Siddaramaeshwara Swamy Fair is auspicious. 
ರಾಜ್ಯ

ಸಿದ್ದರಾಮೇಶ್ವರಸ್ವಾಮಿ ಜಾತ್ರೆ ಸಂಪನ್ನ

ಚೇಳೂರು: ತಾಲೂಕಿನ ಚೇಳೂರು ಹೋಬಳಿ ಶೂಲಯ್ಯನಪಾಳ್ಯ ಗ್ರಾಮದಲ್ಲಿ ನೆಲೆಸಿರುವ ಶ್ರೀ ಸಿದ್ದರಾಮೇಶ್ವರಸ್ವಾಮಿ ಗಣಪರ್ವದ ಕಾರ್ಯಕ್ರಮ ಸೋಮವಾರ ಅದ್ದೂರಿಯಾಗಿ ನೆರವೇರಿತು.
ಜಾತ್ರಾ ಮಹೋತ್ಸವದ ಪ್ರಯುಕ್ತ ಬೆಳಗ್ಗೆ ಪುಣ್ಯಹ ನಾಂದಿ, ಪಂಚಬ್ರಹ್ಮ ಕಲಶಪೂಜೆಯೊಂದಿಗೆ ರುದ್ರಾಭಿಷೇಕ, ಬಿಲ್ಲಾರ್ಚನೆಯೊಂದಿಗೆ, ಶ್ರೀ ಗುರು ಸಿದ್ದರಾಮೇಶ್ವರಸ್ವಾಮಿಯ ಅಪ್ಪಣೆ ಮೇರೆಗೆ ಬೆಳಗ್ಗೆ 11ಗಂಟೆಗೆ ಎಂ.ಎನ್​.ಕೋಟೆ ಶ್ರೀ ಬೀರಪ್ಪದೇವರು ಹಾಗೂ ಸಾಗಸಂದ್ರದ ಶ್ರೀ ಕೆಂಪಮ್ಮದೇವಿ ದೇವರ ಸಮ್ಮುಖದಲ್ಲಿ ಮಹಾಮಂಗಳಾರತಿ ನಂತರ ಮಧ್ಯಾಹ್ನ ಮಹಾದಾಸೋಹ ಏರ್ಪಡಿಸಲಾಗಿತ್ತು.
ಸಂಜೆ ಊರಿನ ರಾಜ ಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ಮನರಂಜಿಸುವ ಮದ್ದು ಬಾಣ ಬಿರುಸು ಕಾರ್ಯಕ್ರಮದೊಂದಿಗೆ ದೇವರ ಉತ್ಸವ ಆಯೋಜಿಸಲಾಗಿತ್ತು. ರಾತ್ರಿ ಬಿ.ಶಿವಕುಮಾರಸಾಸಿಗಳ ನಾದ ಸಂಗಮ ತಂಡದವರಿಂದ ಶ್ರೀ ಗುರುಸಿದ್ದರಾಮೇಶ್ವರರ ಕಥಾಮೃತ ಕಾರ್ಯಕ್ರಮ ನಡೆಯಿತು.
ಮೇ 5ರಂದು ಮಡೆ ಸೇವೆ ಏರ್ಪಡಿಸಿದೆ. ಬೆಳಗ್ಗೆ 11ಕ್ಕೆ ಶ್ರೀಕರಿಯಮ್ಮದೇವಿಗೆ ಕುಂಕುಮಾರ್ಚನೆ ಮಹಾಮಂಗಳಾರತಿ ಕಾರ್ಯಕ್ರಮ ನಂತರ ಮಧ್ಯಾಹ್ನ ಮಹಾ ದಾಸೋಹ ಆಯೋಜಿಸಲಾಗಿತ್ತು.