ಶಹಾಪುರ ತಾಲೂಕಿನ ಭೀ.ಗುಡಿಯ ಕೃಷಿ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡ ಅಂತಿಮ ವರ್ಷದ ಬಿಎಸ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ರಾಯಚೂರಿನ ಶಿಕ್ಷಣ ನಿರ್ದೇಶಕ ಡಾ.ಗುರುರಾಜ ಸುಂಕದ ಉದ್ಘಾಟಿಸಿದರು. ಡಾ.ಶ್ಯಾಮರಾವ ಕುಲಕರ್ಣಿ, ಡಾ.ದಯಾನಂದ ಸಾತಿಹಾಳ, ಡಾ.ಸಂಗೀತಾ ಗಾಯಕವಾಡ, ಡಾ.ಸ್ನೇಹಲï ಗಿರಿ, ಡಾ.ಬಸವರಾಜ ಗಾಣಿಗೇರ ಇತರರಿದ್ದರು. 
ರಾಜ್ಯ

ಸೇವಾ ಮನೋಭಾವ ರೂಢಿಸಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಣ ನಿರ್ದೇಶಕ ಡಾ.ಗುರುರಾಜ ಸಲಹೆ
  • ಭೀ.ಗುಡಿ ಕೃಷಿ ಕಾಲೇಜಿನಲ್ಲಿ ಕಾರ್ಯಕ್ರಮ
ಶಹಾಪುರ: ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಮಯಪಾಲನೆ, ಪ್ರಾಮಾಣಿಕತೆ ಹಾಗೂ ಸಮಾಜಮುಖಿ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಕೃಷಿ ವಿe್ಞÁನಗಳ ವಿಶ್ವವಿದ್ಯಾಲಯದ ರಾಯಚೂರು ಶಿಕ್ಷಣ ನಿರ್ದೇಶಕ ಡಾ.ಗುರುರಾಜ ಸುಂಕದ ಹೇಳಿದರು.
ಇಲ್ಲಿಗೆ ಸಮೀಪದ ಭೀ.ಗುಡಿಯಲ್ಲಿರುವ ರಾಯಚೂರು ಅಽÃನದ ಕೃಷಿ ಮಹಾವಿದ್ಯಾಲಯದ ಕೃಷಿ ವಿe್ಞÁನಗಳ ವಿಶ್ವವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡ ಅಂತಿಮ ವರ್ಷದ ಬಿಎಸ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರe್ಞÁನಗಳನ್ನು ಅಳವಡಿಸಿಕೊಂಡು ರೈತರ ಸಮಸ್ಯೆಗಳಿಗೆ ವೈe್ಞÁನಿಕ ಪರಿಹಾರ ನೀಡುವ ಜವಾಬ್ದಾರಿ ಯುವ ಕೃಷಿ ಪದವೀಧರರ ಮೇಲಿದೆ. e್ಞÁನ, ಕೌಶಲ ಮತ್ತು ಉತ್ತಮ ವ್ಯಕ್ತಿತ್ವದ ಮೂಲಕ ಸಮಾಜದಲ್ಲಿ ಆದರ್ಶ ನಾಗರಿಕರಾಗಿ ಬೆಳೆಯಬೇಕು ಎಂದು ಅವರು ಕರೆ ನೀಡಿದರು.
ವಿಶೇಷ ಅತಿಥಿಗಳಾಗಿ ಮಾತನಾಡಿದ ಬಾಪುಗೌಡ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಶಿವಲಿಂಗಣ್ಣ ಸಾಹು, ವಿದ್ಯಾರ್ಥಿಗಳು ಜೀವನದಲ್ಲಿ ಸದಾ ಉತ್ಸಾಹ, ಆತ್ಮವಿಶ್ವಾಸ ಮತ್ತು ನಿರಂತರ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ಯಶಸ್ಸು ನಿರಂತರ ಪರಿಶ್ರಮ, ಧೈರ್ಯ ಮತ್ತು ಸಕಾರಾತ್ಮಕ ಚಿಂತನೆಯಿAದ ಮಾತ್ರ ಸಾಧ್ಯ. ಶಿಕ್ಷಣವು ಕೇವಲ ಪದವಿಗೆ ಸೀಮಿತವಾಗದೆ ಜೀವನ ಮೌಲ್ಯಗಳನ್ನು ಬೆಳೆಸುವ ಸಾಧನವಾಗಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಪ್ರಕಾಶ ಕುಚನೂರು, ಅಂತಿಮ ವರ್ಷದ ವಿದ್ಯಾರ್ಥಿಗಳು ಮಹಾವಿದ್ಯಾಲಯದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರಿಸಿಕೊAಡು ಸಮಾಜದಲ್ಲಿ ಉತ್ತಮ ಕೃಷಿ ವಿe್ಞÁನಿಗಳಾಗಿ, ಉದ್ಯಮಿಗಳಾಗಿ ಹಾಗೂ ಯಶಸ್ವಿ ನಾಗರಿಕರಾಗಿ ಬೆಳೆಯುವ ವಿಶ್ವಾಸ ವ್ಯಕ್ತಪಡಿಸಿ, ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು.
ಈ ವೇಳೆ ಶೈಕ್ಷಣಿಕ ಸಾಧನೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಷ್ಟಿçÃಯ ಸೇವಾ ಯೋಜನೆ, ವಿದ್ಯಾರ್ಥಿ ಚಟುವಟಿಕೆಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಮಹಾವಿದ್ಯಾಲಯದ ನೆನಪುಗಳನ್ನು ಹಂಚಿಕೊAಡು, ಬೋಧಕ ವರ್ಗಕ್ಕೆ ಕೃತಜ್ಞತೆ ಸಲ್ಲಿಸಿದರು. ಡಾ. ಶ್ಯಾಮರಾವ ಕುಲಕರ್ಣಿ, ಡಾ.ದಯಾನಂದ ಸಾತಿಹಾಳ, ಡಾ.ಸಂಗೀತಾ ಗಾಯಕವಾಡ, ಡಾ.ಸ್ನೇಹಲï ಗಿರಿ, ಡಾ.ಬಸವರಾಜ ಗಾಣಿಗೇರ ಸೇರಿದಂತೆ ಬೋಧಕ ವರ್ಗ, ಸಿಬ್ಬಂದಿ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ, ಅನುಭವ ಹಂಚಿಕೆ ಹಾಗೂ ಸನ್ಮಾನ ಎಲ್ಲರ ಮನಸೆಳೆದವು.