ಹುಮನಾಬಾದ್ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸೇವಾ ನಿವೃತ್ತಿ ಹೊಂದಿದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಕಚೇರಿಯ ಚಾಲಕ ಶಂಕರಯ್ಯ ಸ್ವಾಮಿ ದಂಪತಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು. ಎಇಇ ಶೇಖರ ರಾಗಾ, ಎಇ ಸತೀಶಕುಮಾರ, ಅಲಿಮ್ ಜಮಾದಾರ, ವಿಜಯಕುಮಾರ, ಮಾಣಿಕ ನಾಗನಾಯಕ, ಓಂಕಾರ ಪಾಟೀಲ್, ಶಿವರಾಜ ಗೋರ್ಟಾ, ರೇವಣಸಿದ್ದಯ್ಯ ಸ್ವಾಮಿ ಇತರರಿದ್ದರು.
- ಎಇಇ ಶೇಖರ ರಾ ಅಭಿಮತ
- ಹುಮನಾಬಾದ್ನಲ್ಲಿ ಬೀಳ್ಕೊಡುಗೆ ಸಮಾರಂಭ
ಹುಮನಾಬಾದ್: ಪಟ್ಟಣದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದಲ್ಲಿ ವಾಹನ ಚಾಲಕರಾಗಿ ಸೇವೆ ಸಲ್ಲಿಸಿದ ಶಂಕರಯ್ಯ ಸ್ವಾಮಿ ಸೇವಾ ವಯೋನಿವೃತ್ತಿ ಹೊಂದಿರುವ ಹಿನ್ನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಜಿಪಂ ಎಇಇ ಶೇಖರ ರಾ ಮಾತನಾಡಿ, ಶಂಕರಯ್ಯ ಸ್ವಾಮಿ ಇಲಾಖೆಯಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕಾರು ಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಸಮಯ ಪ್ರೆ, ಕರ್ತವ್ಯನಿಷ್ಠೆ ಹಾಗೂ ಶಿಸ್ತುಬದ್ಧ ಕಾರ್ಯನಿರ್ವಹಣೆಯ ಮೂಲಕ ಇಲಾಖೆಗೆ ಉತ್ತಮ ಹೆಸರು ತಂದುಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಾಹನ ಚಾಲಕರ ಹುದ್ದೆ ಕೇವಲ ವಾಹನ ಚಲಾಯಿಸುವುದಕ್ಕೆ ಸೀಮಿತವಾಗಿರದೆ, ಅಧಿಕಾರಿಗಳು ಮತ್ತು ಸಿಬ್ಬಂದಿ ಸುರತ ಸಂಚಾರದ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವುದು ಶ್ಲಾನೀಯ ನಿವೃತ್ತಿಯ ನಂತರ ಆರೋಗ್ಯ, ನೆಮ್ಮದಿ ಮತ್ತು ಸಂತೋಷದ ಜೀವನ ಸಾಗಿಸಲಿ ಎಂದು ಶುಭ ಹಾರೈಸಿದರು.
ಎಇ ಸತೀಶಕುಮಾರ, ಪ್ರಥಮ ದರ್ಜೆ ಸಹಾಯಕ ಅಲಿಮ್ ಜಮಾದಾರ, ವಿಜಯಕುಮಾರ, ದ್ವೀತಿಯ ದರ್ಜೆ ಸಹಾಯಕ ಮಾಣಿಕ ನಾಗನಾಯಕ, ಓಂಕಾರ ಪಾಟೀಲ್, ಪ್ರಮುಖರಾದ ಶಿವರಾಜ ಗೋರ್ಟಾ, ರೇವಣಸಿದ್ದಯ್ಯ ಸ್ವಾಮಿ, ಪ್ರಭುರೆಡ್ಡಿ, ಕಚೇರಿಯ ಸಿಬ್ಬಂದಿಗಳಾದ ಸಿದ್ದು ಕಲ್ಲೂರ, ರಾಜು ಸ್ವಾಮಿ, ಶೈಲಜಾ ಇತರರಿದ್ದರು. ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯ ಮಲ್ಲಿಕಾರ್ಜುನ ಸಂಗಮಕರ ಸ್ವಾಗತಿಸಿ ನಿರೂಪಣೆ ಮಾಡಿದರು.