ಮುಳಬಾಗಿಲು cpm ಎಪಿಎಂಸಿ ಯಾರ್ಡ್ನ ಕೃಷಿಕ ಸಮಾಜದ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸಿಪಿಎಂ ಮುಖಂಡ ಸಿದ್ದನಹಳ್ಳಿ ಶೇಖರ್, ಸಿಪಿಎಂ ಪದ ರಾಜ್ಯ ಕಾರ್ಯದರ್ಶಿ ಕೆ. ಪ್ರಕಾಶ್, ತಾಲೂಕು ಕಾರ್ಯದರ್ಶಿ ಪುಣ್ಯಹಳ್ಳಿ ಪಿ.ಆರ್.ಶಂಕರ್, ಮುಖಂಡರಾದ ನವೀನ್, ವಿ. ಗೀತಾ, ಬಿ.ರಾಜ್ ಇದ್ದರು. ಮುಖಂಡರಾದ ವಿ. ಗೀತಾ, ನವೀನ್ ಇದ್ದರು.
ಮುಳಬಾಗಿಲು: ಕಾಂಗ್ರೆಸ್ ತ್ಯಜಿಸಿ, ಭಾರತ ಕಮ್ಯುನಿಸ್ಟ್ ಪದ (ಮಾರ್ಕ್ಸ್ವಾದಿ) ತತ್ವ cpm ಸಿದ್ಧಾಂತ ಒಪ್ಪಿಕೊಂಡು ಪ್ರಾಥಮಿಕ ಸದಸ್ಯತ್ವ ಪಡೆಯುವುದರ ಮೂಲಕ ತಾಲೂಕಿನಲ್ಲಿ ಸಿಪಿಎಂ ಪಮುನ್ನಡೆಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುವುದಾಗಿ ಮುಖಂಡ ಸಿದ್ದನಹಳ್ಳಿ ಶೇಖರ್ ತಿಳಿಸಿದರು.
ನಗರದ ಎಪಿಎಂಸಿ ಯಾರ್ಡ್ನ ಕೃಷಿಕ ಸಮಾಜದ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಕೊತ್ತೂರು ಜಿ.ಮಂಜುನಾಥ್ ಅವರ ಸಮಾಜ ಸೇವೆ ಕಂಡು ಅವರ ನಾಯಕತ್ವ ಬಲಪಡಿಸಲು ಈ ಹಿಂದೆ ಜೆಡಿಎಸ್ನಿಂದ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದೆ.
ಆದರೆ, ಕೊನೇ ಣಗಳಲ್ಲಿ ಬೇರೆ ಅಭ್ಯರ್ಥಿ ಘೋಷಣೆಯಾಗಿದ್ದು, ಅವರು ಪದ ಕೆಲ ಹಿರಿಯ ಮುಖಂಡರು ಮತ್ತು ನನ್ನನ್ನು ಕಡೆಗಣಿಸುತ್ತಾ ಬಂದಿದ್ದರಿಂದ, ಕಳೆದ ಲೋಕಸಭಾ ಚುನಾವಣೆಯಲ್ಲಿ ಏಕಪಯ ನಿರ್ಧಾರ ತೆಗೆದುಕೊಂಡಿದ್ದರಿಂದ, 2028ರ ವಿಧಾನಸಭಾ ಚುನಾವಣೆಯಲ್ಲಿ ಅವರೇ ಅಭ್ಯರ್ಥಿಯೆಂಬುದು ಬಿಂಬಿತವಾಗಿದ್ದರಿಂದ ಬೇಸರ ತರಿಸಿದೆ. ಆದ್ದರಿಂದ ರಾಜಕಾರಣ ಮುಂದುವರಿಸಲು ಸಿಪಿಎಂಗೆ ಸೇರ್ಪಡೆಯಾಗಿದ್ದೇನೆ ಎಂದು ತಿಳಿಸಿದರು.
ವೈ.ಗೊಲ್ಲಹಳ್ಳಿ ವಕೀಲ ವೆಂಕಟೇಶ್, ಎಚ್.ಕೋಡಹಳ್ಳಿ ಶ್ರೀನಿವಾಸ್, ಸಂಗಸಂದ್ರ ಎನ್. ರಾಮಚಂದ್ರ, ಎಸ್ಎ್ಐ ಅಧ್ಯ ಎನ್. ಶಿವಪ್ಪ, ಇದ್ದರು.