Shira is becoming a religious powerhouse
ಶಿರಾ : ಇಡೀ ರಾಜ್ಯದಲ್ಲೇ ಯಾವ ಜಿಲ್ಲೆಯಲ್ಲೂ ಇಲ್ಲದ ವಿಶಿಷ್ಟ ಇತಿಹಾಸವಿರುವ ಪ್ರದೇಶಗಳು ಶಿರಾದಲ್ಲಿ ಇವೆ. ಶಿವಾಜಿ ಮಹಾರಾಜರಿಂದ ಹಿಡಿದು ಗಂಗರು, ರಾಷ್ಟ್ರಕೂಟರು, ಹಾಯ್ಸಳರು ಮತ್ತು ಮೈಸೂರು ಮಹಾರಾಜರ ಆಳ್ವಿಕೆಯವರೆಗೂ ಶಿರಾದ ಅಂಬಾ ಭವಾನಿ ದೇವಾಲಯದ ಉಲ್ಲೇಖವಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದರು.
ಶಿರಾದಲ್ಲಿ ಉದ್ಘಾಟನೆಗೊಂಡಿರುವ ನೂತನ ಶ್ರೀ ಅಂಬಾ ಭವಾನಿ ಮತ್ತು ವೀರಾಂಜುನೇಯ ಸ್ವಾಮಿ ದೇವಾಲಯಕ್ಕೆ ದಂಪತಿ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ನಗರದಲ್ಲಿ ಒಂದು ಕಡೆ ದುರ್ಗಮ್ಮ ದೇವಿ ಮತ್ತೊಂದು ಕಡೆ ಭವಾನಮ್ಮ ದೇವಾಲಯಗಳ ನಿಮಾರ್ಣದೊಂದಿಗೆ ಒಂದು ಧಾರ್ಮಿಕ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ ಎಂದರು.
ಕಾಡುಗೊಲ್ಲರ ನಿಗಮದ ಅಧ್ಯಕ್ಷ ಹಾರೋಗೆರೆ ಮಹೇಶ್, ನಗರಸಭೆ ಸದಸ್ಯ ಅಜಯ್ ಕುಮಾರ್, ಧಾರ್ಮಿಕ ಮುಖಂಡ ಎಂ.ಜಿ.ಶ್ರೀನಿವಾಸ್ ಮೂರ್ತಿ ಇದ್ದರು.