ಶರಣ ಸಾಹಿತ್ಯ ಬಲಿಷ್ಠವಾಗಲು ಶ್ರಮ ಅಗತ್ಯ Sharan Sahitya  
ರಾಜ್ಯ

ಶರಣ ಸಾಹಿತ್ಯ ಬಲಿಷ್ಠವಾಗಲು ಶ್ರಮ ಅಗತ್ಯ Sharan Sahitya

ಮಡಿವಾಳ: ತಾಲೂಕು ಶರಣ ಸಾಹಿತ್ಯ ಪರಿಷತ್​ ಬಲಿಷ್ಠ್ಠವಾಗಿ ಬೆಳೆಯಬೇಕು. ಅದಕ್ಕೆ ಪೂರಕವಾದ ಸಂಪನ್ಮೂಲ ವ್ಯವಸ್ಥೆ ನೀಡಲು ದಾನಿಗಳು ತಾಲೂಕಿನಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಮಾಲೂರಿನಲ್ಲಿ ಏರ್ಪಡಿಸುವಂತಾಗಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾ.ಹಾ. ಶೇಖರಪ್ಪ ಹೇಳಿದರು. Sharan Sahitya
ಪಟ್ಟಣದ ಜೆಎಸ್​ಎಸ್​ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಮಾಲೂರು ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್​ ಸಭೆಯಲ್ಲಿ ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್ತಿನ ಸಲಹಾ ಸಮಿತಿಯ ಸದಸ್ಯರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ಎಂ.ವಿ.ಹನುಮಂತಯ್ಯ ಮಾತನಾಡಿ, ಶರಣ ಸಾಹಿತ್ಯ ಪರಿಷತ್ತಿನ ಧ್ಯೆಯೋದ್ದೇಶಗಳು ಸಾಧಿತವಾಗಬೇಕಾದರೆ ಶರಣರು ರಚಿಸಿದ ವಚನಗಳು ಜನಸಾಮಾನ್ಯರ ಮನ ಮುಟ್ಟಬೇಕು ಎಂದರು.
ಸಲಹಾ ಸಮಿತಿಯ ಸದಸ್ಯ, ಜೆಎಸ್​ಎಸ್​ ಶಿಕ್ಷಣ ಸಂಸ್ಥೆಗಳ ಸಂಯೋಜನಾಧಿಕಾರಿ ಎಸ್​.ಎಚ್​.ಮಹೇಶ್ವರಪ್ಪ ಮಾತನಾಡಿ, ಸುತ್ತೂರು ಶ್ರೀ ಕ್ಷೇತ್ರದ ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 1986ರಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ ಸಂದರ್ಭ ಸ್ಮರಿಸಿದರು. ಶರಣ ಸಾಹಿತ್ಯ ಹಳೆಯ ಮೈಸೂರು ಪ್ರಾಂತ್ಯದಲ್ಲಿ ಬಲಿಷ್ಠವಾಗಿ ಬೆಳೆಯುತ್ತಿದೆ. ಅದೇ ರೀತಿ ಕೋಲಾರ ಜಿಲ್ಲೆಯಲ್ಲಿಯೂ ಉತ್ಸಾಹಿ ಯುವಪಡೆ ಹಾಗೂ ತಾಲೂಕಿನ ಎಲ್ಲ ಸಮಾಜದ ಮುಖಂಡರ ಬೆಂಬಲದಿಂದ ಉನ್ನತ ಮಟ್ಟದಲ್ಲಿ ಬೆಳೆಸೋಣ ಎಂದು ತಿಳಿಸಿದರು.
ಶರಣ ಸಾಹಿತ್ಯ ಪರಿಷತ್​ ಹಿರಿಯ ಉಪಾಧ್ಯಕ್ಷ, ಸಾಹಿತಿ, ಗಾಯಕ, ಶಿಕ್ಷಕ ವೀರಭದ್ರಚಾರಿ ಮಾತನಾಡಿ, ಶರಣರ ಜಯಂತಿಗಳನ್ನು ಮಾಲೂರಿನ ಒಂದೇ ಕೇಂದ್ರದಲ್ಲಿ ಆಚರಿಸದೆ ಹೋಬಳಿಮಟ್ಟದ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲೂ ಆಚರಿಸಬೇಕು ಎಂದರು. ಪಿ.ಎಸ್​.ಪ್ರಸನ್ನ, ಎಂ.ನಾಗರಾಜಯ್ಯ, ಆರ್​.ಸಿ.ರವಿ, ನಾಗರಾಜ್​, ರಾಜಪ್ಪ ಸಿ,ಸೋಮಶೇಖರಯ್ಯ, ಪಂಪಾಪತಿ ಇತರರು ಇದ್ದರು.