ಹಾಲುಮತದವರ ನತೆ ಹೆಚ್ಚಿಸಿದ ಸಿದ್ದರಾಮಯ್ಯ siddaramaiah
ಮುಳಬಾಗಿಲು: ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಈ ಕಾಲಘಟ್ಟದಲ್ಲಿ ಬಲು ಅಪರೂಪ. ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸೂಚನೆ ಮೇರೆಗೆ ಮರು ಮಾತನಾಡದೆ ರಾಜೀನಾಮೆ ನೀಡಿ, ಹಾಲುಮತ ಕುರುಬ ಸಮುದಾಯದ ಘನತೆ ಹೆಚ್ಚಿಸಿದ್ದಾರೆ ಎಂದು ರಾಜ್ಯ ಅಹಿಂದ ಮುಖಂಡ ಚನ್ನಾಪುರ ಎನ್.ವೆಂಕಟೇಶಗೌಡ ಹೇಳಿದರು. siddaramaiah
ನಗರದ ಕನಕ ಸಮುದಾಯ ಭವನದಲ್ಲಿ ತಾಲೂಕು ಕುರುಬರ ಸಂಘದಿಂದ ಸೋಮವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಒಪ್ಪಂದ ಮಾಡಿಕೊಂಡು ಮೊದಲ ಅವಧಿಗೆ ಅಧ್ಯಕ್ಷರಾದವರು ಸ್ಥಾನ ಬಿಟ್ಟುಕೊಡಲು ಹಿಂದೂ&ಮುಂದು ನೋಡುತ್ತಾರೆ. ಆದರೆ ರಾಜ್ಯದ ಮುಖ್ಯಮಂತ್ರಿ ತಕ್ಷಣ ರಾಜೀನಾಮೆ ನೀಡುವ ಮೂಲಕ ನುಡಿದಂತೆ ನಡೆದಿದ್ದಾರೆ ಎಂದರು.
ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪರಿಶ್ರಮ, ತ್ಯಾಗ, ಸಂಘಟನಾ ಚಾತುರ್ಯದಿಂದ ಮೇಲೆ ಬಂದಿದ್ದು, 2 ವರ್ಷಗಳ ಕಾಲ ಆಡಳಿತ ನಡೆಸಲಿದ್ದಾರೆ. ಕುರುಬ ಸಮುದಾಯದ ಯತೀಂದ್ರ ಸಿದ್ದರಾಮಯ್ಯಗೆ ಡಿಸಿಎಂ, ಬೈರತಿ ಸುರೇಶ್ ಹಾಗೂ ಮತ್ತೊಬ್ಬ ಕುರುಬ ಸಮುದಾಯದವರೆಗೆ ಮಂತ್ರಿ ಪದವಿ ಜತೆಗೆ ಯಾದವ ಸಮುದಾಯದ ಮುಖಂಡರು ಕೆಪಿಸಿಸಿ ಒಬಿಸಿ ಘಟಕದ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ್ ಅವರಿಗೂ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಮನವಿ ಮಾಡಿದರು.
ಗುಜ್ಜನಹಳ್ಳಿ ಸೋಮಣ್ಣ, ಶೆಟ್ಟಿಕಲ್ಲು ಶ್ರೀನಿವಾಸ್, ಸಿದ್ದನಹಳ್ಳಿ ಸುರೇಶ್ ಇದ್ದರು.