ಪ್ರಮುಖ ಮುಖ್ಯಾಂಶಗಳು
ವಾರಾಣಸಿ: ಭಾರತದಧಾರ್ಮಿಕ ರಾಜಧಾನಿ ಎಂದುಪ್ರಸಿದ್ಧವಾಗಿರುವ ಕಾಶಿಯಲ್ಲಿಶಿವರಾತ್ರಿ ಸಂಭ್ರಮ ಮನೆ ಮಾಡಿದೆ.ವಿಶ್ವನಾಥಜ್ಯೋತಿರ್ಲಿಂಗ ದರ್ಶನಕ್ಕೆ ದೇಶದಮೂಲೆ ಮೂಲೆಗಳಿಂದ ಲಕ್ಷಾಂತರಭಕ್ತರು ಕಾಶಿಯತ್ತ ಧಾವಿಸುತ್ತಿದ್ದಾರೆ.ವಿಶೇಷವಾಗಿದಕ್ಷಿಣ ಭಾರತದಿಂದ ಆಗಮಿಸುತ್ತಿರುವಭಕ್ತರು ಕಾಶೀ ಜಗದ್ಗುರು ವಿಶ್ವಾರಾಧ್ಯಜಂಗಮವಾಡಿ ಮಠದಲ್ಲಿ ಬೀಡುಬಿಟ್ಟಿದ್ದಾರೆ.
ಶಿವರಾತ್ರಿಸಂದರ್ಭದಲ್ಲಿ ಕಾಶೀ ಪೀಠದಲ್ಲಿಮೂರು ದಿನಗಳ ವಿಶೇಷ ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿದ್ದು,ಶನಿವಾರ ನಡೆದವಿದ್ವತ್ ಸಭೆಯಲ್ಲಿ ಶ್ರೀಜಗದ್ಗುರುವಿಶ್ವಾರಾಧ್ಯ ವಿಶ್ವಭಾರತಿಪ್ರಶಸ್ತಿ,ಶ್ರೀಕೋಡಿಮಠಸಂಸ್ಕೃತ ಸಾಹಿತ್ಯ ಪ್ರಶಸ್ತಿ,ಆಚಾರ್ಯ ವ್ರಜವಲ್ಲಭದ್ವಿವೇದಿ ಶೈವಭಾರತಿ ಪ್ರಶಸ್ತಿ,ಸುಭಾಷ್ ಮಮಾಣೆಮಾತೃಶಕ್ತಿ ಪ್ರಶಸ್ತಿ ಮತ್ತಿತರಪುರಸ್ಕಾರಗಳನ್ನು ಕಾಶಿಯ ವಿವಿಧಪಂಡಿತರಿಗೆ ನೀಡಿ ಗೌರವಿಸಲಾಯಿತು.
ಇದೇವೇಳೆ ವಿಶೇಷವಾಗಿ ರಷ್ಯಾ ಮತ್ತುಉಕ್ರೇನ್‌ನಿಂದ ಆಗಮಿಸಿದ್ದ 9ಮಹಿಳೆಯರುಜಗದ್ಗುರು ಡಾ.ಚಂದ್ರಶೇಖರಶಿವಾಚಾರ್ಯ ಭಗವತ್ಪಾದರಸಾನ್ನಿಧ್ಯದಲ್ಲಿ ಇಷ್ಟಲಿಂಗದೀಕ್ಷೆ ಸ್ವೀಕರಿಸಿದರು.
ಶಿವರಾತ್ರಿನಿಮಿತ್ತ ಭಾನುವಾರ ಪ್ರಾತಃಕಾಲ4 ಗಂಟೆಯಿಂದಲೇಜಗದ್ಗುರು ವಿಶ್ವಾರಾಧ್ಯರಲಿಂಗೋದ್ಭವ ಮೂರ್ತಿಗೆ ಮಹಾರುದ್ರಾಭಿಷೇಕ,ಪೀಠದಲ್ಲಿರುವಎಲ್ಲ ಲಿಂಗೈಕ್ಯ ಜಗದ್ಗುರುಗಳಕರ್ತೃ ಗದ್ದುಗೆಗೆ ಹಾಗೂ ಕೈಲಾಸಮಂಟಪದಲ್ಲಿ ಸ್ಥಾಪನೆಯಾಗಿರುವಲಕ್ಷಾಂತರ ಲಿಂಗಗಳಿಗೆ ವಿಶೇಷಪೂಜೆ ಸಲ್ಲಿಸಲಾಗುವುದು.ನಂತರ ಜಂಗಮವಾಡಿಮಠದಿಂದ ಗಂಗಾನದಿಯ ದಶಾಶ್ವಮೇಧಘಾಟ್ ವರೆಗೆ ಮಹಾರಥೋತ್ಸವನಡೆಯಲಿದೆ.ಕರ್ನಾಟಕ ಸೇರಿದಂತೆವಿವಿಧೆಡೆಗಳಿಂದ ಬಂದಿರುವ ಜಾನಪದಕಲಾತಂಡಗಳು ಸಾಂಸ್ಕೃತಿಕ ಪ್ರದರ್ಶನನಡೆಯಲಿದೆ.
ಮಧ್ಯಾಹ್ನ 2 ಗಂಟೆಯಿಂದಉಭಯ ಜಗದ್ಗುರು ಸಾನ್ನಿಧ್ಯದಲ್ಲಿಸಾಮೂಹಿಕ ಇಷ್ಟಲಿಂಗ ಮಹಾಪೂಜೆನೆರವೇರಲಿದೆ.ರಾತ್ರಿ ಆಧ್ಯಾತ್ಮಿಕ,ಧಾಮಿಕ ಸಭೆ ಮತ್ತುಪಂಚಸೂತ್ರ ಕುರಿತು ಶಿವಕಥಾ ಪುರಾಣನಡೆಯಲಿದೆ.