ಯಾದಗಿರಿ ಸಮೀಪದ ವಡಗೇರಾ ಕ್ರಾಸ್​ ಬಳಿ ಶುಕ್ರವಾರ ನಡೆದ ರಾಮನವಮಿ ನಿಮಿತ್ತ ಸೀತಾರಾಮ ಕಲ್ಯಾಣ ಮಹೋತ್ಸವದಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್​, ವೇಣುಗೋಪಾಲ, ಕಾಂತು ಪಾಟೀಲ್​, ಶರಣಗೌಡ ಇತರರಿದ್ದರು. 
ರಾಜ್ಯ

ಮಾನವೀಯ ಮೌಲ್ಯ ನೀಡಿದ ಶ್ರೀರಾಮ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಪಿ.ವೇಣುಗೋಪಾಲ ಅಭಿಮತ
  • ಸೀತಾರಾಮ ಕಲ್ಯಾಣ ಮಹೋತ್ಸವ ಕಾರ್ಯಕ್ರಮ
ಯಾದಗಿರಿ: ಪ್ರಭು ಶ್ರೀರಾಮ ಅವರು ತಮ್ಮ ಬದುಕಿನುದ್ದಕ್ಕೂ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಧರ್ಮ ಮತ್ತು ಸತ್ಯದ ಹಾದಿಯಲ್ಲಿ ಸಾಗಿ ಇಡೀ ಮನುಕುಲಕ್ಕೆ ಮಾನವೀಯ ಮೌಲ್ಯ ನೀಡಿ ದಿಕ್ಸೂಚಿಯಾಗಿದ್ದಾರೆ ಎಂದು ರಾಮಕೃಷ್ಣ ವಿವೇಕಾನಂದ ಸೇವಾಶ್ರಮದ ಅಧ್ಯ ಪಿ.ವೇಣುಗೋಪಾಲ ಹೇಳಿದರು.
ನಗರದ ವಡಗೇರಾ ಕ್ರಾಸ್​ ಬಳಿ ಶುಕ್ರವಾರ ಜಿಲ್ಲಾ ಸೀತಾರಾಮ ಸೇವಾ ಸಮಿತಿ ಹಾಗೂ ಕಮ್ಮಜನ ಸೇವಾ ಸಮಿತಿಯಿಂದ ಹಮ್ಮಿಕೊಂಡ ಸೀತಾರಾಮ ಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿದ ಅವರು, ಶ್ರೀರಾಮರದ್ದು ಬಹುಮುಖ ವ್ಯಕ್ತಿತ್ವ, ವರ್ಣಾತೀತ ವ್ಯಕ್ತಿಯಾಗಿ ಸಮಾಜಕ್ಕೆ ವಿನಯ, ವಿವೇಕ, ಪಿತೃವಾಕ್ಯ ಪರಿಪಾಲನೆ, ಸ್ನೇಹಪರತೆ, ಧರ್ಮಾನುಸರಣೆಯಲ್ಲಿ ನಡೆದುಕೊಂಡು ಬಂದ ಅವರ ದೃಷ್ಟಾಂತವು ಮನಪರಿವರ್ತನೆಯ ಪ್ರತಿಕವಾಗಿದೆ ಎಂದು ತಿಳಿಸಿದರು.
ಆಗೀನ ಕಾಲದಲ್ಲಿಯೇ ಶ್ರೀರಾಮ ಅಧಿಕಾರ ಅಥವಾ ಸೌಲಭ್ಯಗಳಿಗಿಂತ ನೈತಿಕತೆ, ಕರ್ತವ್ಯ ಪ್ರೆ ಮತ್ತು ಜನ ಕಲ್ಯಾಣವೇ ಮುಖ್ಯವಾಗಿದೆ ಎಂದು ಅವರ ಬದುಕು ನಮಗೆ ದಾರಿ ದೀಪವಾಗಿದೆ. ಅವರ ಆಶಯಂತೆ ಶಾಂತಿ, ಸಾಮರಸ್ಯ, ಕಾಯಕತತ್ವ, ಆಧ್ಯಾತ್ಮಿಕತೆ ಮೈಗೂಡಿಸಿಕೊಂಡು ಪರೋಪಕಾರಿಯಾಗಿ ಬಾಳಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ಪಂಡಿತ ಮುರುಳಿಧರ ನೇತೃತ್ವದಲ್ಲಿ ಸೀತಾರಾಮ, ಲಣ, ಆಂಜನೇಯಸ್ವಾಮಿ ಮೂರ್ತಿಗಳಿಗೆ ವಿಶೇಷ ಪೂಜೆ ನಡೆಯಿತು. ಹೆಚ್ಚುವರಿ ಎಸ್​.ಪಿ.ಧರಣೇಶ, ಡಿವೈಎಸ್​ಪಿ ಭರತಕುಮಾರ ತಳವಾರ, ಶರಣಗೌಡ, ಸಮಿತಿ ಅಧ್ಯ ಪರಮೇಶ್ವರರಾವ್​, ವೈ. ಪ್ರಸಾದ, ಕೃಷ್ಣಾರಾವ್​, ಮುರುಳಿಕೃಷ್ಣ, ಶ್ರೀನಿವಾಸ. ವೈ., ಧನಂಜಯ, ಕೆ.ರಾಮು, ಬಿ.ಶ್ರೀನಿವಾಸ, ಮಹೇಶರಡ್ಡಿ ಮುದ್ನಾಳ್​, ಶ್ರೀನಿವಾಸ ಚೌದ್ರಿ, ಚನ್ನಾರಡ್ಡಿ ಬಿಳ್ಹಾರ, ಮಲ್ಲಣ್ಣಗೌಡ ಬಿಳ್ಹಾರ, ಅರ್ಚನಾ ಬಸರಡ್ಡಿ ಪಾಟೀಲ್​ ಅನಪೂರ, ನಾಗರತ್ನ ಕುಪ್ಪಿ, ಮಲ್ಲಣ್ಣಗೌಡ ಕೌಳೂರು, ಡಾ.ಶಿವಪುತ್ರರೆಡ್ಡಿ ಪಾಟೀಲ್​, ಮಹೇಂದ್ರಕುಮಾರ ಅನಪುರ, ಪತ್ರಕರ್ತ ಶಂಕರ ಅರುಣಿ, ರೈತ ಮುಖಂಡ ಕಾಂತು ಪಾಟೀಲ್​ ಇತರರಿದ್ದರು

ಪಿತೃವಾಕ್ಯ ಪರಿಪಾಲಕ ಶ್ರೀ ರಾಮಚಂದ್ರರು ತಂದೆ ಧಶರಥ ಮಹಾರಾಜರ ಆದೇಶದಂತೆ 14 ವರ್ಷ ವನವಾಸಕ್ಕೆ ತೆರಳಿ ಅಧಿಕಾರ, ಅಂತಸ್ಥಿನ ಆಶೆಯನ್ನೇ ತೊರೆದ ಮಾಹನ್​ ಸಾಧಕ. ಅವರ ಬದುಕಿನ ಆದರ್ಶ ಎಲ್ಲರಿಗೂ ಮಾದರಿ.

> ಚನ್ನಾರಡ್ಡಿ ಪಾಟೀಲ್​ ತುನ್ನೂರ

ಶಾಸಕರು, ಯಾದಗಿರಿ

.