HK Patil on Karnataka Leadership Change
- ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ, ಈ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿದೆ
- ಡಿಕೆ ಶಿವಕುಮಾರ್ ಅವರು ಕರ್ನಾಟಕದ ಮುಂದಿನ ಸಿಎಂ
- ಬ್ರೇಕ್ ಫಾಸ್ಟ್ ಮೀಟಿಂಗ್ ನಂತರ ಮಹತ್ವದ ಹೇಳಿಕೆ ಕೊಟ್ಟ ಎಚ್ಕೆ ಪಾಟೀಲ್
ಬೆಂಗಳೂರು: 'ಹೈಕಮಾಂಡ್ ಮಟ್ಟದಲ್ಲಿ ಈಗಾಗಲೇ ಚರ್ಚೆಯಾಗಿ ತೀರ್ಮಾನಕ್ಕೆ ಬಂದಾಗಿದೆ. ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸೂಚನೆ ಕೊಟ್ಟಿದೆ ಎಂದು ಬ್ರೇಕ್ ಫಾಸ್ಟ್ ಮೀಟಿಂಗ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಮುಂದಿನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಸಹ ಹೈಕಮಾಂಡ್ ಸೂಚಿಸಿದೆ' ಎಂದು ಬ್ರೇಕ್ ಫಾಸ್ಟ್ ಮೀಟಿಂಗ್ ನಂತರ ಕಾನೂನು ಸಚಿವ ಎಚ್ಕೆ ಪಾಟೀಲ್(HK Patil) ಅವರು ಹೇಳಿದ್ದು ಹೀಗೆ.
ಕರ್ನಾಟಕ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಬಿರುಸಿನ ಚರ್ಚೆಗಳು ಮತ್ತು ಹೈಕಮಾಂಡ್ ಮಟ್ಟದ ಸರಣಿ ಸಭೆಗಳು ನಡೆಯುತ್ತಿರುವ ಬೆನ್ನಲ್ಲೇ, ರಾಜ್ಯದ ಹಿರಿಯ ಸಚಿವ ಎಚ್.ಕೆ. ಪಾಟೀಲ್ ಅವರು ಅತ್ಯಂತ ಮಹತ್ವದ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಚೇರಿಯಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಹಂಚಿಕೊಂಡಿದ್ದಾರೆ.
ಡಿಕೆ ಶಿವಕುಮಾರ್ ಮುಂದಿನ ಸಿಎಂ
'ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆದಿದೆ ಮತ್ತು ಹೈಕಮಾಂಡ್ ತಮಗೆ ರಾಜೀನಾಮೆ ನೀಡುವಂತೆ ಅವರಿಗೆ ಸೂಚಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ, ಹಾಗೂ ಮುಂದಿನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಸಹ ಹೈಕಮಾಂಡ್ ಸೂಚಿಸಿದೆ' ಎಂದು ಎಚ್ಕೆ ಪಾಟೀಲ್ ಅವರು ಹೇಳಿದರು.
ಮುಂದುವರೆದು, 'ಇಂದು ಸಿದ್ದರಾಮಯ್ಯ ಅವರು ಮೂರು ಗಂಟೆಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಲಿದ್ದಾರೆ. ಬ್ರೇಕ್ ಫಾಸ್ಟ್ ಮೀಟಿಂಗ್ನಲ್ಲಿ ನಾವೆಲ್ಲರೂ ತುಂಬಾ ಎಮೋಷನಲ್ ಆಗಿದ್ದೆವು. ಆದರೆ ಹೈಕಮಾಂಡ್ ನಿರ್ಧಾರ ಹಾಗೂ ಪಕ್ಷದ ಶಿಸ್ತಿಗೆ ನಾವೆಲ್ಲರೂ ಬದ್ಧರಾಗಿರಬೇಕಾಗುತ್ತದೆ' ಎಂದು ಎಚ್ಕೆ ಪಾಟೀಲ್ ಅವರು ಹೇಳಿದರು.
ಸಿದ್ದರಾಮಯ್ಯ ಭಾವುಕ ಮಾತು
ಕಳೆದ 20 ವರ್ಷದಲ್ಲಿ ನಾನು ನಿಮ್ಮ ಮೇಲೆ ರೇಗಾಡಿದ್ದರೆ ನನ್ನನ್ನು ಕ್ಷಮಿಸಿ. ಇದು ಪಕ್ಷಕ್ಕಾಗಿ ಮಾಡಿದ್ದಷ್ಟೆ ವೈಯಕ್ತಿಕ ಕಾರಣವಲ್ಲ. ಅದನ್ನು ಮನಸ್ಸಿಗೆ ತೆಗೆದುಕೊಂಡು ಕ್ಯಾರಿ ಮಾಡ್ಬೇಡಿ. ಇಲ್ಲಿಯೇ ಬಿಟ್ಟುಬಿಡಿ ಎಂದು ಭಾವುಕ ಮಾತನಾಡಿದ್ದಾರೆ ಎನ್ನುವುದು ವರದಿಯಾಗಿದೆ.