ಗುರುಮಠಕಲ್ ತಾಲೂಕಿನ ಕಡೆಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ರ‍್ಯಾಮಿಸ್ ಕೆಮಿಕಲ್ ಕಂಪನಿ ಕಾರ್ಮಿಕ ಅಯಾನ್ ಸಂಶೋದ್ದಿನ್ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಯಿತು.
- ಕಡೆಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಮತ್ತೊಂದು ಅವಘಡ
- ಅಯಾನ್ ಸಂಶೋದ್ದಿನ್ ಹುಮನಾಬಾದ್ (೨೧) ಉಸಿರಾಟದ ತೊಂದರೆಯಿAದ ತೀವ್ರ ಅಸ್ವಸ್ಥ
ಗುರುಮಠಕಲ್ ತಾಲೂಕಿನ ಕಡೆಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಅನೀಲ ಸೋರಿಕೆಯಿಂದ ಮೂವರು ಬಡ ಕಾರ್ಮಿಕರು ಮೃತಪಟ್ಟಿರುವ ನೋವು ತಣ್ಣಗಾಗುವ ಮುನ್ನವೇ ಗುರುವಾರ ಸಂಜೆ ಮತ್ತೊಂದು ಅವಘಡ ಸಂಭವಿಸಿದೆ.ರ‍್ಯಾಮಿಸ್ ಕೆಮಿಕಲ್ ಕಂಪನಿಯಲ್ಲಿ ರಾಸಾಯನಿಕ ವಸ್ತುಗಳನ್ನು ಅನ್‌ಲೋಡ್ ಮಾಡುವ ವೇಳೆ ಕಾರ್ಮಿಕ ಅಯಾನ್ ಸಂಶೋದ್ದಿನ್ ಹುಮನಾಬಾದ್ (೨೧) ಉಸಿರಾಟದ ತೊಂದರೆಯಿAದ ತೀವ್ರ ಅಸ್ವಸ್ಥಗೊಂಡಿದ್ದು, ಪ್ರಥಮ ಚಿಕಿತ್ಸೆ ನೀಡಿ ರಾಯಚೂರಿನ ರಿಮ್ಸï ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಕೈಗಾರಿಕೆ ಪ್ರದೇಶದ ೭೦ಕ್ಕೂ ಹೆಚ್ಚು ಕೆಮಿಕಲ್ ಕಂಪನಿಗಳಲ್ಲಿ ಯಾವಾಗ ಏನು ದುರ್ಘಟನೆ ನಡೆಯುತ್ತದೆಯೋ ಎಂಬ ಆತಂಕ ಸಾವಿರಾರು ಕಾರ್ಮಿಕರಲ್ಲಿ ಮನೆ ಮಾಡಿದೆ.
ಬುಧವಾರ ಬೆಳಗ್ಗೆ ಸಿಲ್ ಕೆಮಿಕಲ್ ಕಂಪನಿಯಲ್ಲಿ ಅನೀಲ ಸೋರಿಕೆಯಿಂದಾಗಿ ಮೂವರು ಮೃತಪಟ್ಟಿದ್ದರು. ಗಾಯಗೊಂಡ ಇಬ್ಬರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇಲ್ಲಿನ ಬಹುತೇಕ ಕಂಪನಿಗಳು ಕೈಗಾರಿಕಾ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದು ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಽಕಾರಿಗಳ ದಿವ್ಯ ನಿರ್ಲಕ್ಷ್ಯವೇ ಅಪರಾ-ತಪರಾಗಳಿಗೆ ಕಾರಣವಾಗುತ್ತಿದೆ.
ಅನೇಕ ದಿನಗಳಿಂದ ಇಲ್ಲಿ ಕೈಗಾರಿಕಾ ನಿಯಮಗಳನ್ನೇ ಪಾಲಿಸದೆ ಕಾರ್ಖಾನೆಗಳನ್ನು ನಡೆಸಲಾಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಅನೇಕ ಅವಘಡ ಸಂಭವಿಸಿವೆ. ಈ ಹಿಂದಿನ ಎರಡು ದುರ್ಘಟನೆಗಳಲ್ಲಿ ಆರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಮೇಲಿಂದ ಮೇಲೆ ಸಣ್ಣಪುಟ್ಟ ಘಟನೆ ಸಂಭವಿಸುತ್ತಿದ್ದರೂ ಮುಚ್ಚಿ ಹಾಕಲಾಗುತ್ತದೆ. ಕಾರಣ ಬೇರೆ ಬೇರೆ ರಾಜ್ಯದ ಕಾರ್ಮಿಕರೇ ಅಽಕವಾಗಿದ್ದರಿಂದ ವಿಷಯ ಹೊರಬರದಂತೆ ನೋಡಿಕೊಳ್ಳಲಾಗುತ್ತಿದೆ. ಸ್ಥಳೀಯರು ಮಾತ್ರ ಈ ವಿಷಯವಾಗಿ ಅನೇಕ ಸಲ ಜಿಲ್ಲಾಡಳಿತ ಮತ್ತು ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಕ್ರಮ ಜರುಗದ್ದರಿಂದ ಕಂಪನಿ ಮಾಲೀಕರಿಗೆ ಯಾವುದೇ ಅಂಜಿಕೆ ಇಲ್ಲದಂತಾಗಿದೆ.
ಹಳ್ಳಿಗರ ಬೇಡಿಕೆಗಳೇನು?
ತಕ್ಷಣವೇ ಸಂಬAಽತ ಕಂಪನಿ ಕಾರ್ಯಾಚರಣೆ ಸ್ಥಗಿತಗೊಳಿಸಿ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕು. ಎಲ್ಲ ಕೈಗಾರಿಕೆಗಳ ಸುರಕ್ಷತಾ ಪರಿಶೀಲನೆ ಸಾರ್ವಜನಿಕವಾಗಿ ಪ್ರಕಟಿಸಬೇಕು. ಬಾಽತ ಕಾರ್ಮಿಕನಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಹಾಗೂ ಸಮರ್ಪಕ ಪರಿಹಾರ ನೀಡಬೇಕು. ಕೈಗಾರಿಕಾ ಪ್ರದೇಶದ ವಿಷಕಾರಿ ವಾಯು, ನೀರು ಮತ್ತು ತ್ಯಾಜ್ಯ ಮಾಲಿನ್ಯದ ತುರ್ತು ಪರಿಶೀಲನೆ ನಡೆಸಬೇಕು. ಬಡವರ ಜೀವಗಳೊಂದಿಗೆ ಆಟವಾಡುವುದನ್ನು ನಿಲ್ಲಬೇಕು. ಕಡೆಚೂರು-ಬಾಡಿಯಾಳ ಪ್ರದೇಶವನ್ನು ವಿಷಮುಕ್ತಗೊಳಿಸಬೇಕು ಎಂಬುದೇ ಸುತ್ತಲಿನ ಹಳ್ಳಿ ಜನರ ಬೇಡಿಕೆಯಾಗಿದೆ.
ಸಿಲ್ ಕೆಮಿಕಲ್ ಕಂಪನಿ ವಿರುದ್ಧ ಪ್ರಕರಣ
ಕಡೆಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ಬೆಳಗ್ಗಿನ ಜಾವ ಸಂಭವಿಸಿದ ದುರ್ಘಟನೆಯಲ್ಲಿ ಮೂವರು ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆಗೆ ಸಂಬAಽಸಿದAತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತೀಶಕುಮಾರ ಸೈದಾಪುರ ಪೊಲೀಸ್ ಠಾಣೆಯಲ್ಲಿ ಸಿಲ್ ಕೆಮಿಕಲ್ ಕಂಪನಿ ವಿರುದ್ಧ ಬುಧವಾರ ರಾತ್ರಿ ಪ್ರಕರಣ ದಾಖಲಿಸಿದ್ದಾರೆ. ಕಂಪನಿ ಆಡಳಿತ ಮಂಡಳಿ ನಿರ್ಲಕ್ಷ್ಯ ಮತ್ತು ಸುರಕ್ಷತಾ ಕ್ರಮ ಪಾಲಿಸದ್ದರಿಂದ ಅವಘಡ ಸಂಭವಿಸಿದ್ದು, ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತ ಮೂವರು ಕಾರ್ಮಿಕರ ಶವಪರೀಕ್ಷೆ ನಂತರ ಬುಧವಾರ ತಡರಾತ್ರಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.