ರೇವಗ್ಗಿ (ರಟಕಲ್) ರೇವಣಸಿದ್ಧೇಶ್ವರ ಗುಡ್ಡದಲ್ಲಿ ಅಸಂಖ್ಯಾತ ಭಕ್ತರ ಜೈೂಷದ ಮಧ್ಯೆ ಸಂಭ್ರಮದಿಂದ ಮಹಾರಥೋತ್ಸವ ನಡೆಯಿತು. 02&03ಕಾಳಗಿ 2/ ವಿವಿಧ ಫಲಪುಷ್ಪಗಳಿಂದ ಅಲಂಕಾರಗೊಂಡಿರುವ ಶ್ರೀ ರೇವಣಸಿದ್ಧೇಶ್ವರ ಮೂರ್ತಿ.
- ರೇವಗ್ಗಿಯಲ್ಲಿ ಜಗದ್ಗುರುಗಳ ಜಯಂತ್ಯುತ್ಸವ ಸಂಭ್ರಮ
- ವಿಶೇಷ ಪೂಜೆ, ಅಭಿಷೇಕ
ಕಾಳಗಿ: ಕಲ್ಯಾಣ ಕರ್ನಾಟಕದ ಕೈಲಾಸ ರೇವಗ್ಗಿ (ರಟಕಲ್) ಗ್ರಾಮದಲ್ಲಿ ಜಗದ್ಗುರು ಶ್ರೀ ರೇವಣಸಿದ್ಧೇಶ್ವರ ಜಯಂತ್ಯುತ್ಸವ ನಿಮಿತ್ತ ಭಾನುವಾರ ಅಸಂಖ್ಯಾತ ಭಕ್ತರ ಜೈೂಷದೊಂದಿಗೆ ಮಹಾರಥೋತ್ಸವ ನಡೆಯಿತು.
ಶನಿವಾರ ರಾತ್ರಿಯಿಂದ ಭಾನುವಾರ ನಸುಕಿನ ಜಾವದವರೆಗೆ ಸೂಗುರ(ಕೆ) ಶ್ರೀ ಡಾ.ಚನ್ನರುದ್ರಮುನಿ ಶಿವಾಚಾರ್ಯ, ರಟಕಲ್ ಶ್ರೀ ರೇವಣಸಿದ್ಧ ಶಿವಾಚಾರ್ಯ, ಶ್ರೀ ನೀಲಕಂಠ ದೇವರು, ಚಿಂಚನಸೂರ ಶ್ರೀಗಳ ಸಾನ್ನಿಧ್ಯದಲ್ಲಿ ಆಕಾಶವಾಣಿ ಕಲಾವಿದರಿಂದ ಸಂಗೀತ, ಭಜನೆ ಕಾರ್ಯಕ್ರಮ ಜರುಗಿತು.
ಭಾನುವಾರ ಬೆಳಗ್ಗೆ ಅರ್ಚಕರಿಂದ ಶ್ರೀ ರೇವಣಸಿದ್ಧೇಶ್ವರ ಮೂರ್ತಿಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ನಂತರ ದೇವಸ್ಥಾನ ಆವರಣದಲ್ಲಿ ರಟಕಲ್ನ ಶ್ರೀ ರೇವಣಸಿದ್ಧ ಶಿವಾಚಾರ್ಯರ ನೇತೃತ್ವದಲ್ಲಿ ರಾಚೋಟೇಶ್ವರ ವೈದಿಕ ಬಳಗದ ಪ್ರಮುಖ ವಿವೇಕಾನಂದ ಬಸವನಗುಡಿ ರೇವಗ್ಗಿ ವೈದಿಕತ್ವದಲ್ಲಿ ಜಂಗಮ ವಟುಗಳಿಗೆ ಅಯ್ಯಾಚಾರ, ಲಿಂಗದೀೆ ನೀಡಲಾಯಿತು. ಮುತೆದೆಯರು ರೇಣುಕಾಚಾರ್ಯರನ್ನು ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡಿದರು.
ಸಂಜೆ ರೇವಗ್ಗಿ ಗ್ರಾಮದ ದೇವರಮನಿ ಮನೆಯಿಂದ ಕುಂಭದ ಮೆರವಣಿಗೆ ಹಾಗೂ ರೇವಗ್ಗಿ, ರಟಕಲ್, ಮುಕರಂಬ, ಗೊಣಗಿ, ಮಾವಿನಸೂರ, ಅರಣಕಲ್, ಕಂದಗೂಳ, ಬೆಡಸೂರ ಗ್ರಾಮಗಳಿಂದ ನಂದಿಕೋಲು, ಕಳಸ, ಮಿಣಿಯನ್ನು ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಸಂಜೆ ಗುಡ್ಡದಲ್ಲಿ ಅಸಂಖ್ಯಾತ ಭಕ್ತರ ಜೈೂಷದೊಂದಿಗೆ ಮಹಾರಥೋತ್ಸವ ನಡೆಯಿತು.
ನಿರಗುಡಿಯ ಶ್ರೀ ಹವಾಮಲ್ಲಿನಾಥ ಮಹಾರಾಜ, ರಟಕಲ್ನ ಶ್ರೀ ರೇವಣಸಿದ್ಧ ಶಿವಾಚಾರ್ಯ, ಶ್ರೀ ನೀಲಕಂಠ ದೇವರು, ಗೌರಿಗುಡ್ಡದ ಶ್ರೀ ರೇವಣಸಿದ್ಧ ಶರಣರು, ಚಂದನಕೇರದ ಶ್ರೀ ಅಭಿವನ ರಾಚೋಟೇಶ್ವರ ಶಿವಾಚಾರ್ಯ, ಸೇಡಂ ಎಸಿ ಹಾಗೂ ದೇವಸ್ಥಾನ ಸಮಿತಿ ಅಧ್ಯ ಪ್ರಭುರೆಡ್ಡಿ, ತಹಸೀಲ್ದಾರ್ ನಾಗನಾಥ ತರಗೆ, ದೇವಸ್ಥಾನ ಕಾರ್ಯದರ್ಶಿ ಸದಾಶಿವ ವಗ್ಗೆ, ಪ್ರಮುಖರಾದ ಶಿವರಾಜ ಪಾಟೀಲ್ ಗೊಣಗಿ, ಗಂಗಾಧರ ಬಸವನಗುಡಿ, ಶಂಕರ ಚೌಕಾ, ಸಾಗರ ಮಾವಿನಸೂರ, ರುದ್ರಶೆಟ್ಟಿ ಗುರಮಿಠಕಲ್, ದಯಾಸಾಗರ ಪಾಟೀಲ್, ನಾಗಣ್ಣ ಮೊಳಜಿ ಇತರರಿದ್ದರು.