ಮುನವಳ್ಳಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮೌನಾನುಷ್ಠಾನ ಕೆಗೊಂಡಿದ್ದ ಶಿವಪಂಚಾರಿ ಸ್ವಾಮೀಜಿಯನ್ನು ಸನ್ಮಾನಿಸಲಾಯಿತು. ಚಂದ್ರಶೇಖರ ಶಿವಾಚಾರ್ಯರು, ವೀರಭದ್ರ ಶಿವಯೋಗಿ ಶಿವಾಚಾರ್ಯರು, ಅಂಬರೀಷ ಯಲಿಗಾರ, ಉಮೇಶ ಬಾಳಿ, ರಮೇಶ ಗೋಮಾಡಿ ಇತರರಿದ್ದರು. 
ರಾಜ್ಯ

ಶಿವಪಂಚಾಕ್ಷರಿ ಸ್ವಾಮೀಜಿ ಚಿಂತನೆ ಶ್ಲಾಘನೀಯ

ವಿಜಯವಾಣಿ ಸುದ್ದಿಜಾಲ ಮುನವಳ್ಳಿ
ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಾಧನೆಗಳಿಗೆ ಅಧಿಕಮಾಸ ಪವಿತ್ರ ಕಾಲವಾಗಿದೆ. ಈ ಶುಭ ಸಂದರ್ಭದಲ್ಲಿ ಬುಡರಕಟ್ಟಿಯ ಶಿವಪಂಚಾರಿ ಸ್ವಾಮೀಜಿ ಕೆಗೊಂಡಿರುವ ಮೌನಾನುಷ್ಠಾನ ಭಕ್ತರಲ್ಲಿ ಭಕ್ತಿ, ಶ್ರದ್ಧೆ ಹಾಗೂ ಆತ್ಮಚಿಂತನೆಯ ಮನೋಭಾವ ಜಾಗತಗೊಳಿಸುವ ಮಹತ್ತರ ಸಾಧನೆಯಾಗಿದೆ ಎಂದು ಹುಕ್ಕೇರಿ ಗುರುಶಾಂತೇಶ್ವರ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅಧಿಕ ಮಾಸದ ಅಂಗವಾಗಿ ಬುಡರಕಟ್ಟಿಯ ಗುರು ಮಡಿವಾಳೇಶ್ವರಮಠದ ಶಿವ ಪಂಚಾರಿ ಸ್ವಾಮೀಜಿ ಆತ್ಮಶುದ್ಧಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಕೈಗೊಂಡಿದ್ದ ಮೌನಾನುಷ್ಠಾನ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಭಕ್ತಿ ಎಂದರೆ ದೇವರು ಹಾಗೂ ಗುರುಗಳ ಮೇಲಿರುವ ಪ್ರೀತಿ, ನಂಬಿಕೆ ಮತ್ತು ಸಮರ್ಪಣೆಯ ಭಾವ. ಶ್ರದ್ಧೆ ಎಂದರೆ ಯಾವುದೇ ಕಾರ್ಯವನ್ನು ಮನಸ್ಸಿನ ಏಕಾಗ್ರತೆ, ಆಸಕ್ತಿ ಮತ್ತು ನಿಷ್ಠೆಯಿಂದ ಮಾಡುವ ಗುಣವಾಗಿದೆ. ಇವರೆಡನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಆಧ್ಯಾತ್ಮಿಕ ಬೆಳವಣಿಗೆ ಜತೆಗೆ ಮನಸ್ಸಿಗೆ ಶಾಂತಿ, ಸಹನೆ ಮತ್ತು ಆತ್ಮವಿಶ್ವಾಸ ಲಭಿಸುತ್ತದೆ ಎಂದರು.
ಬುಡರಕಟ್ಟಿಯ ಶಿವಪಂಚಾರಿ ಸ್ವಾಮೀಜಿ ಮಾತನಾಡಿ, ನಾನು ಕೆಗೊಂಡ ಮೌನಾನುಷ್ಠಾನ ಯಾವುದೇ ವೆಯಕ್ತಿಕ ಪ್ರಚಾರಕ್ಕಾಗಲಿ ಅಥವಾ ಹೆಸರಿಗಾಗಲಿ ಅಲ್ಲ. ಲೋಕದ ಜನರ ಕಲ್ಯಾಣಕ್ಕಾಗಿ ಈ ಸಂಕಲ್ಪ ಮಾಡಿದ್ದೇನೆ ಎಂದರು.
ಎಂ.ಚಂದರಗಿ ಗುರುಗಡದೇಶ್ವರ ಹಿರೇಮಠದ ವೀರಭದ್ರ ಶಿವಯೋಗಿ ಶಿವಾಚಾರ್ಯರು, ಗರಗದ ಕುಮಾರದೇವರು, ಲಕ್ಕುಂಡಿಯ ಸಿದ್ಧಲಿಂಗೇಶ್ವರ ದೇವರು, ಸಹಕಾರಿ ಧುರೀಣ ಅಂಬರೀಷ ಯಲಿಗಾರ, ಉಮೇಶ ಬಾಳಿ, ರಮೇಶ ಗೋಮಾಡಿ, ಎಂ.ಆರ್​.ಗೋಪಶೆಟ್ಟಿ, ತಮ್ಮಣ್ಣ ಬಾಳಿ, ಸೋಮಶೇಖರ ಯಲಿಗಾರ, ಪುರಸಭೆ ಅಧ್ಯ ಈಶ್ವರ ಕರೀಕಟ್ಟಿ, ಶಿವಲಿಂಗಯ್ಯ ಹಿರೇಮಠ, ಅಶೋಕ ಪಟ್ಟಣಶೆಟ್ಟಿ, ಪ್ರಭು ಹನಸಿ, ಪ್ರಶಾಂತ ಉಜ್ಜಿನಕೊಪ್ಪ, ಚನ್ನಪ್ಪ ಯಲಬುರ್ಗಿ, ಕಲ್ಲಪ್ಪ ಕಿತ್ತೂರ, ನಾಗಪ್ಪ ಕಾಮಣ್ಣವರ,
ವೀರಯ್ಯಶಾಸ್ತ್ರಿ ಹೊರಕೇರಿಮಠ, ನಾಗರಾಜ ಗೋಪಶೆಟ್ಟಿ, ಡಾ. ಎಂ..ಬಿ.ಅಷ್ಟಗಿಮಠ, ವಿಠ್ಠಲ ನಲಗೆ, ಪ್ರಕಾಶ ಕಾಮಣ್ಣವರ, ಚಂದ್ರು ಹೋಳಿಮಠ ಇತರರಿದ್ದರು.