Shamanism is not limited to one community.
ಕೊರಟಗೆರೆ: ರಾಜಕೀಯ ಮಾತ್ರವಲ್ಲದೇ ಧಾರ್ಮಿಕ ಮತ್ತು ಶೈಕ್ಷಣಿಕವಾಗಿ ನಾಡಿಗೆ ಸೇವೆ ಸಲ್ಲಿಸಿರುವ ಶಾಮನೂರು ಶಿವಶಂಕರಪ್ಪ ಅವರ ಸಾಧನೆ ಸ್ಮರಣೀಯ. ಅವರ ಅಗಲಿಕೆ ನಾಡಿಗೆ ಬಹುದೊಡ್ಡ ನಷ್ಟ ಉಂಟು ಮಾಡಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಪಿ.ವಿ.ವೀರಭದ್ರಯ್ಯ ಕಂಬನಿ ಮಿಡಿದರು.
ಪಟ್ಟಣದ ಮುಖ್ಯ ಸರ್ಕಲ್ನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ ದಾವಣಗೆರೆಯನ್ನು ಬಾಪೂಜಿ ಶಿಕ್ಷಣ ಸಂಸ್ಥೆಗಳ ಮೂಲಕ ಶೈಕ್ಷಣಿಕ ನಗರಿಯನ್ನಾಗಿಸಿದ ಕೀರ್ತಿ ಶಾಮನೂರು ಅವರಿಗೆ ಸಲ್ಲುತ್ತದೆ ಎಂದರು.
ಜಿಪಂ ಸದಸ್ಯೆ ಮಾಜಿ ದಾಕ್ಷಾಯಿಣಿ ರಾಜಣ್ಣ ಮಾತನಾಡಿ, ಶಿವಶಂಕರಪ್ಪನವರ ಸಾಧನೆ ಪ್ರತಿಯೊಬ್ಬರಿಗೂ ಆದರ್ಶನೀಯ. ಹಿರಿ ವಯಸ್ಸಿನಲ್ಲಿ ಸಾರ್ವಜನಿಕ ಜೀವನದಲ್ಲಿ ಮಾದರಿಯಾಗಿದ್ದರು ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಪ್ರಧಾನ ಕಾರ್ಯದರ್ಶಿಎಸ್.ಎಚ್.ಚನ್ನಬಸವ ಆರಾಧ್ಯ, ಸಹ ಕಾರ್ಯದರ್ಶಿ ಎಸ್.ಎಸ್.ಪವನ್ ಕುಮಾರ್, ಬಿ.ಎಸ್.ಶುಭಾ, ಖಜಾಂಚಿ ಜಿ.ಎಂ.ಶಿವಾನಂದ, ನಿದೇಶಕರಾದ ಡಿ.ಎಲ್.ಮಲ್ಲಯ್ಯ, ಉಮಾಸಂಕರಾಧ್ಯ, ಪಾಲನೇತ್ರಯ್ಯ,ಶಿವಕುಮಾರ್, ಚೆನ್ನಂಜಯ್ಯ, ಕೆ.ಆರ್.ಕಿರಣ್ ಕುಮಾರ್ ಇತರರು ಇದ್ದರು.