ಸೇಡಂನಲ್ಲಿ ನಡೆದ ವಕೀಲರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪದಾಧಿಕಾರಿಗಳು ವಿಜಯೋತ್ಸವ ನಡೆಸಿದರು. ಶರಣಬಸಪ್ಪ ಹಾಗರಗಿ, ಹೇಮಾವತಿ, ಭೀಮರಾಯ ದಂಡೋತಿ, ಶ್ರುತಿ ಕುಕ್ಕುಂದಾ, ಜಗದೇವಪ್ಪ ಭೀಮನಳ್ಳಿ ಇದ್ದರು.  
ರಾಜ್ಯ

ಶರಣಬಸಪ್ಪ ಅಧ್ಯಕ್ಷ, ಹೇಮಾವತಿ ಉಪಾಧ್ಯಕ್ಷೆ

ಪ್ರಮುಖ ಮುಖ್ಯಾಂಶಗಳು

  • ಸೇಡಂನಲ್ಲಿ ವಕೀಲರ ಸಂದ ಚುನಾವಣೆ
  • ಕೋರ್ಟ್​ ಆವರಣದಲ್ಲಿ ನ್ಯಾಯವಾದಿಗಳ ಸಂಭ್ರಮಾಚರಣೆ
ಸೇಡಂ :ವಕೀಲರ ಸಂದ ತಾಲೂಕು ಅಧ್ಯಕ್ಷರಾಗಿ ಶರಣಬಸಪ್ಪ ಹಾಗರಗಿ ಹಾಗೂ ಸಹ ಕಾರ್ಯದರ್ಶಿಯಾಗಿ ಶ್ರುತಿ ಕುಕ್ಕುಂದಾ ಸೋಮವಾರ ಅವಿರೋಧ ಆಯ್ಕೆಯಾದರು.
ನ್ಯಾಯಾಲಯ ಆವರಣದಲ್ಲಿನ ವಕೀಲರ ಸಂಘದ ಕಟ್ಟದಲ್ಲಿ ಸೋಮವಾರ ಬೆಳಗ್ಗೆ ಚುನಾವಣೆ ಪ್ರಕ್ರಿಯೆ ಹಮ್ಮಿಕೊಳ್ಳಲಾಯಿತು. ಅಧ್ಯಕ್ಷ ಹಾಗೂ ಸಹಕಾರ್ಯದರ್ಶಿ ಸ್ಥಾನಕ್ಕೆ ಶರಣಬಸಪ್ಪ ಹಾಗೂ ಶ್ರುತಿ ಮಾತ್ರ ನಾಪತ್ರ ಸಲ್ಲಿಸಿದ್ದರು, ಹೀಗಾಗಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು. ಇನ್ನುಳಿದಂತೆ ಉಪಾಧ್ಯಕ್ಷರಾಗಿ ಹೇಮಾವತಿ, ಕಾರ್ಯದರ್ಶಿಯಾಗಿ ಭೀಮರಾಯ ದಂಡೋತಿ, ಖಜಾಂಚಿಯಾಗಿ ಜಗದೇವಪ್ಪ ಭೀಮನಳ್ಳಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಪ್ರವಿಣ ಕುಲಕರ್ಣಿ ಕಾರ್ಯನಿರ್ವಹಿಸಿದರು.
ಫಲಿತಾಂಶ ಹೊರಬಿಳ್ಳುತ್ತಿದ್ದಂತೆ ವಕೀಲರು ಪರಸ್ಪರ ಸಿಹಿ ಹಂಚಿ ವಿಜಯೋತ್ಸವ ನಡೆಸಿದರು.
ಪ್ರಮುಖರಾದ ರಾಜೇಂದ್ರ ಮುನ್ನೂರ, ಅನಂತಯ್ಯ ಮುಸ್ತಾಜರ್​, ಸತೀಶ ಪಾಟೀಲ್​ ತರನಳ್ಳಿ, ವಿಜಯಕುಮಾರ ಮಿಸ್ಕಿನ್​, ಪ್ರವಿಣ್​ ಚವ್ಹಾಣ್​, ಮಹೇಂದ್ರರೆಡ್ಡಿ ಜಿಲ್ಲೆಡಪಲ್ಲಿ, ಶಂಕರಮಾನಂದ ಅವಂಟಿ, ನಾರಾಯಣ ಯಾನಾಗುಂದಿ, ನರೇಂದ್ರರೆಡ್ಡಿ, ಸಾಯಿರೆಡ್ಡಿ ಹೂವಿನಭಾವಿ, ರಾವೇಂದ್ರ ಮುಸ್ತಾಜರ್​, ಚಂದ್ರಕಲಾ ಇಂಜಳ್ಳಿಕರ್​, ಮೀನಾ ಸ್ಥಾವರಮಠ, ವಿಸಂತ ಪೂಜಾರಿ, ಸದಾಶಿವ ಬಳಗಾರ, ದತ್ತಾತ್ರೇಯ ಆಡಕಿ, ಅಂಕಿತ ಜೋಶಿ, ರಮೇಶ ಚವ್ಹಾಣ್​ ಇತರರಿದ್ದರು.