ಔರಾದ್, ಕಮಲನಗರ ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಅನಧಿಕೃತವಾಗಿ ನಡೆಯುತ್ತಿರುವ ಕೋಚಿಂಗ್ ಸೆಂಟರ್ಗಳನ್ನು ಬಂದ್ ಮಾಡುವಂತೆ ಒತ್ತಾಯಿಸಿ ಗುರುವಾರ ಬಿಇಒ ವಾಗಂಬರ್ ಗಾಯಕವಾಡ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಟಕದ ಕಾರ್ಯಕರ್ತರು ಮನವಿ ಸಲ್ಲಿಸಿದರು. ಅಧ್ಯಕ್ಷ ಅನೀಲ ದೇವಕತ್ತೆ, ಆಕಾಶ ಹಳವಿ, ರಾಹುಲ, ಸಾಗರ, ಆಕಾಶ ಮೇತ್ರೆ, ಅಶ್ವಿನ ಇತರರಿದ್ದರು.
ಔರಾದ್: ಪಟ್ಟಣ ಸೇರಿ ತಾಲೂಕಿನಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಕೋಚಿಂಗ್ ಸೆಂಟರ್ಗಳನ್ನು ಬಂದ್ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕ ಆಗ್ರಹಿಸಿದೆ. ಗುರುವಾರ ಕರವೇ ಕಾರ್ಯಕರ್ತರು ಬಿಇಒ ವಾಗಂಬರ್ ಗಾಯಕವಾಡ ಅವರಿಗೆ ಮನವಿಪತ್ರ ಸಲ್ಲಿಸಿ, ಶಾಲೆಗಳ ಅವಧಿಯನ್ನು ದುರ್ಬಳಕೆ ಮಾಡಿಕೊಂಡು ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಇಲಾಖೆ ಅನುಮತಿ ಪಡೆಯದೆ ಅನಧಿಕೃತವಾಗಿ ಕೋಚಿಂಗ್ ಸೆಂಟರ್ ಆರಂಭಿಸಿ ಪಾಲಕರ ಬಳಿ ಮನಬಂದಂತೆ ಹಣ ವಸೂಲಿ ಮಾಡುತ್ತಿವೆ.ಆದ್ದರಿಂದ ಕೂಡಲೇ ಔರಾದ್ ಮತ್ತು ಕಮಲನಗರಗಳಲ್ಲಿ ತಲೆ ಎತ್ತಿದ ಅನಧಿಕೃತ ಕೋಚಿಂಗ್ ಸೆಂಟರ್ಗಳನ್ನು ಬಂದ್ ಮಾಡುವಂತೆ ಒತ್ತಾಯಿಸಿದರು. ಟಕದ ತಾಲೂಕು ಅಧ್ಯಕ್ಷ ಅನೀಲ ದೇವಕತ್ತೆ, ಆಕಾಶ ಹಳವಿ, ರಾಹುಲ, ಸಾಗರ, ಆಕಾಶ ಮೇತ್ರೆ, ಅಶ್ವಿನ ಇತರರಿದ್ದರು.