ಕಡಬ ದೊರೆಸ್ವಾಮಿ ಅಯ್ಯಂಗಾರ್ ಅವರ ರಾಮಾಯಣ ಗ್ರಂಥವನ್ನು ಶ್ರೀಯದುಗಿರಿ ಯತಿರಾಜ ನಾರಾಯಣ್ ಜೀಯರ್ ಸ್ವಾಮಿಗಳು ಬಿಡುಗಡೆ ಮಾಡಿದರು. ಡಾ.ಎ.ನರಸಿಂಹನ್, ಶ್ರೀವತ್ಸನ್ ಮತ್ತಿತರರು ಉಪಸ್ಥಿತರಿದ್ದರು.  
ರಾಜ್ಯ

ಷಟ್ಪದಿ ರಾಮಾಯಣ ಗ್ರಂಥ ಬಿಡುಗಡೆ; ಯತಿರಾಜ ಮಠದಲ್ಲಿ ಕಾರ್ಯಕ್ರಮ

ಪ್ರಶಾಂತ ರಿಪ್ಪನ್​ಪೇಟೆ

ಪ್ರಮುಖ ಮುಖ್ಯಾಂಶಗಳು

  • ಷಟ್ಪದಿ ರಾಮಾಯಣ ಗ್ರಂಥ ಬಿಡುಗಡೆ
  • ಮಲ್ಲೇಶ್ವರದ ಯತಿರಾಜ ಮಠದಲ್ಲಿ ಕಾರ್ಯಕ್ರಮ
  • ಶ್ರೀ ನಾರಾಯಣ ಜೀಯರ್ ಸ್ವಾಮಿಗಳ ಸಾನ್ನಿಧ್ಯ

ಬೆಂಗಳೂರು:ಕಡಬದೊರೆಸ್ವಾಮಿ ಅಯ್ಯಂಗಾರ್ ನಡುಗನ್ನಡದಷಟ್ಪದಿಯಲ್ಲಿ ರಚಿಸಿದ ವಾಲ್ಮೀಕಿರಾಮಾಯಣದ ಮಹಾಗ್ರಂಥವನ್ನುಮಲ್ಲೇಶ್ವರದ ಶ್ರೀ ಯತಿರಾಜಮಠದಲ್ಲಿ ಬಿಡುಗಡೆ ಮಾಡಲಾಯಿತು.

ಶ್ರೀಯದುಗಿರಿಯತಿರಾಜ ಮಠದ ಪರಮಪೂಜ್ಯ ನಾರಾಯಣಜೀಯರ್ ಸ್ವಾಮಿಗಳ ಸಾನ್ನಿಧ್ಯದಲ್ಲಿನಡೆದ ಗ್ರಂಥ ಲೋಕಾರ್ಪಣೆಕಾರ್ಯಕ್ರಮದಲ್ಲಿ ಹಲವು ಗಣ್ಯರುಪಾಲ್ಗೊಂಡಿದ್ದರು.

ಹಿರಿಯರಾದಕಡಬ ದೊರೆಸ್ವಾಮಿಯವರ ಈ ಮಹತ್ವದಗ್ರಂಥವನ್ನು ಅವರ ಸೊಸೆ ರೇವತಿಸಂಪತ್ ಪ್ರಕಟಿಸುವ ಸಂಕಲ್ಪಗೈದು,ಆಚಾರ್ಯಯು.ವೆ.ಶ್ರೀವತ್ಸನ್ಸ್ವಾಮಿಯವರ ಮಾರ್ಗದರ್ಶನದಲ್ಲಿಯಶಸ್ವಿಗೊಳಿಸಿದರು. ಸನಾತನಧರ್ಮದ ಪರಂಪರೆಯನ್ನು ಉಳಿಸುವಪವಿತ್ರ ಕಾರ್ಯದ ಹಿಂದೆ ಗುರುಪ್ರಭಾಮಣಿಯವರ ಶ್ರಮ ಗಮನಾರ್ಹ.

ಸಮಾಂಭದಲ್ಲಿವಿದ್ವಾಂಸರಾದ ಡಾ..ನರಸಿಂಹನ್ಮತ್ತು ಶ್ರೀವತ್ಸನ್ ಗ್ರಂಥದವೈಶಿಷ್ಟ್ಯತೆ,ನಡುಗನ್ನಡದಸೊಗಸು ಮತ್ತು ರಾಮಾಯಣದ ಆಧ್ಯಾತ್ಮಿಕಮಹತ್ವವನ್ನು ವಿವರಿಸಿದರು.ಕಾರ್ಯಕ್ರಮದಲ್ಲಿಭಾರತೀಯ ವಿದ್ಯಾಭವನದ ಕಾರ್ಯದರ್ಶಿಜಿ.ಆರ್.ಸ್ವಾಮಿ,ಅಪಾರಸಾಹಿತ್ಯಾಸಕ್ತರು,ಭಕ್ತರುಹಾಗೂ ಗಣ್ಯರು ಪಾಲ್ಗೊಂಡಿದ್ದರು.