ಶಹಾಬಾದ್​ನ ಎಸ್​.ಎಸ್​.ಮರಗೋಳ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕ್ರೀಡೆ, ಸಾಂಸತಿಕ, ರಾಷ್ಟ್ರೀಯ ಸೇವಾ ಯೋಜನೆಗಳ ಉದ್ಘಾಟನೆ ಸಮಾರಂಭದಲ್ಲಿ ಶೇಖ್​ ಸಾಹೀರಾ, ಡಾ.ಬಸವರಾಜ ಹಿರೇಮಠ, ಮಹ್ಮದ್​ ರಫೀಕ್​ ಬಾಗವಾನ್​, ರಮೇಶ ಭಟ್ಟ, ಡಾ.ವೆಂಕಟರಾಜಪ್ಪ, ರಾಮಣ್ಣ ಇಬ್ರಾಹಿಂಪುರ ಇದ್ದರು.  
ರಾಜ್ಯ

ಸತತ ಅಧ್ಯಯನದಿಂದ ಸಾರ್ಥಕ ಬದುಕು ರೂಪಿಸಿಕೊಳ್ಳಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಮುಖ್ಯಗುರು ಶೇಖ್​ ಸಾಹಿರಾ ಕರೆ
  • ಎಸ್​.ಎಸ್​.ಮರಗೋಳ ಕಾಲೇಜಿನಲ್ಲಿ ಕಾರ್ಯಕ್ರಮ
ಶಹಾಬಾದ್​: ಯುವ ವಯಸ್ಸಿನಲ್ಲಿ ಮನಸ್ಸಿನ ಆಕರ್ಷಣೆ ತಾತ್ಕಾಲಿವಾಗಿದ್ದು, ಅವುಗಳ ಹಿಂದೆ ಹೋದವರು ಜೀವನದಲ್ಲಿ ಯಶಸ್ಸು ಸಾಧಿಸಿದ ಉದಾಹರಣೆಗಳಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಸತತ ಅಧ್ಯಯನದಿಂದ ಸಾರ್ಥಕ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಎಂಡಿಎಂ ಶಾಲೆ ಮುಖ್ಯೋಪಾಧ್ಯಾಯಿನಿ ಶೇಖ್​ ಸಾಹೀರಾ ಹೇಳಿದರು.
ಎಸ್​.ಎಸ್​.ಮರಗೋಳ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ, ಹಾಗೂ ಕ್ರೀಡಾ, ಸಾಂಸತಿಕ, ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಸಮಯ ಪಾಲನೆಗೆ ಆದ್ಯತೆ ನೀಡಬೇಕು. ಕಠಿಣ ಪರಿಶ್ರಮ ಹಾಗೂ ಶ್ರೇಷ್ಠ ಗುರಿಯಿಂದ ಮಾತ್ರ ಬದುಕಿನಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.
ಪ್ರಾಚಾರ್ಯ ಡಾ.ಬಸವರಾಜ ಹಿರೇಮಠ ಮಾತನಾಡಿ, ಸಂಸ್ಥೆಯಿಂದ ಕಳೆದ 59 ವರ್ಷಗಳಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲಾಗುತ್ತಿದೆ. ಪ್ರತಿ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಾಗಿ ಎನ್​ಎಸ್​ಎಸ್​ ಟಕ ಆರಂಭಿಸಲಾಗಿದೆ ಎಂದರು.
ಪತ್ರಕರ್ತರ ಸಂದ ತಾಲೂಕು ಅಧ್ಯಕ್ಷ ರಮೇಶ ಭಟ್ಟ, ಮಿನಿ ರೋಸ್​ ಶಾಲೆ ಮುಖ್ಯೋಪಾಧ್ಯಾಯ ಪರಶುರಾಮ ಮುತ್ತಗಿ, ಉದ್ಯಮಿ ಮಹ್ಮದ್​ ರಫೀಕ್​ ಬಾಗವಾನ್​ ಮಾತನಾಡಿದರು.
ಡಾ.ವೆಂಕಟರಾಜಪ್ಪ, ರಾಮಣ್ಣ ಇಬ್ರಾಹಿಂಪುರ, ಡಾ.ಲಕ್ಷ$್ಮಣ ರಾಠೋಡ್​, ಡಾ.ಸುರೇಖಾ ನಾಟಿಕಾರ, ಶಿವಕುಮಾರ ಕುಸಾಳೆ, ಶಿವಶಂಕರ ಹಿರೇಮಠ, ಸಿದ್ರಾಮಪ್ಪ ಬಮ್ಮಶೆಟ್ಟಿ, ಕೆ.ಟಿ.ಚವ್ಹಾಣ್​, ಪ್ರವಿಣ, ಸಾಯಿರಾಮ, ಪ್ರಿಯಾ ಇತರರಿದ್ದರು.
ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ನಾಗರತ್ನ ಇಂಗಿನಶೆಟ್ಟಿ ಸ್ವಾಗತಿಸಿದರು. ಮಮತಾ ರಾಜಾಪುರ ನಿರೂಪಣೆ ಮಾಡಿದರು. ಪ್ರಿಯಂಕಾ ವಂದಿಸಿದರು.