29ಕ್ಕೆ ಮುಳಬಾಗಿಲಿನಲ್ಲಿ ಶಿವಾಜಿ ಜಯಂತಿ Shivaji Jayanti 
ರಾಜ್ಯ

29ಕ್ಕೆ ಮುಳಬಾಗಿಲಿನಲ್ಲಿ ಶಿವಾಜಿ ಜಯಂತಿ Shivaji Jayanti

ಮುಳಬಾಗಿಲು: ನಗರದಲ್ಲಿ ಮಾ.29ರಂದು ಹಿಂದೂ ಹೃದಯ ಸಾಮ್ರಾಟ್​ ಶಿವಾಜಿ ಮಹಾರಾಜರ ಜಯಂತಿ ಆಚರಿಸಲು ಹಿಂದೂಗಳು ಒಂದಾಗಬೇಕು. ನಾನೊಬ್ಬ ಹಿಂದೂ ಶಾಸಕನಾಗಿ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುತ್ತೇನೆ ಎಂದು ಜೆಡಿಎಸ್​ ಶಾಸಕ ಸಮೃದ್ಧಿ ವಿ.ಮಂಜುನಾಥ್​ ಹೇಳಿದರು. shivaji jayanthi
ನಗರದ ಪ್ರವಾಸಿ ಮಂದಿರದಲ್ಲಿ ಹಿಂದೂಪರ ಸಂಘಟನೆಗಳಿಂದ ಆಯೋಜಿಸಿದ್ದ ಶಿವಾಜಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಾರ್ಯಕ್ರಮದ ಯಶಸ್ವಿಗೆ ಕಾರ್ಯನಿರ್ವಹಿಸಿ ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದರು.
ಶಾಸಕರ ನೇತೃತ್ವದ ಜೆಡಿಎಸ್​ ಮುಖಂಡರು ವೇದಿಕೆಯಿಂದ ತೆರಳಿದ ನಂತರ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮತ್ತು 10 ನಿಮಿಷಕ್ಕೆ ಮಾಜಿ ಸಂಸದ ಎಸ್​.ಮುನಿಸ್ವಾಮಿ ಆಗಮಿಸಿ ಸಭೆ ಮುಂದುವರಿಸಿದ್ದು, ಜೆಡಿಎಸ್​, ಬಿಜೆಪಿ ಸಮನ್ವಯ ಕೊರತೆ ಎದ್ದು ಕಾಣುತ್ತಿತ್ತು.
ಮಾಜಿ ಸಂಸದ ಎಸ್​.ಮುನಿಸ್ವಾಮಿ ಮಾತನಾಡಿ, ಶಿವಾಜಿ ಜಯಂತಿ ಹಿಂದೂಗಳ ಹಬ್ಬವಾಗಿದೆ. ಕಾರ್ಯಕ್ರಮಕ್ಕೆ ಕಾಂಗ್ರೆಸ್​ ಮುಖಂಡ ವಿ.ಆದಿನಾರಾಯಣ ಸೇರಿ ಶಾಸಕರಾದ ಕೊತ್ತೂರು ಜಿ.ಮಂಜುನಾಥ್​, ಸಮೃದ್ಧಿ ವಿ.ಮಂಜುನಾಥ್​ ಎಲ್ಲ ರಾಜಕೀಯ ಪಕ್ಷಗಳ ಮುಖಂಡರನ್ನು ಆಹ್ವಾನ ಮಾಡಿ ಎಂಬ ಸಲಹೆಯನ್ನು ಸಂಘಟಕರಿಗೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಓಂ ಶಕ್ತಿ ಚಲಪತಿ ಮಾತನಾಡಿ, ಹಿಂದೂಪರ ಕಾರ್ಯಕ್ರಮಗಳಿಗೆ ಮುಳಬಾಗಿಲು ಮುಂಚೂಣಿಯಲ್ಲಿ ಇರುತ್ತದೆ. ಆದ್ದರಿಂದ ಶಿವಾಜಿ ಜಯಂತಿ ರಾಜ್ಯಕ್ಕೆ ಮಾದರಿಯಾಗಿರುವಂತೆ ಸಂಘಟನೆ ಮಾಡಬೇಕೆಂದು ತಿಳಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕಲ್ಲುಪಲ್ಲಿ ಸತೀಶ್​, ನಗರಸಭೆ ಮಾಜಿ ಸದಸ್ಯ ಎನ್​.ಎನ್​.ಮುನಿರಾಜು, ಕಾವೇರಿ ಸುರೇಶ್​, ಗ್ಯಾಸ್​ ರಘು ಬಿಜೆಪಿ, ಮುಖಂಡರಾದ ನಾಗರಾಜ್​, ಸುರೇಶ್​ ರಾಜು, ಅಶೋಕ್​, ಮೈಕ್​ ಶಂಕರ್​, ಕೆ.ಬಾಬು, ಹಿಂದೂಪರ ಸಂಘಟನೆಗಳ ಮುಖಂಡರಾದ ಕೆ.ಶಂಕರ್​ ಕೇಸರಿ, ವಿಶ್ವನಾಥ್​, ಶಕ್ತಿಪ್ರಸಾದ್​, ಕುಮಾರ್​ ಇತರರು ಇದ್ದರು.