ತಿ ಲಾಖೆ, ಶರಣು ಪಪ್ಪಾ, ಜಯಶ್ರೀ ಮತ್ತಿಮಡು ಇತರರಿದ್ದರು.
- ಸಚಿವ ಡಾ.ಶರಣಪ್ರಕಾಶ ಪಾಟೀಲ್ ಕಳವಳ
- ಕಲಬುರಗಿ ಗೀತಾನಗರದಲ್ಲಿ ವ್ಯಸನಮುಕ್ತ ಭಾರತ ಅಭಿಯಾನ
ಕಲಬುರಗಿ: ಭಾರತದಲ್ಲಿ ವ್ಯಸನಕ್ಕೆ ಒಳಗಾಗುತ್ತಿರುವ ಯುವಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ವ್ಯಸನ ಮುಕ್ತ ಭಾರತ ಮಾಡುವಲ್ಲಿ ಯುವಕರು ಪ್ರಮುಖ ಪಾತ್ರ ವಹಿಸಬೇಕಿದೆ ಎಂದು ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ನಗರದ ಸೇಡಂ ರಸ್ತೆಯ ಗೀತಾನಗರದ ಅಮೃತ ಸರೋವರದಲ್ಲಿ ಶಿವರಾತ್ರಿ ಅಂಗವಾಗಿ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಭಾನುವಾರ ಆಯೋಜಿಸಿದ್ದ ಅಖಿಲ ಭಾರತ ವ್ಯಸನ ಮುಕ್ತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದಿನೇದಿನೆ ಯುವ ಪೀಳಿಗೆ ವ್ಯಸನಕ್ಕೆ ಬಲಿಯಾಗುತ್ತಿದೆ. ಈ ಮೂಲಕ ದೇಶಕ್ಕೂ ಹಾನಿಯಾಗುತ್ತಿದೆ. ಕುಟುಂಬ, ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿದೆ. ಯುವಜನರು ಪಾಶ್ಚಾತ್ಯ ಸಂಸತಿಯ ಪ್ರಭಾವಕ್ಕೊಳಗಾಗಿ ನಮ್ಮ ದೇಶದ ಸಂಸತಿಗೆ ವಿಮುಖರಾಗುತ್ತಿದ್ದಾರೆ. ನಶೆ ಹಿಂದೆ ಬಿದ್ದು ಸಮಾಜ ಹಾಳು ಮಾಡುತ್ತಿದೆ. ಇದರ ನಿಯಂತ್ರಣ ಸರ್ಕಾರಕ್ಕೂ ಸವಾಲಾಗಿದೆ. ನಶೆ ಮುಕ್ತಗೊಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಸರ್ಕಾರದಿಂದ ಮಾತ್ರ ನಿಯಂತ್ರಣ ಅಸಾಧ್ಯ. ಹೀಗಾಗಿ ಜನರ ಮಧ್ಯೆ ಸಂ&ಸಂಸ್ಥೆಗಳ ಸಹಯೋಗದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಮಾನದಡಿ ಹಳ್ಳಿ ಹಳ್ಳಿಗೆ ಹೋಗಿ ಧ್ಯಾನ, ಅಧ್ಯಾತ್ಮದ ಮೂಲಕ ವ್ಯಸನದಿಂದ ದೂರವಿರಲು ಜಾಗೃತಿ ಮೂಡಿಸುತ್ತಿರುವ ಈ ಕಾರ್ಯ ಶ್ಲಾನೀಯ ಎಂದರು.
ಇತ್ತೀಚಿಗೆ ಮಕ್ಕಳಲ್ಲಿ ಮೊಬೈಲ್ ಗೀಳು ಕಾಣಿಸಿಕೊಂಡಿದೆ. ಇದನ್ನು ಹೋಗಲಾಡಿಸಲು ಬೃಹತ್ ಅಭಿಯಾನ ನಡೆಸುವ ಅಗತ್ಯವಿದೆ. ಎಳೆಯ ಮಕ್ಕಳು ಮೊಬೈಲ್ ಬಳಕೆಯ ವ್ಯಸನಕ್ಕೆ ಅಂಟಿಕೊಳ್ಳುತ್ತಿದ್ದಾರೆ. 16ರಿಂದ 18 ವರ್ಷದ ಹದಿಹರೆಯದವರೆಲ್ಲ ತಂಬಾಕು, ಮದ್ಯ, ಮಾದಕ ವಸ್ತುಗಳಂತಹ ವ್ಯಸನಗಳಿಗೆ ಅಂಟಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ, ಕೇಂದ್ರ ಸರ್ಕಾರ ಅಭಿಯಾನ ನಡೆಸುತ್ತಿವೆ. ರಾಜ್ಯ ಸರ್ಕಾರ ಈ ಕಾರ್ಯಕ್ಕೆ ಯಾವ ಹಂತದಲ್ಲಿ ಸಹಕಾರ ನೀಡಬಹುದು ಎಂಬುದರ ಕುರಿತು ಪರಿಶೀಲಿಸಲಾಗುವುದು ಎಂದು ಹೇಳಿದರು.
ಬ್ರಹ್ಮಾಕುಮಾರಿ ಕಲಬುರಗಿ ಉಪವಲಯದ ಮುಖ್ಯಸ್ಥೆ ರಾಜಯೋಗಿನಿ ಬಿ.ಕೆ.ವಿಜಯಾದೀದಿ, ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ರಾಜಯೋಗಿ ಬಿ.ಕೆ.ಪಿಯೂಷ್ ಮಾತನಾಡಿದರು. ರಾಜಯೋಗಿ ಡಾ.ಬಿ.ಕೆ.ಪ್ರೇಮ ಅಣ್ಣ, ಶಾಸಕ ಎಂ.ವೈ.ಪಾಟೀಲ್, ಶರಣಬಸವ ವಿವಿ ನಿರ್ದೇಶಕ ಪ್ರೊ.ವಿ.ಡಿ.ಮೈತ್ರಿ, ಡಾ.ಶುಭಾಂಗಿ, ದೇವಕಿ ನಂದನ, ಮೇಯರ್ ವರ್ಷಾ ಜಾನೆ, ಉಪ ಮೇಯರ್ ತೃಪ್ತಿ ಲಾಖೆ, ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ, ವೆಂಕಟೇಶ ಮಲಕೂಡ, ಪಂಡಿತರಾವ ಪವಾರ, ಅನಿರುದ್ಧ ಶೆಟ್ಟಿ, ಜಯಶ್ರೀ ಮತ್ತಿಮಡು, ಯಾದಗಿರಿ ಡಿಡಿಪಿಐ ಚನ್ನಬಸಪ್ಪ ಮುಧೋಳ, ಬಿ.ಕೆ.ಶಿವಲೀಲಾ, ಬಿ.ಕೆ.ರಾಗಿಣಿ, ಬಿ.ಕೆ.ಸವಿತಾ ಇತರರಿದ್ದರು.
ಸಂಸ್ಕಾರದ ಕೊರತೆಯಿಂದಾಗಿ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮಕ್ಕಳು, ಯುವಕರು ವ್ಯಸನಿಗಳಾಗುತ್ತಿದ್ದಾರೆ. ಸರಿದಾರಿಗೆ ತರಲು ಸಂಟಿತ, ಪ್ರಾಮಾಣಿಕ ಪ್ರಯತ್ನ ಅಗತ್ಯ.
ಕುಲಪತಿ, ಕೇಂದ್ರೀಯ ವಿವಿ ಕಲಬುರಗಿ.
ಭಾರತ ದೇಶ ಸುಂದರಗೊಳಿಸಲು ವ್ಯಸನ ಮುಕ್ತ ಭಾರತ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈವರೆಗೆ ನಾಲ್ಕು ಕೋಟಿ ಜನರನ್ನು ತಲುಪಲಾಗಿದೆ. ಇದೊಂದು ಸಾಮೂಹಿಕ, ಸಾರ್ವತ್ರಿಕ ಕಾರ್ಯಕ್ರಮವಾಗಬೇಕಿದೆ.