ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಂತ ಸೇವಾಲಾಲ್​ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕುಮಾರ ಮಹಾರಾಜರು ದೀಪ ಬೆಳಗಿಸಿದರು. ಪ್ರೊ.ಬಟ್ಟು ಸತ್ಯನಾರಾಯಣ, ಪ್ರೊ.ಆರ್​.ಆರ್​.ಬಿರಾದಾರ್​, ಸಂದೇಶ ಚೌಹಾಣ್​ ಇತರರಿದ್ದರು. 
ರಾಜ್ಯ

ಸೇವಾಲಾಲರು ಸಾಮಾಜಿಕ ಸುಧಾರಕರು

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿಕೆ
  • ಕೇಂದ್ರೀಯ ವಿವಿಯಲ್ಲಿ ಮಹಾರಾಜರ ಜಯಂತ್ಯುತ್ಸವ
ಕಲಬುರಗಿ: ಸಂತ ಸೇವಾಲಾಲ್​ ಮಹಾರಾಜರು ಮಹಾನ್​ ಮಾನವತಾವಾದಿ ಮತ್ತು ಸಾಮಾಜಿಕ ಸುಧಾರಕರಾಗಿದ್ದರು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಕಲಬುರಗಿ ಸಿಯುಕೆನಲ್ಲಿ ಮಂಗಳವಾರ ಆಯೋಜಿಸಿದ್ದ ಸಂತ ಸೇವಾಲಾಲ್​ ಮಹಾರಾಜರ 287ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಸಂತ ಸೇವಾಲಾಲ್​ ಮಹಾರಾಜರು ಎಲ್ಲಾ ಜೀವಿಗಳ ಸಹಬಾಳ್ವೆ ಪ್ರತಿಪಾದಿಸುತ್ತಿದ್ದರು. ನಾವು ಬದುಕಬೇಕು ಮತ್ತು ಇತರರನ್ನು ಬದುಕಲು ಬಿಡಬೇಕು ಎಂಬುದು ಅವರ ತತ್ವವಾಗಿತ್ತು. ನಮ್ಮ ದೇಶದ ಶ್ರೇಷ್ಠತೆ ಎಂದರೆ ವೈವಿಧ್ಯತೆಯಲ್ಲಿ ಏಕತೆ. ನಾವು ಇತರರ ಸಂಸತಿ ಮತ್ತು ಸಂಪ್ರದಾಯ ಗೌರವಿಸಬೇಕು. ಸಿಯುಕೆ ಒಂದು ಸಣ್ಣ ಭಾರತ, ನಮ್ಮಲ್ಲಿ ದೇಶಾದ್ಯಂತ ಅನೇಕ ರಾಜ್ಯಗಳ ವಿದ್ಯಾರ್ಥಿಗಳು ಇದ್ದಾರೆ. ನಾವು ಎಲ್ಲಾ ಸಮುದಾಯಗಳ ಹಬ್ಬ ಆಚರಿಸುತ್ತೇವೆ. ಇದು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ನಡುವೆ ಸಾಮರಸ್ಯ ಮತ್ತು ಸಹಕಾರ ಸೃಷ್ಟಿಸುತ್ತದೆ ಎಂದು ಹೇಳಿದರು.
ಬಾಗಲಕೋಟೆಯ ನೀಲಾನಗರ ಶಕ್ತಿ ಪೀಠದ ಕುಮಾರ ಮಹಾರಾಜರು ಮಾತನಾಡಿ, ಸಂತ ಸೇವಾಲಾಲ್​ ಮಹಾರಾಜರು 12ನೇ ಶತಮಾನದ ಶರಣರು ಪ್ರಸ್ತಾಪಿಸಿದ ಕಾಯಕ ಸಿದ್ಧಾಂತದ ಮಹಾನ್​ ಪ್ರತಿಪಾದಕರಾಗಿದ್ದರು. ವಿಚಾರವಾದಿ ಮತ್ತು ಪ್ರಾಯೋಗಿಕ ಚಿಂತಕರಾಗಿದ್ದರು. ಬಂಜಾರ ಸಮುದಾಯದ ಸವೋರ್ಚ್ಚ ಗುರುಗಳು. ಬಂಜಾರ ಜನರು ರಾಷ್ಟ್ರೀಯವಾದಿಗಳು ಮತ್ತು ಮಹಾನ್​ ದೇಶಭಕ್ತರು. ಬ್ರೀಟಿಷರ ಒತ್ತಡಕ್ಕೆ ಮಣಿಯದೆ ದೇಶದ ಸ್ವಾತಂತ್ರ$್ಯಕ್ಕಾಗಿ ಹೋರಾಡಿದರು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಬಂಜಾರ ಸಮುದಾಯವು ಒಂದೇ ಸಂಸತಿ ಮತ್ತು ಸಂಪ್ರದಾಯ ಹೊಂದಿದೆ. ನಾವೆಲ್ಲರೂ ಸಂತ ಸೇವಾಲಾಲ್​ ಮಹಾರಾಜರ ಉಪದೇಶ ಅನುಸರಿಸಬೇಕು ಎಂದು ಹೇಳಿದರು.
ಮಹಾರಾಷ್ಟ್ರದ ಗೋರ್​ ಸಿಕ್ವಾಡಿ ಮತ್ತು ಗೋರ್​ ಸೇನಾದ ರಾಷ್ಟ್ರೀಯ ಅಧ್ಯಕ್ಷ ಸಂದೇಶ ಚೌಹಾಣ ಮಾತನಾಡಿ, ಸಂತ ಸೇವಾಲಾಲ್​ ಮಹಾರಾಜರು ವೈಜ್ಞಾನಿಕ ಚಿಂತಕರು, ತತ್ವಜ್ಞಾನಿಗಳು ಮತ್ತು ಕ್ರಾಂತಿಕಾರಿಗಳು ಆಗಿದ್ದರು. ಒಂದು ದಿನ ನೀರು ಮಾರಾಟವಾಗುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದರು. ಅದು ಇಂದು ಸತ್ಯವಾಗಿದೆ. ಅನ್ಯಾಯ ಸಹಿಸಬೇಡಿ ಮತ್ತು ಅದರ ವಿರುದ್ಧ ಹೋರಾಡಿ ಎಂದು ಅವರು ಹೇಳಿದರು. ಮಹಿಳೆಯರಿಗೆ ಸಮಾನತೆ, ನ್ಯಾಯ ಮತ್ತು ಜೀವನದ ನತೆ ಪ್ರತಿಪಾದಿಸಿದ್ದಾರೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ಬಂಜಾರ ಸಮುದಾಯವು ಜವಾಬ್ದಾರಿ ಹೊಂದಿದೆ ಎಂದು ಅವರು ಹೇಳಿದ್ದಾರೆ. ಪ್ರತಿಯೊಬ್ಬರೂ ಕಷ್ಟಪಟ್ಟು ದುಡಿದು ಬಡತನ ತೊಡೆದುಹಾಕಬೇಕು. ವಿದ್ಯಾರ್ಥಿಗಳು ಅವರ ಬೋಧನೆಗಳಿಂದ ಕಲಿಯಬೇಕು ಮತ್ತು ಸಮಾಜಕ್ಕಾಗಿ ಕೆಲಸ ಮಾಡಬೇಕು, ಇಲ್ಲವಾದಲ್ಲಿ ಶಿಕ್ಷಣಕ್ಕೆ ಅರ್ಥವಿಲ್ಲ ಎಂದು ಹೇಳಿದರು.
ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​ ಮಾತನಾಡಿಸಾಮರಸ್ಯ, ಎಲ್ಲರನ್ನೂ ಒಳಗೊಳ್ಳುವ, ನ್ಯಾಯಯುತ ಮತ್ತು ಸಮ ಸಮಾಜ ನಿರ್ಮಿಸುವುದು ಸಂತ ಸೇವಾಲಾಲ್​ ಮಹಾರಾಜರ ಪ್ರಮುಖ ಬೋಧನೆಗಳಾಗಿವೆ ಎಂದರು.
ಬಂಜಾರ ಸಮುದಾಯದ ವಿವಿಧ ಸಾಂಸತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ಸಂಯೋಜಕ ಡಾ.ಪಿ.ಎಸ್​.ಕಟ್ಟಿಮನಿ ಸ್ವಾಗತಿಸಿದರು, ಸತ್ಯಂ ಜಾಧವ ನಿರೂಪಿಸಿ, ವಂದಿಸಿದರು. ಪ್ರೊ.ಚನ್ನವಿರ ಆರ್​.ಎಂ, ಪ್ರೊ.ಎಂ.ಎಸ್​.ಪಾಸೋಡಿ, ಪ್ರೊ.ವಿಕ್ರಮ ವಿಸಾಜಿ, ಪ್ರೊ.ವಿಜಯಕುಮಾರ, ಡಾ.ಗೋವಿಂದ ಜಾಧವ, ಕೆನರಾ ಬ್ಯಾಂಕ್​ ವ್ಯವಸ್ಥಾಪಕ ಸತೀಶ್​ ಚೌಹಾಣ, ಡಾ.ಜೈಪಾಲ ರಾಥೋಡ್​, ಡಾ.ಸಂಜೀವರಾಯಪ್ಪ, ಡಾ.ಶಿವಕುಮಾರ ಬೆಳ್ಳಿ, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಬಂಜಾರ ಸಮುದಾಯದ ಸದಸ್ಯರು ಪಾಲ್ಗೊಂಡಿದ್ದರು.
"

ಪ್ರಕೃತಿ ಮತ್ತು ವನ್ಯಜಿವಿಗಳನ್ನು ರಸಲು ಪ್ರಾಮುಖ್ಯತೆ ನೀಡಿದ್ದಾರೆ. ಮಹಿಳಾ ಸಬಲೀಕರಣದ ಮಹಾನ್​ ಪ್ರತಿಪಾದಕರಾಗಿದ್ದರು. ವಿಧವೆಯರ ಪುನರ್ವಿವಾಹ ಮತ್ತು ದೇವದಾಸಿ ಪದ್ಧತಿ ನಿಮೂರ್ಲನೆಗೆ ಒತ್ತು ನೀಡಿದ್ದಾರೆ.

ಪ್ರೊ.ಆರ್​.ಆರ್​.ಬಿರಾದಾರ್​,

ಕುಲಸಚಿವ, ಸಿಯುಕೆ ಕಲಬುರಗಿ.