ಹಿರೇನಂದಿ ಗ್ರಾಮದ ಶ್ರೀ ಬಸವೇಶ್ವರ ಕಾರ್ತಿಕ ಮಹೋತ್ಸವ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಶಿವ ಭಜನೆ ಕಾರ್ಯಕ್ರಮಕ್ಕೆ ಸಿದ್ದಲಿಂಗಯ್ಯ ಸ್ವಾಮೀಜಿ ಚಾಲನೆ ನೀಡಿದರು. ಶಿವಯ್ಯ ಪೂಜೇರಿ, ಸದಾನಂದಯ್ಯ ಪೂಜೇರಿ ಇತರರಿದ್ದರು.
ಮಮದಾಪುರ: ಶಿವನಾಮ ಸ್ಮರಣೆ, ಭಜನೆ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಬಹುದು ಎಂದು ತವಗ ಮಠದ ಬ್ರಹ್ಮ ಸಿದ್ದಲಿಂಗಯ್ಯ ಸ್ವಾಮೀಜಿ ಹೇಳಿದರು.
ಸಮೀಪದ ಹಿರೇನಂದಿ ಗ್ರಾಮದ ಶ್ರೀ ಬಸವೇಶ್ವರ ಕಾರ್ತಿಕ ಮಹೋತ್ಸವ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಶಿವ ಭಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೆಳಗ್ಗೆ ಶ್ರೀ ಬಸವೇಶ್ವರ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿತು. ಬಳಿಕ ಗ್ರಾಮಸ್ಥರು ನೈವೇದ್ಯ ಅರ್ಪಿಸಿದರು. ಸಂಜೆ ವಿವಿಧ ಗ್ರಾಮಸ್ಥರಿಂದ ಶಿವ ಭಜನೆ ಕಾರ್ಯಕ್ರಮ ಜರುಗಿತು. ರಾತ್ರಿ 8ಕ್ಕೆ ಸಿದ್ದಲಿಂಗಯ್ಯ ಸ್ವಾಮೀಜಿ ದೀಪೋತ್ಸವಕ್ಕೆ ಚಾಲನೆ ನೀಡಿದರು. ಬೆಳಗ್ಗೆ ಶ್ರೀಗಳು ಭವಿಷ್ಯ ನುಡಿಗಳು ಜರುಗಿತು. ಬಳಿಕ ಪಲ್ಲಕ್ಕಿ ಉತ್ಸವದೊಂದಿಗೆ ಶಿವ ಭಜನೆ ಮಂಗಲೋತ್ಸವಗೊಂಡಿತು. ಶಿವಯ್ಯ ಪೂಜೇರಿ, ಸದಾನಂದಯ್ಯ ಪೂಜೇರಿ, ಬಸವರಾಜ ಕಾರ್ಗಿ, ಬಸವರಾಜ ಅಂಕಲಗಿ, ಮಲ್ಲಿಕಾರ್ಜುನ ಮೂಲಿಮನಿ, ಈರಣ್ಣ ಕಟ್ಟಿಮನಿ ಇತರರಿದ್ದರು.
ಹಿರೇನಂದಿ ಗ್ರಾಮದ ಶ್ರೀ ಬಸವೇಶ್ವರ ಕಾರ್ತಿಕ ಮಹೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಶಿವ ಭಜನೆ ಕಾರ್ಯಕ್ರಮಕ್ಕೆ ಸಿದ್ದಲಿಂಗಯ್ಯ ಸ್ವಾಮೀಜಿ ಚಾಲನೆ ನೀಡಿದರು.