ಹುಮನಾಬಾದ್​ ತಾಲೂಕಿನ ಹಳ್ಳಿಖೇಡ(ಬಿ)ದ ಗುರುಸಿದ್ಧೇಶ್ವರ ಚಿಕ್ಕಮಠದಲ್ಲಿ ಶ್ರಾವಣ ಮಾಸ ನಿಮಿತ್ತ ಸೋಮವಾರ ಶ್ರೀ ಸಿದ್ಧೇಶ್ವರ ಗದ್ದುಗೆಗೆ ಪೀಠಾಧಿಪತಿ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು ವಿಶೇಷ ಪೂಜೆ ಸಲ್ಲಿಸಿದರು.  
ರಾಜ್ಯ

ಹಳ್ಳಿಖೇಡ(ಬಿ)ದಲ್ಲಿ ಶ್ರಾವಣ ಸಂಭ್ರಮ

ಹುಮನಾಬಾದ್​: ಪವಿತ್ರ ಶ್ರಾವಣ ಮಾಸದ ಎರಡನೇ ಸೋಮವಾರ ಹಳ್ಳಿಖೇಡ(ಬಿ)ದ ಗುರುಸಿದ್ಧೇಶ್ವರ ಚಿಕ್ಕಮಠದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜೆ ಕಾರ್ಯಗಳು ಜರುಗಿದವು. ಮಠದ ಪೀಠಾಧಿಪತಿ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು ಸಮ್ಮುಖದಲ್ಲಿ ಬೆಳಗ್ಗೆನಿಂದಲೇ ವಿಶೇಷ ಧಾರ್ಮಿಕ ವಿಧಿ- ವಿಧಾನಗಳು ಮತ್ತು ಪೂಜಾ ಕೈಂಕರ್ಯಗಳು ಜರುಗಿದವು. ಶ್ರೀ ಗುರುಸಿದ್ಧೇಶ್ವರ ಸ್ವಾಮಿಗಳಿಗೆ ವಿಶೇಷ ಅಭಿಷೇಕ, ಬಿಲ್ವಪತ್ರೆ ಅರ್ಚನೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಸುತ್ತಲಿನ ನಾನಾ ಗ್ರಾ ಮಗಳು ಹಾಗೂ ಪಟ್ಟಣಗಳಿಂದ ಆಗಮಿಸಿದ ಭಕ್ತರು ಸ್ವಾಮಿಗಳ ದರ್ಶನ ಪಡೆದು ಪುನೀತರಾದರು. ಹರ ಹರ ಮಹಾದೇವ ಹಾಗೂ ಗುರುಸಿದ್ಧೇಶ್ವರ ಮಹಾರಾಜ್​ ಕೀ ಜೈ ಎಂಬ ಭಕ್ತರ ಘೋಷಣೆಗಳು ಮೊಳಗಿದವು. ಆಗಮಿಸಿದ ಎಲ್ಲ ಭಕ್ತರಿಗೆ ಮಠದಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಬಾವಗಿಯ ಭದ್ರೇಶ್ವರ ಮಠದ ಶ್ರೀ ಶಿವುಕುಮಾರ ಸ್ವಾಮಿ, ಕಂಠಯ್ಯ ಸ್ವಾಮಿ, ಆನಂದ ಪುರಾಣಿಕ್​, ದತ್ತಾತ್ರಿ ಸಂಗಪ್ಪ, ನಾಗರಾಜ್​ ಸಿಂಧನಕೇರ ಹಾಗೂ ಭಕ್ತರು ಪಾಲ್ಗೊಂಡಿದ್ದರು.