ಕಮಲಾಪುರದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಶ್ರೀ ಶಾಂತವೀರ ದೇವರು ಉದ್ಘಾಟಿಸಿದರು. ಶ್ರೀ ಶರಣ ಶಂಕರಲಿಂಗ ಮಹಾರಾಜ, ಶ್ರೀ ಅಲ್ಲಮಪ್ರಭುಲಿಂಗ ಶಿವಾಚಾರ್ಯ, ಬಸವರಾಜ ಮತ್ತಿಮಡು, ಬಸವರಾಜ ಪಾಟೀಲ್, ಶಿವಶೆಟ್ಟಿ ಪಾಟೀಲ್, ಗುರುಪಾದಪ್ಪ ಮಾಟೂರ ಇತರರಿದ್ದರು.
- ಶಾಸಕ ಬಸವರಾಜ ಮತ್ತಿಮಡು ಅನಿಸಿಕೆ
- ಕಮಲಾಪುರದಲ್ಲಿ ಬಸವ ಜಯಂತಿ ಧರ್ಮಸಭೆ
ಕಮಲಾಪುರ: ಬಸವಾದಿ ಶರಣರು ಸಮಾಜದಲ್ಲಿ ನೆಲೆಯೂರಿದ್ದ ಅಸಮಾನತೆ, ಲಿಂಗ ತಾರತಮ್ಯ, ಜಾತೀಯತೆ, ಮೌಡ್ಯತೆ ವಿರುದ್ಧ ಕ್ರಾಂತಿ ಮೊಳಗಿಸಿದ ಮಹಾತ್ಮರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಮಸೂದೆ ಜಾರಿಗೆ ತರುವ ಮೂಲಕ ಬಸವಣ್ಣ ಅವರ ಕಲ್ಪನೆಯ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಶ್ರೀ ಗುರುಶಾಂತಪ್ಪ ಮಾಲಿಪಾಟೀಲ್ ಕ್ರೀಡಾಂಗಣದಲ್ಲಿ ಜಗಜ್ಯೋತಿ ಬಸವೇಶ್ವರ ಸಮಿತಿಯಿಂದ ಶ್ರೀ ಬಸವೇಶ್ವರರ 893ನೇ ಜಯಂತಿ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ಮಹಿಳಾ ಮಸೂದೆಯಿಂದ ದೇಶದ ಅಸಂಖ್ಯಾತ ಸಿಯರಿಗೆ ರಾಜಕೀಯ ಪ್ರಾತಿನಿಧ್ಯ ಸಿಗಲಿದೆ. ಈ ಮೂಲಕ ಪ್ರತಿ ರಂಗದಲ್ಲೂ ಶ್ರೇಷ್ಠ ಸಾಧನೆ ಮಾಡಲು ಮತ್ತಷ್ಟು ಅನುಕೂಲವಾಗಲಿದೆ ಎಂದರು.
ಕಮಲಾಪುರದ ಶ್ರೀ ಶಾಂತವೀರ ದೇವರು, ಸೊಂತದ ಶ್ರೀ ಶರಣ ಶಂಕರಲಿಂಗ ಮಹಾರಾಜ, ನಾಗೂರಿನ ಶ್ರೀ ಅಲ್ಲಮಪ್ರಭುಲಿಂಗ ಶಿವಾಚಾರ್ಯ, ಜಿಪಂ ಮಾಜಿ ಸದಸ್ಯರಾದ ಬಸವರಾಜ ಮಾಲಿಪಾಟೀಲ್, ಶಿವಶೆಟ್ಟಿ ಪಾಟೀಲ್, ಪ್ರಮುಖರಾದ ಗಂಗಪ್ಪಗೌಡ ಪಾಟೀಲ್, ಸಿದ್ದಣ್ಣಗೌಡ ಪಾಟೀಲ್ ಧಮ್ಮೂರ, ಉದಯಕುಮಾರ ರಟಕಲ್, ವಿನೋದ ಪಾಟೀಲ್ ಸರಡಗಿ, ಶಿವಕುಮಾರ ದೋಶೆಟ್ಟಿ, ಪ್ರವಿಣ ಮುಚ್ಚಟ್ಟಿ, ಶರಣು ಕೋರಿ, ಭೀಮಶಾ ಕೆ. ಇತರರಿದ್ದರು.