ಬೆಳಗಾವಿಯಲ್ಲಿ ಬುಧವಾರ ಶಂಕರಗೌಡ ಪಾಟೀಲ ಜನ್ಮದಿನ ಪ್ರಯುಕ್ತ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಎಸ್​.ಕಿವುಡಸಣ್ಣವರ, ಚಂದ್ರಕಾಂತ ಮಜಗಿ, ಎನ್​.ಆರ್​.ಲಾತೂರ ಇತರರಿದ್ದರು. 
ರಾಜ್ಯ

ಶಂಕರಗೌಡ ಪಾಟೀಲ ಜನ್ಮದಿನ ಸಂಭ್ರಮ

ಬೆಳಗಾವಿ: ಕರ್ನಾಟಕ ಸರ್ಕಾರದ ನಿಕಟಪೂರ್ವ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಜನ್ಮದಿನವನ್ನು ಬುಧವಾರ ಸರಳವಾಗಿ ಆಚರಿಸಲಾಯಿತು.
ಚನ್ನಮ್ಮ ವೃತ್ತದಲ್ಲಿರುವ ಗಣೇಶ ಮಂದಿರದಲ್ಲಿ ಹಿತೈಷಿಗಳು, ಆಪ್ತರು, ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಶಂಕರಗೌಡ ಪಾಟೀಲ ವಿಶೇಷ ಪೂಜೆ ಸಲ್ಲಿಸುವ ಮೂಲಕ, ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಬೇಡಿಕೊಳ್ಳುವ ಮೂಲಕ ಜನ್ಮದಿನ ಆಚರಿಸಿದರು.
ಹಿರಿಯ ವಕೀಲರಾದ ಎಸ್​.ಕಿವುಡಸಣ್ಣನವರ, ಚಂದ್ರಕಾಂತ ಮಜಗಿ, ಎನ್​.ಆರ್​.ಲಾತೂರ ಹಾಗೂ ನೀಲಕಂಠ ಮಾಸ್ತಮರಡಿ, ಮದನ ಭೈರಪ್ಪನವರ, ವಿಜಯ ಪಾಟೀಲ, ಸುನೀಲ ದೇಶಪಾಂಡೆ, ಗಜು ಮಿಸಾಳೆ, ಸಂದೀಪ ಕನ್ನುಕರಕ, ವೈಭವ ಖಾಡೆ ಪರೇಶ, ಶೇಖರ ಹಂಡೆ, ಈರಣ್ಣ ತಲ್ಲೂರು, ಸದಾನಂದ ಗುಂಟೆಪ್ಪನವರ, ರಂಜಿತ ಕಲಾಲ, ಓಂ ಭೈರಪ್ಪನವರ, ಪ್ರವಿಣ ಇತರರಿದ್ದರು.