ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ವೈಶಾಖಮಾಸದ ಬಾದಾಮಿ ಅಮಾವಾಸ್ಯೆಯಂದುಶನಿ ಜಯಂತಿಯನ್ನು ಆಚರಿಸಲಾಗುತ್ತಿದೆ.ವಿಶೇಷವೆಂಬಂತೆಈ ಬಾರಿ ಬಾದಾಮಿ ಅಮಾವಾಸ್ಯೆಶನಿವಾರವೇ ಬಂದಿರುವುದರಿಂದನಗರದೆಲ್ಲೆಡೆ ಶನಿ ಮಂದಿರಗಳಲ್ಲಿಸಂಭ್ರಮದಿಮದ ಶನೈಶ್ಚರ ಸ್ವಾಮಿಯಜಯಂತಿಯನ್ನು ಆಚರಿಸಲಾಯಿತು.
ಜಾತಕ,ಜ್ಯೋತಿಷ್ಯದಮೇಲೆ ನಂಬಿಗೆ ಇರುವ ಆಸ್ತಿಕ ಜನಗಳುಶನೇಶ್ವರ ಸ್ವಾಮಿಯನ್ನು ಭಕ್ತಿಯಿಂದಆರಾಧಿಸುತ್ತಾರೆ.ಅಂತೆಯೇ ಬಾದಾಮಿಅಮಾವಾಸ್ಯೆಯಂದು ಶನೈಶ್ಚರ ಸ್ವಾಮಿಯಜಯಂತಿಯನ್ನು ಅಷ್ಟೇ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ.ಅಪರೂಪವೆಂಬಂತೆಬಾದಾಮಿ ಅಮಾವಾಸ್ಯೆಯು ಶನಿವಾರಬಂದಿದ್ದು ಶನೇಶ್ವರನ ಭಕ್ತರಿಗೆಸಂಭ್ರಮವನ್ನು ಹೆಚ್ಚಿಸಿದೆ.ಸಾಮಾನ್ಯವಾಗಿಈ ರೀತಿ ಅಮಾವಾಸ್ಯೆಯಂದೇ ಶನಿದೇವರಜಯಂತಿ 12 ವರ್ಷದನಂತರ ಬರುತ್ತದೆ.ಆದ್ದರಿಂದಬೆಳಗ್ಗೆಯಿಂದಲೇ ನಗರದ ವಿವಿಧಬಡಾವಣೆಗಳಲ್ಲಿರುವ ಶನಿ ಮಂದಿರಗಳಲ್ಲಿವಿಶೇಷ ತಿಲ ತೈಲಾಭಿಷೇಕ,ನಂತರ ಅಲಂಕಾರಮಾಡಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.ಭಕ್ತರು ಸ್ವಾಮಿಯಸನ್ನಿಧಾನದಲ್ಲಿ ತಮ್ಮ ವಿವಿಧಇಷ್ಟಾರ್ಥವನ್ನು ಈಡೇರಿಸುವಂತೆಪ್ರಾರ್ಥಿಸಿ ಎಳ್ಳು ಬತ್ತಿಯನ್ನುಬೆಳಗಿ ಭಕ್ತಿ ಸಮರ್ಪಿಸಿದರು.ನಗರದ ಹಲವುಶನೈಶ್ಚರ ದೇವಾಲಯಗಳ ಮುಂದೆ ದೊಡ್ಡಸಂಖ್ಯೆಯಲ್ಲಿ ಭಕ್ತರು ಉದ್ದನೆಯಸರದಿ ಸಾಲಿನಲ್ಲಿ ನಿಂತು ದೇವರದರ್ಶನ ಮಾಡಿದರು.
ವಿದ್ಯಾರಣ್ಯಪುರದತಿಂಡ್ಲು ಶ್ರೀಸತ್ಯಮೂರ್ತಿಶನೈಶ್ಚರ ಸ್ವಾಮಿಗೆ ವಿಶೇಷ ಅಭಿಷೇಕಮಾಡಿ ದೇವರಿಗೆ ಅಲಂಕಾರ ಮಾಡಿಪೂಜೆ ಸಲ್ಲಿಸಲಾಯಿತು.ಶನಿ ಜಯಂತಿಹಿನ್ನೆಲೆಯಲ್ಲಿ ಭಗವಂತನಿಗೆಪ್ರಿಯವಾದ ಬಾದಾಮಿ ಸಮರ್ಪಿಸಲಾಯಿತು.
ತ್ಯಾಗರಾಜನಗರಶನಿದೇವದೇವರ ದೇವಸ್ಥಾನದಲ್ಲಿಶನಿ ಜಯಂತಿ ಅಂಗವಾಗಿ ಬೆಳಿಗ್ಗೆಅಷ್ಟದ್ರವ್ಯ ಹಾಗೂ ಪಂಚಾಮೃತಅಭಿಷೇಕ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕಕಾರ್ಯಕ್ರಮಗಳನ್ನು ನಡೆಸಲಾಯಿತು.
ಬೆಳಗ್ಗೆಯಿಂದಸಂಜೆವರೆಗೆ ಸುಮಾರು 10ಸಾವಿರಕ್ಕೂಅಧಿಕ ಭಕ್ತರು ದೇವಸ್ಥಾನಕ್ಕೆಆಗಮಿಸಿ ದೇವರ ದರ್ಶನ ಪಡೆದರು.ಆಗಮಿಸಿದ್ದಎಲ್ಲ ಭಕ್ತರಿಗೂ ಪ್ರಸಾದವಿತರಿಸಲಾಯಿತು.ವಿರೋಧ ಪಕ್ಷದನಾಯಕ ಆರ್.ಅಶೋಕ್,ಮಾಜಿ ಸಚಿವಹೆಚ್.ಡಿ.ರೇವಣ್ಣಹಾಗೂ ದೇವೇಗೌಡರ ಕುಟುಂಬ ಸದಸ್ಯರು,ಎಂಎಲ್ಸಿ ಶರವಣಸೇರಿದಂತೆ ಅನೇಕ ಗಣ್ಯರು ದೇವಾಲಯಕ್ಕೆಆಗಮಿಸಿ ದೇವರ ದರ್ಶನ ಪಡೆದರು.