ನಗನೂರು ಗ್ರಾಮದಲ್ಲಿ ಏ.11 ಹಾಗೂ 12ರಂದು ನಡೆಯುವ ಶರಣಬಸವೇಶ್ವರರ 179ನೇ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಸೋಮವಾರ ಮಠದಲ್ಲಿ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. ಪೀಠಾಧಿಪತಿ ಶ್ರೀ ಶರಣಪ್ಪ ಶರಣರು, ಜಗದೀಶ ಶರಣರು, ಸೂರ್ಯಕಾಂತಯ್ಯ ಶಾಸಿ, ಶಂಕ್ರಣ್ಣ ವಣಿಕ್ಯಾಳ, ಹಳ್ಳೆಪ್ಪ ಹವಾಲ್ದಾರ, ಹೇಮರಡ್ಡಿ ಶಾಖಾನೂರ ಇದ್ದರು. 
ರಾಜ್ಯ

ಶರಣಬಸವೇಶ್ವರ ಜಾತ್ರೆ 11ರಿಂದ

ಪ್ರಮುಖ ಮುಖ್ಯಾಂಶಗಳು

  • ನಗನೂರನ ದಾಸೋಹ ಮಠದಲ್ಲಿ ಜಾತ್ರಾ ಮಹೋತ್ಸವದ ಭಿತ್ತಿಪತ್ರ ಬಿಡುಗಡೆ
ಕೆಂಭಾವಿ: ನಗನೂರು ಗ್ರಾಮದ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ 11 ಮತ್ತು 12ರಂದು ನಡೆಯಲಿದ್ದು, ಈ ಜಾತ್ರಾ ಮಹೋತ್ಸವದ ಭಿತ್ತಿಪತ್ರವನ್ನು ಬಿಡುಗಡೆ ಸೋಮವಾರ ದಾಸೋಮ ಮಠದಲ್ಲಿ ಮಾಡಲಾಯಿತು.
ಬಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದ ಪೀಠಾಧೀಶ ಶ್ರೀ ಶರಣಪ್ಪ ಶರಣರು, ಐತಿಹಾಸಿಕ ಹಿನ್ನೆಲೆಯುಳ್ಳ ಈ ದಾಸೋಹ ಮಠದ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ನಡೆಯಲಿದೆ.
ಜಾತ್ರೆ ನಿಮಿತ್ತ ಈಗಾಗಲೇ ಮಠದಲ್ಲಿ ಪುರಾಣ ಪ್ರವಚನ ಆರಂಭವಾಗಿದ್ದು, ನಿತ್ಯ ಪೂಜೆ, ಅಭಿಷೇಕ, ಬಿಲ್ವಾರ್ಚನೆ, ದಾಸೋಹ ಸೇರಿ ಹಲವು ಧರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಏ.11ರಂದು ಮಠದ ಆವರಣದಲ್ಲಿ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿವಂತೆ ಹೇಳಿದರು.
ಪುರಾಣಿಕ ಸೂರ್ಯಕಾಂತಯ್ಯ ಶಾಸಿ, ಶ್ರೀ ಜಗದೀಶ ಶರಣರು, ಜಿಪಂ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ, ಹಳ್ಳೆಪ್ಪ ಹವಾಲ್ದಾರ, ಹೇಮರೆಡ್ಡಿ ಶಾಖಾನೂರ, ಗೊಲ್ಲಳಪ್ಪ ತಿಪ್ಪಶೆಟ್ಟಿ, ಚನ್ನಬಸವ ದೇಸಾಯಿ, ಗುರಪ್ಪಗೌಡ ಪೊಲೀಸ್​ ಪಾಟೀಲ್​, ಶಿವಶಂಣಕರ ತಿಪ್ಪಶೆಟ್ಟಿ, ಶರಣಪ್ಪ ದೇಸಾಯಿ, ಮಲ್ಲಿಕಾರ್ಜುನ, ಬಸನಗೌಡ ವಣಕ್ಯಾಳ, ನಿಂಗನಗೌಡ, ರುದ್ರಗೌಡ ಇತರರಿದ್ದರು.