ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಮಹಾಶಿವರಾತ್ರಿಯಪರ್ವ ಕಾಲದಲ್ಲಿ ನಗರದೆಲ್ಲೆಡೆಶಿವನಾಮ ಸ್ಮರಣೆ ಕೇಳಿ ಬಂತು.ಶಿವರಾತ್ರಿಹಬ್ಬ ರಾತ್ರಿಯಲ್ಲಿ ಆಚರಿಸುವುದಾದರೂನಗರದಲ್ಲಿ ಬೆಳಗ್ಗಿನಿಂದಲೇಭಕ್ತರು ಶಿವನಾಮ ಸ್ಮರಣೆಯಲ್ಲಿತೊಡಗಿದ್ದರು. ಪ್ರಮುಖ ಶಿವಾಲಯಗಳಮುಂದೆ ಭಕ್ತ ಸಾಗರವೇ ಹರಿದುಬಂದಿತ್ತು.ಜಗದೀಶ್ವರನಾದಶಿವನು ಭಕ್ತರ ಪೂಜೆಗಾಗಿ ಲಿಂಗರೂಪದಲ್ಲಿ ಭೂಮಿಯ ಮೇಲೆ ಅವತರಿಸಿದಪುಣ್ಯದಿನವೇ ಶಿವರಾತ್ರಿ.ಕೋಟಿ ಸೂರ್ಯರತೇಜಸ್ಸಿಗೆ ಸಮನಾದ ಶಿವಲಿಂಗವನ್ನುಮಾಘ ಮಾಸದ ತ್ರಯೋದಶಿಯ ಮಹಾನಿಶಿಯಲ್ಲಿಪೂಜಿಸುವುದು ವಿಶೇಷ.ಅಂತಹ ಶಿವಲಿಂಗಗಳಿರುವದೇವಾಲಯಗಳಲ್ಲಿ ಭಕ್ತರು ಬೆಳಗಿನಿಂದಲೇಪೂಜೆ ಸಲ್ಲಿಸಲು ಸರತಿ ಸಾಲಿನಲ್ಲಿನಿಲ್ಲುತ್ತಿದ್ದ ದೃಶ್ಯ ನಗರದೆಲ್ಲೆಡೆಕಂಡು ಬಂತು.ಹಬ್ಬದ ಅಂಗವಾಗಿದೇವಾಲಯಗಳಲ್ಲಿ ವಿಶೇಷ ಪೂಜೆಮತ್ತು ಪ್ರಸಾದ ವಿತರಣೆಗೆ ವ್ಯವಸ್ಥೆಮಾಡಲಾಗಿತ್ತು.
ಬೆಂಗಳೂರಿನಗವಿಪುರಂನಲ್ಲಿರುವ ಪ್ರಾಚೀನಗವಿ ಗಂಗಾಧರೇಶ್ವರ ದೇವಾಲಯದಲ್ಲಿಬೆಳಗ್ಗಿನಿಂದಲೇ ಸಾವಿರಾರುಸಂಖ್ಯೆಯಲ್ಲಿ ಆಗಮಿಸಿದ ಭಕ್ತರುದೇವರ ದರ್ಶನ ಮಾಡಿ ಪುನೀತರಾದರು.ಬಸವನಗುಡಿಯಕಹಳೆ ಬಂಡೆ ಉದ್ಯಾನವನಕ್ಕೆಹೊಂದಿಕೊಂಡಿರುವ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಭಾನುವಾರಬೆಳಗ್ಗಿನಿಂದಲೇ ವಿಶೇಷ ರುದ್ರಾಭಿಷೇಕ,ಪೂಜೆ ನೆರವೇರಿಸಲಾಯಿತು.ಭಕ್ತಾದಿಗಳುದಿನಪೂರ್ತಿ ಆಗಮಿಸಿ ದೇವರ ದರ್ಶನಮಾಡಿದರು. ಮಲ್ಲೇಶ್ವರದಲ್ಲಿರುವದಕ್ಷಿಣ ನಂದಿ ತೀರ್ಥ ದೇವಾಲಯದಲ್ಲೂಭಕ್ತರ ಸಂಖ್ಯೆ ಹೆಚ್ಚಾಗಿತ್ತು. ನೈಸರ್ಗಿಕವಾಗಿಶಿವಲಿಂಗದ ಮೇಲೆ ನಂದಿ ಬಾಯಿಯಿಂದತೀರ್ಥ ಬೀಳುವುದು ಇಲ್ಲಿನ ವಿಶೇಷ.ಇದನ್ನುಕಣ್ತುಂಬಿಕೊಂಡು ಭಕ್ತರು ಭಕ್ತಿಮರೆದರು. ಮಲ್ಲೇಶ್ವರದಐತಿಹಾಸಿಕ ಕಾಡು ಮಲ್ಲೇಶ್ವರದೇವಾಲಯದಲ್ಲಿ ಜನರು ಕಿಲೋಮೀಟರ್ದೂರದವರೆಗೆ ಸರತಿ ಸಾಲಿನಲ್ಲಿನಿಂತು ದೇವರ ದರ್ಶನ ಪಡೆದರು.
ಹಳೇವಿಮಾನ ನಿಲ್ದಾಣ ರಸ್ತೆಯಲ್ಲಿರುವಬೃಹತ್ ಶಿವನ ಮೂರ್ತಿ ಇರುವದೇವಾಲಯಕ್ಕೆ ಬೆಳಗ್ಗಿನಿಂದಲೇಭಕ್ತರು ಆಗಮಿಸಿದರು.ದ್ವಾದಶಜ್ಯೋತಿರ್ಲಿಂಗಗಳ ಪ್ರತೀಕವಾಗಿರುವ12 ಶಿವಲಿಂಗಗಳದರ್ಶನ ಮಾಡಿ ಭಕ್ತರು ಪೂಜೆಸಲ್ಲಿಸಿದರು.ಹಲಸೂರಿನ ಐತಿಹಾಸಿಕಸೋಮೇಶ್ವರ ದೇವಾಲಯದಲ್ಲಿಬೆಳಗ್ಗಿನಿಂದಲೇ ಭಕ್ತರು ಬಂದುದೇವರ ದರ್ಶನ ಮಾಡಿದರು.ಶಿವರಾತ್ರಿಹಿನ್ನಲೆಯಲ್ಲಿ ಸೋಮೇಶ್ವರಸ್ವಾಮಿಗೆ ವಿವಿಧ ಲಪುಷ್ಪಗಳಿಂದಅಲಂಕರಿಸಲಾಗಿತ್ತು.
ವಿಭೂತಿಪುರವೀರಸಿಂಹಾಸನ ಮಠದಲ್ಲಿರುವ ಪ್ರಾಚೀನಶಿವಲಿಂಗಕ್ಕೆ ಡಾ.ಮಹಾಂತಲಿಂಗಶಿವಾಚಾರ್ಯ ಸ್ವಾಮಿಗಳು ಕ್ಷೀರಾಭಿಷೇಕಮಾಡಿ ಪೂಜೆ ಸಲ್ಲಿಸಿದರು.ನಂತರ ಆಗಮಿಸಿದಸಾವಿರಾರು ಭಕ್ತರು ಸ್ವತಃ ದೇವರಿಗೆಅಭಿಷೇಕ ಮಾಡಿ ಭಕ್ತಿ ಸಮರ್ಪಿಸಿದರು. ಇದೇ ವೇಳೆಶ್ರೀಮಠದಲ್ಲಿರುವ ಅಪರೂಪದ ಸ್ಪಟಿಕಲಿಂಗವನ್ನು ಭಕ್ತರ ದರ್ಶನಕ್ಕೆಇಡಲಾಗಿತ್ತು.ಸಂಜೆ ನಡೆದಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿಸಾವಿರಾರು ಜನ ಪಾಲ್ಗೊಂಡು ಪಂಚಾಕ್ಷರಿಮಂತ್ರ ಜಪ ಮಾಡಿದರು.
ಮಾಚೋಹಳ್ಳಿಯಲ್ಲಿರುವಐತಿಹಾಸಿಕ ಜೋಡಿ ರುದ್ರೇಶ್ವರದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿಅದ್ದೂರಿ ಜಾತ್ರೆ ನಡೆಯಿತು.ದೇವಾಲಯದಲ್ಲಿರುವ51 ಅಡಿಬೃಹತ್ ಶಿವನ ಮೂರ್ತಿಗೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿಪಾಲ್ಗೊಂಡ ಸಾವಿರಾರು ಭಕ್ತಾದಿಗಳಿಗೆಪ್ರಸಾದ ವಿತರಣೆ ಮಾಡಲಾಯಿತು.
ಪದ್ಮನಾಭನಗರದಲ್ಲಿರುವಮಂಜುನಾಥ ದೇವಾಲಯದಲ್ಲಿ ಬೆಳಗ್ಗಿನಿಂದಲೇಭಕ್ತರ ದಂಡು ದೇವರ ದರ್ಶನಕ್ಕಾಗಿಆಗಮಿಸಿತ್ತು. ಶಿವರಾತ್ರಿಅಂಗವಾಗಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.
ವಿದ್ಯಾರಣ್ಯಪುರದತಿಂಡ್ಲು ಗ್ರಾಮದ ಸತ್ಯಮೂರ್ತಿಶನೈಶ್ಚರ ದೇವಾಲಯದಲ್ಲಿರುವ ಶ್ರೀಬೋಗಾನಂದೀಶ್ವರ ದೇವರಿಗೆ ಶ್ರೀಕೆಂಪಣ್ಣ ಅಪ್ಪಾಜಿ ನೇತೃತ್ವದಲ್ಲಿಅಭಿಷೇಕ ಪ್ರಿಯ ಶಿವನಿಗೆ ಹಾಲು,ಮೊಸರು,ತುಪ್ಪ,ಜೇನುತುಪ್ಪಸಹಿತ ಲಪಂಚಾಮೃತ ಅಭಿಷೇಕನೆರವೇರಿಸಲಾಯಿತು.ಭಕ್ತಾದಿಗಳುಬೆಳಗ್ಗಿನಿಂದಲೇ ಆಗಮಿಸಿ ದೇವರದರ್ಶನ ಪಡೆದರು.
ಚಾಮರಾಜಪೇಟೆಯಲ್ಲಿರುವಪುರಾತನ ರಾಮೇಶ್ವರ ದೇವಾಲಯದಲ್ಲಿಶಿವರಾತ್ರಿ ಅಂಗವಾಗಿ ವಿಶೇಷಪೂಜೆ ಏರ್ಪಡಿಸಲಾಗಿತ್ತು. ರಾಮೇಶ್ವರಸ್ವಾಮಿಗೆ ಮಹಾರುದ್ರಾಭಿಷೇಕನೆರವೇರಿಸಲಾಯಿತು.ಭಕ್ತಾದಿಗಳುಬೆಳಗ್ಗಿನಿಂದ ಮಧ್ಯರಾತ್ರಿವರೆಗೆಆಗಮಿಸಿ ದೇವರ ದರ್ಶನ ಪಡೆದು,ಪೂಜೆ ಸಲ್ಲಿಸಿದರು.ಚಾಮರಾಜಪೇಟೆಯಬಿಬಿಎಂಪಿ ಮೈದಾನದ ಸಮೀಪ ಇರುವಮಹದೇಶ್ವರ ಸ್ವಾಮಿ ದೇವಾಲಯದಮುಂಭಾಗದಲ್ಲಿ ಪೆಂಡಾಲ್ ಹಾಕಿದೇವರನ್ನು ಪ್ರತಿಷ್ಠಾಪಿಸಿವಿಶೇಷ ಪೂಜೆ ಸಲ್ಲಿಸಲಾಯಿತು.ಕುರುಬರಹಳ್ಳಿಮತ್ತು ಮಲ್ಲತ್ತಹಳ್ಳಿಯಲ್ಲಿಸ್ಥಾಪಿಸಲಾಗಿದ್ದ ಬೃಹತ್ ಶಿವನಮೂರ್ತಿಗಳು ಎಲ್ಲರ ಗಮನ ಸೆಳೆದವು.
ಇನ್ನುಳಿದಂತೆನಗರದ ವಿವಿಧೆಡೆ ಇರುವ ಶಿವದೇವಾಲಯಗಳಲ್ಲಿ ವಿಶೇಷ ಪೂಜೆ,ಅಭಿಷೇಕ,ಮಹಿಳೆಯರಿಂದಶಿವಭಜನೆ, ಶಿವಸಹಸ್ರ ನಾಮಾವಳಿ ಪಠಣಗಳು ನಡೆದವು.ವಿವಿಧ ಬಡಾವಣೆಗಳಲ್ಲಿಶಿವರಾತ್ರಿ ಜಾಗರಣೆ ಅಂಗವಾಗಿರಾತ್ರಿ ವಿಶೇಷ ಧಾರ್ಮಿಕ,ಸಾಂಸ್ಕೃತಿಕಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.