ಶ್ರೀ ಮಲ್ಲಿಕಾರ್ಜುನ ದೇವರಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿರುವುದು.
- ಕನ್ನಡಗಿಯಲ್ಲಿ ಜಾತ್ರೋತ್ಸವ ಸಂಭ್ರಮ
- ಸಾವಿರಾರು ಭಕ್ತರ ಜೈೂಷದೊಂದಿಗೆ ಪಲ್ಲಕ್ಕಿ ಉತ್ಸವ
ಕಾಳಗಿ: ಬೆಣ್ಣೆತೋರಾ ಜಲಾಶಯ ದಡದಲ್ಲಿರುವ ಕನ್ನಡಗಿಯಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಶ್ರಾವಣ ಎರಡನೇ ಸೋಮವಾರ ವೈಭವದಿಂದ ನಡೆಯಿತು.
ಬೆಳಗ್ಗೆ ಶ್ರೀ ಮಲ್ಲಿಕಾರ್ಜುನ ದೇವರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ, ಧಾರಾಭಿಷೇಕ, ಅಲಂಕಾರ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ದೇವಸ್ಥಾನ ಹಾಗೂ ಕರ್ತೃ ಗದ್ದುಗೆ ವಿವಿಧ ಪುಷ್ಪಗಳಿಂದ ಮಾಡಿದ್ದ ಅಲಂಕಾರ ಗಮನಸೆಳೆಯಿತು. ಅಪಾರ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಮಧ್ಯಾಹ್ನ ಹೇರೂರ (ಕೆ) ಗ್ರಾಮದ ಮುಖಂಡ ಬಸವರಾಜ ಪಾಟೀಲ್ ಹೇರೂರ ನೇತೃತ್ವದಲ್ಲಿ ಭಜನಾ ಮಂಡಳಿ ದೇವಸ್ಥಾನಕ್ಕೆ ತಲುಪುತ್ತಿದ್ದಂತೆ ಅಲಂಕೃತ ಕನ್ನಡಗಿ ಮಲ್ಲಿಕಾರ್ಜುನ ಪಲ್ಲಕ್ಕಿ ಉತ್ಸವ ಶುರುವಾಯಿತು. ಸಕಲ ವಾದ್ಯಮೇಳ, ಭಜನೆ, ನಂದಿಕೋಲು, ಪುರವಂತರ ಕುಣಿತದೊಂದಿಗೆ ದೇವಸ್ಥಾನ ಸುತ್ತಲೂ ಐದು ಸುತ್ತು ಭವ್ಯ ಮೆರವಣಿಗೆ ಜರುಗಿತು. ಶ್ರೀ ಮಲ್ಲಿಕಾರ್ಜುನ ಮಹಾರಾಜ್ಕಿ ಜೈ.. ಹರಹರ ಮಹಾದೇವ.. ಸೇರಿ ವಿವಿಧ ೂಷಣೆ ಮೊಳಗಿದವು. ಅಸಂಖ್ಯ ಭಕ್ತರು ಪಲ್ಲಕ್ಕಿಗೆ ಉತ್ತತ್ತಿ, ಬಾಳೆಹಣ್ಣು, ನಾಣ್ಯ ಸಮರ್ಪಿಸಿ ಕೃತಾರ್ಥರಾದರು.
ಸುಭಾಶಚಂದ್ರ ಮಾಲಿಪಾಟೀಲ ಕನ್ನಡಗಿ, ಬಸವರಾಜ ಪಾಟೀಲ್ ಹೇರೂರ, ಸಿದ್ದಣ್ಣ ತಳವಾರ, ಶಿವಕುಮಾರ ಪಾಟೀಲ್ ಹೇರೂರ, ವಿಜಯಕುಮಾರ ಪಾಟೀಲ್, ಚನ್ನವಿರಪ್ಪ ಮಾಲಿಪಾಟೀಲ್, ವಿಜಯಕುಮಾರ ಪೂಜಾರಿ, ಶಾಮರಾಯ ಕನ್ನಡಗಿ, ಗುರಲಿಂಗಪ್ಪ ಪಾಟೀಲ್, ಮಲ್ಲಣ್ಣ ನಾಯ್ಕೋಡಿ, ಶಾಂತಕುಮಾರ ತಳವಾರ, ಜಗದೀಶ ಜವಳಿ ರಾಜನಾಳ, ಎಚ್.ಬಿ.ಪಾಟೀಲ್, ಮಲ್ಲಿಕಾರ್ಜುನ ವಕೀಲ, ಮಲ್ಲಿನಾಥ ಪಾಟೀಲ್, ಸುಭಾಷ ಪಾಟೀಲ್, ಕೆ.ಕೆ.ಪಾಟೀಲ್, ಕೆ.ಸಿ.ಪಾಟೀಲ್, ಶಿವಕುಮಾರ ಪಾಟೀಲ್, ಶಿವರಾಜ ಬಿರಾದಾರ, ಶರಣಗೌಡ ಹರಕಂಚಿ, ಶಿವಾನಂದ ಮೂಲಗೆ, ಪ್ರಭು ಮಹಾಗಾಂವವಾಡಿ, ಸಂಜುಕುಮಾರ ಕನ್ನಡಗಿ, ಸಂತೋಷ ಹಿರೇಮಣಿ ಇತರರಿದ್ದರು.
ಪಿಎಸ್ಐ ತಿಮ್ಮಯ್ಯ ಬಿ.ಕೆ. ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು.