ತಾಂಬಾ ಗ್ರಾಮದಲ್ಲಿ ಸಿದ್ಧಸಿರಿ ಬಹುರಾಜ್ಯ ಬಹುಉದ್ದೇಶ ಸಹಕಾರಿ ಸೊಸೈಟಿ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗ್ರಾಹಕರನ್ನು ಸನ್ಮಾನಿಸಿದರು. ತಡವಲಗ ಗ್ರಾಮದ ಅಭಿನವ ಶಿವಾಚಾರ್ಯರು, ಮಲ್ಲಯ್ಯ ಸಾರಂಗಮಠ, ರಾಚಪ್ಪ ಗಳೇದ ಮತ್ತಿತರರಿದ್ದರು.
- ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ
- ತಾಂಬಾ ಗ್ರಾಮದಲ್ಲಿ ನೂತನ ಕಟ್ಟಡ ಉದ್ಘಾಟನೆ
ತಾಂಬಾ: ಸಿದ್ಧಸಿರಿ ಬಹು ರಾಜ್ಯ ಬಹು ಉದ್ದೇಶ ಸಹಕಾರಿ ಸೊಸೈಟಿ ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಗ್ರಾಮದಲ್ಲಿ ಸಿದ್ಧಸಿರಿ ಬಹು ರಾಜ್ಯ ಬಹು ಉದ್ದೇಶ ಸಹಕಾರಿ ಸೊಸೈಟಿ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ಎರಡು ವರ್ಷಗಳಲ್ಲಿ ಸಿದ್ಧಸಿರಿ ಸೊಸೈಟಿ ನಿಮ್ಮೆಲ್ಲರ ಸಹಕಾರದಿಂದ ದೇಶದಲ್ಲಿಯೇ ಪ್ರಥಮ ಸ್ಥಾನಕ್ಕೆ ಬರಲಿದೆ. ಇಂಡಿ ತಾಲೂಕಿನಲ್ಲಿ ಸಿದ್ಧಸಿರಿ ಸಂಸ್ಥೆ 15 ಶಾಖೆ ಹೊಂದಿದ್ದು , ತಾಂಬಾ ಸೇರಿ 8 ಶಾಖೆಗಳಗೆ ಸ್ವಂತ ಕಟ್ಟಡಗಳಿವೆ. 15 ಶಾಖೆಗಳಲ್ಲಿ 4.84 ಕೋಟಿ ರೂ. 88 ಲಕ್ಷ ಠೇವಣಿ ಹೊಂದಿವೆ. ಅಲ್ಲದೆ ರಾಜ್ಯದ 212 ಶಾಖೆಗಳಲ್ಲಿ 52.20 ಕೋಟಿ ರೂ. 25ಲಕ್ಷ ಠೇವಣಿ ಇದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆಯಲು ಹಲವು ನಿಬಂಧನೆ ಇರುವುದರಿಂದ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಸಕಾಲದಲ್ಲಿ ಸೌಲಭ್ಯ ಸಿಗುವುದಿಲ್ಲ. ನೀಡುವ ಸಾಲದಿಂದಾಗಿ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಹೆಚ್ಚಿನ ಅನುಕೂಲವಾಗಿದೆ. ಈ ಭಾಗದಲ್ಲಿ ಸಿದ್ಧೇಶ್ವರ ಮೆಡಿಕಲ್ ಆರಂಭಿಸಲಾಗಿದ್ದು ಶೇ. 20ವರೆಗಿನ ರಿಯಾಯಿತಿ ದರದಲ್ಲಿ ಸೌಲಭ್ಯ ನೀಡುತ್ತೇವೆ ಇದರ ಸದುಪಯೋಗ ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದು ಎಂದು ಹೇಳಿದರು.
ಅಧ್ಯಕ್ಷ ರಾಮನಗೌಡ ಪಾಟೀಲ ಮಾತನಾಡಿ 20 ವರ್ಷಗಳಿಂದ ಸಂಸ್ಥೆಯು ಹೆಮ್ಮರವಾಗಿ ಬೆಳೆಯುವುದಕ್ಕೆ ನಮ್ಮ ತಂದೆಯ ಅವರ ದೂರದೃಷ್ಟಿ ಇಟ್ಟುಕೊಂಡು ಸಂಸ್ಥೆ ಬೆಳವಣೆಗೆಗೆ ಸಹಕರಿಸಿದ್ದಾರೆ. ಅಲ್ಲದೆ ಈಗಾಗಲೇ ಐದು ಸಾವಿರ ಯುವಕರಿಗೆ ಉದ್ಯೋಗ ನೀಡಲಾಗಿದೆ, ಸೊಸೈಟಿ ಗ್ರಾಮೀಣ ಭಾಗದಲ್ಲಿ ರೈತರು ಮತ್ತು ಸಣ್ಣ ವ್ಯಾಪಾರಸ್ಥರಿಗೆ ಹಣಕಾಸಿನ ಸೌಲಭ್ಯ ನೀಡುತ್ತಿದೆ. 2006 ರಲ್ಲಿ ಸ್ಥಾಪನೆಯಾದ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಸ್ಥೆ ಇಂದು ರಾಜ್ಯಾದ್ಯಂತ ಹೆಮ್ಮರವಾಗಿ ಬೆಳೆದು ಕೋಟ್ಯಂತರ ರೂ. ಠೇವಣಿ ಹೊಂದಿ ತನ್ನ ಗ್ರಾಹಕರಿಗೆ ಹೆಚ್ಚಿನ ಹಣದ ಸೌಲಭ್ಯವನ್ನು ಕಲ್ಪಿಸಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ರೈತರಿಗೆ ನೆರವಾಗಲು ಹೆಚ್ಚಿನ ಶಾಖೆಗಳನ್ನು ಹೊಂದಿದೆ. ಸಕ್ಕರೆ ಕಾರ್ಖಾನೆ ಮತ್ತು ಗೋಶಾಲೆ ಸೇರಿ ಮತ್ತಿತರ ಕ್ಷೇತ್ರದಲ್ಲಿ ಸಾರ್ವಜನಿಕರ ಸೇವೆ ಮಾಡುತ್ತ ಮುನ್ನುಗುತಿದೆ ಎಂದರು.
ತಡವಲಗ ಗ್ರಾಮದ ಅಭಿನವ ಶಿವಾಚಾರ್ಯರು, ಮಲ್ಲಯ್ಯ ಸಾರಂಗಮಠ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಚಪ್ಪ ಗಳೇದ, ಜಕ್ಕಪ್ಪ ಹತ್ತಳ್ಳಿ, ಗುರಲಿಂಗಪ್ಪ ಗೊರನಾಳ, ಈರಣ್ಣ ಬ್ಯಾಕೋಡ, ಕಾಂತನಗೌಡ ಪಾಟೀಲ, ಪ್ರಕಾಶ ಮುಂಜಿ, ಸಿದ್ದರಾಮಪ್ಪ ಕಲ್ಲೂರ, ಶ್ರೀಧರ ಉಕ್ಕಲಿ ಮತ್ತಿತರರಿದ್ದರು.