Shri Purna, Heme Works of Navile Part
ಚಿಕ್ಕನಾಯಕನಹಳ್ಳಿ: ನವಿಲೇ ಭಾಗದ ಹೇಮಾವತಿ ನಾಲಾ ಕಾಮಗಾರಿ ತಿಂಗಳಾಂತ್ಯದೊಳಗೆ ಮುಗಿಯಲಿದ್ದು, ಜು.15ರಂದು ಇದರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ಗೃಹ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ 26 ಕೆರೆಗಳಿಗೆ ನೀರು ಹರಿಸುವ ಯೋಜನೆಯು ಆಯಾ ಕಾಲಘಟ್ಟದಲ್ಲಿ ಅವರವರ ಅವಧಿಯಲ್ಲಿ ಕಾಮಗಾರಿ ನಡೆದಿದ್ದು, ಇದರ ಲವಾಗಿ ಕಾಮಗಾರಿ ಸಂಪೂರ್ಣವಾಗುವ ಹಂತಕ್ಕೆ ತಲುಪಿದೆ. ದಬ್ಬೇಘಟ್ಟದ ಕೆರೆಯವರೆಗೆ ಚಾನಲ್ ಕೆಲಸವಾಗಿದ್ದು, ಉಳಿದ ಚಿಕ್ಕನಾಯಕನಹಳ್ಳಿ ಭಾಗಕ್ಕೆ ವರ್ಷಾಂತ್ಯಕ್ಕೆ ನೀರು ಹರಿಯಲಿದೆ ಎಂದರು. ಗೊರುರು ಡ್ಯಾಂ ನಿಂದ ತುಮಕೂರು ಭಾಗಕ್ಕೆ ನೀರು ಹರಿಸುವ ವೇಳೆಗೆ ಶೆಟ್ಟಿಕೆರೆ ಭಾಗಕ್ಕೆ ಹಾಗೂ ನವಿಲೇ ಭಾಗಕ್ಕೆ ನೀರನ್ನು ಹರಿಸಲಾಗುವುದು. ನೀರು ಹರಿಸಲು ಸಾಧ್ಯವಾಗುವಂತೆ ಈಗಾಗಲೇ ಹೂಳನ್ನು ತೆಗೆಸುವ ಕಾರ್ಯವು ನಡೆಯುತ್ತಿದ್ದು, ಪದೇಪದೆ ಹೂಳೆತ್ತುವ ಕೆಲಸದಿಂದ ಖರ್ಚು ಅಧಿಕವಾಗಿದೆ. ಆದ್ದರಿಂದ ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಅನುದಾನ ನೀಡಬೇಕೆಂದು ಮನವಿ ಮಾಡಲಾಗಿದೆ ಎಂದರು.