ಗಂಗಾವತಿಯ ಉದ್ಭವ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ಬಣಗಾರ ಸಿಂಪಿ ಸಮಾಜದ 3ನೇ ವಾರ್ಷಿಕ ಮಹಾಸಭೆ ಮತ್ತು ಶ್ರೀ ಶಂಕರ ದಾಸೀಮಯ್ಯ ಜಯಂತ್ಯುತ್ಸವ ಜರುಗಿತು. ತಾಲೂಕು ಘಟಕದ ಅಧ್ಯಕ್ಷ ಹಾಲಪ್ಪ ಮೂರಶಿಳ್ಳಿನ್, ಖಜಾಂಚಿ ಗುರುಸಿದ್ದಪ್ಪ ನಾಗಲೀಕರ್, ಪ್ರಮುಖರಾದ ವೀರಭದ್ರಪ್ಪ ತುಪ್ಪದ್, ವೀರಣ್ಣ ಸೀರಿ, ಅಂದಾನಪ್ಪ ಚಳ್ಳಮರದ್ ಇತರರಿದ್ದರು.
ಗಂಗಾವತಿ: ಕಂಪ್ಲಿ ರಸ್ತೆಯ ಉದ್ಭವ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ಬಣಗಾರ ಸಿಂಪಿ ಸಮಾಜದ 3ನೇ ವಾರ್ಷಿಕ ಮಹಾಸಭೆ ಮತ್ತು ಶ್ರೀ ಶಂಕರ ದಾಸೀಮಯ್ಯ ಜಯಂತ್ಯುತ್ಸವ ಇತ್ತೀಚೆಗೆ ಜರುಗಿತು.
ಸಮಾಜದ ತಾಲೂಕು ಘಟಕದ ಅಧ್ಯಕ್ಷ ಹಾಲಪ್ಪ ಮೂರಶಿಳ್ಳಿನ್ ನೇತೃತ್ವದಲ್ಲಿ ಸಭೆಯಲ್ಲಿ ಸಮಾಜದ ಸಂಘಟನೆ, ಆಯ-ವ್ಯಯ ಪಟ್ಟಿ ಮಂಡನೆ, ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಜರುಗಿತು.
ಮಕ್ಕಳಿಂದ ವಚನ ಗಾಯನ, ಶ್ಲೋಕ, ಭರತನಾಟ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಮುಖರಾದ ನಾಗಪ್ಪ ನಾಗಲೀಕರ್ ಆನೆಗೊಂದಿ, ಶಿವಪ್ಪ ಆಲೂರು, ಬಾಬುರಾವ್ ಮೊರಬದ್, ವಿರೇಶ ಹುರಕಡ್ಲಿ, ಜಂಬಣ್ಣ ಗೂಗಲ್, ವೀರಣ್ಣ ನಾಗಲೀಕರ್, ಶರಣಬಸವರಾಜ ತಡಸದ, ಸಂಜೀವ ಗೋಕಾವಿ, ಸುಖಮುನಿ ನಾಗಲೀಕರ್, ಮಂಜುನಾಥ ನಾಗಲೀಕರ್, ಗಣೇಶ ನಾಗಲೀಕರ್, ಮಂಜುನಾಥ ಕೌಟಿ, ವಿರುಪಾಕ್ಷಪ್ಪ ಮಜ್ಜಗಿ, ಸಿದ್ದು ಚಳ್ಳಮರದ, ಪ್ರವೀಣ ಚಳ್ಳಮರದ್, ಎನ್.ಉಮೇಶ, ಬಸವರಾಜ ಆಲೂರ್, ಭಾರತಿ ಮೂರಶಿಳ್ಳಿನ, ವಿಜಯಲಕ್ಷ್ಮೀ ಮರೆಗುದ್ದಿ, ಅಕ್ಕಮ್ಮ ಬೇಲೂರು ಇತರರಿದ್ದರು.