ಹುಮನಾಬಾದ್​ ತಾಲೂಕಿನ ಹುಡಗಿ ಗ್ರಾಮದ ಬಸವತೀರ್ಥ ವಿದ್ಯಾಪಿಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಯೋನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯ ವಿಜಯಕುಮಾರ ಶಹಾನೂರ ದಂಪತಿಯನ್ನು ಸನ್ಮಾನಿಸಲಾಯಿತು. ಕಂಟೆಪ್ಪ ದಾನಪ್ಪ, ಡಾ.ಸೋಮನಾಥ ಯಾಳವಾರ, ಬಸವಕುಮಾರ ಪಾಟೀಲ್​, ಕೇಶವರಾವ ತಳಟಕರ, ಮಲ್ಲಪ್ಪ ಮಾಳಶೇಟ್ಟಿ, ಅಣ್ಣರಾವ ಪಾಟೀಲ್​ ಇತರರಿದ್ದರು. 
ರಾಜ್ಯ

ಶಿಕ್ಷಣಕ್ಕೆ ಶಹಾನೂರ ಸೇವೆ ಮಹತ್ವದ್ದು

ಪ್ರಮುಖ ಮುಖ್ಯಾಂಶಗಳು

  • ಕಂಟೆಪ್ಪ ದಾನಾ ಅಭಿಪ್ರಾಯ
  • ಹುಡಗಿ ಗ್ರಾಮದಲ್ಲಿ ಮುಖ್ಯೋಪಾಧ್ಯಾಯರ ಬೀಳ್ಕೊಡುಗೆ ಕಾರ್ಯಕ್ರಮ
ಹುಮನಾಬಾದ್​: ಶಿಕ್ಷಕರಾಗಿ ಹಾಗೂ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿರುವ ವಿಜಯಕುಮಾರ ಶಹಾನೂರ ಅವರು ಶಿಸ್ತು, ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಫಲಿತಾಂಶಕ್ಕೆ ಆದ್ಯತೆ ನೀಡಿ ಶಾಲೆಗೆ ಉತ್ತಮ ಹೆಸರು ತಂದುಕೊಟ್ಟಿದ್ದಾರೆ ಎಂದು ಸಂಸ್ಥೆಯ ಕೇಂದ್ರ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನಾ ಹೇಳಿದರು.
ತಾಲೂಕಿನ ಹುಡಗಿ ಗ್ರಾಮದ ಬಸವತೀರ್ಥ ವಿದ್ಯಾಪಿಠ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಸೋಮವಾರ ವಯೋನಿವೃತ್ತ ಮುಖ್ಯೋಪಾಧ್ಯಾಯ ವಿಜಯಕುಮಾರ ಶಹಾನೂರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ಸಾಹಿತಿ ಡಾ.ಸೋಮನಾಥ ಯಾಳವಾರ, ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ್​ ಹಾಗೂ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಕೇಶವರಾವ ತಳಟಕರ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿರುವ ಶಹಾನೂರ ಅವರ ಸೇವೆ ಶಿಕ್ಷಣ ಕ್ಷೇತ್ರಕ್ಕೆ ಮಾದರಿಯಾಗಿದೆ. ನಿವೃತ್ತಿಯ ನಂತರವೂ ಅವರ ಅನುಭವ ಸಮಾಜಕ್ಕೆ ಮಾರ್ಗದರ್ಶನವಾಗಲಿ ಎಂದು ಹಾರೈಸಿದರು.
ಸ್ಥಳಿಯ ಸಮಿತಿ ಅಧ್ಯಕ್ಷ ಅಣ್ಣಾರಾವ ಪೊಲೀಸ್​ ಪಾಟೀಲ್​ ಅಧ್ಯತೆ ವಹಿಸಿದ್ದರು. ಪ್ರಮುಖರಾದ ಮಲ್ಲಪ್ಪ ಮಾಳಶೆಟ್ಟಿ, ಪಂಡಿತ ಬಾಳೂರೆ, ಮಲ್ಲಿಕಾರ್ಜುನ ಸಂಗಮಕರ, ಕಾಶೇಪ್ಪ ದಾನಪ್ಪ, ಮಹಾದೇವಯ್ಯ ಕಾವಡಿ, ಶಂಕರ ನಂದಿ, ಕಾಶೀನಾಥ ಕೊಡ್ಲಿ, ಉಮೇಶ ಪಾಟೀಲ್​, ಕರಬಸಪ್ಪ ಮೇಳಶೆಟ್ಟಿ, ಡಾ ಪ್ರಥ್ವಿರಾಜ ಹಣಂಶೆಟ್ಟಿ, ಡಾ ಶಾಂತಕುಮಾರ ಸಿದ್ದೇಶ್ವರ, ಗೌರಿಶಂಕರ ಪರ್ತಾಪುರ ಇತರರಿದ್ದರು.
ನಿವೃತ್ತ ಮುಖ್ಯೋಪಾಧ್ಯಾಯ ವಿಜಯಕುಮಾರ ಶಹಾನೂರ ದಂಪತಿಯನ್ನು ಹಾಗೂ ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.