ಧ್ಯಾನಕ್ಕೆ ಸಮಯ ಮೀಸಲಿಡಿ 
ರಾಜ್ಯ

ಧ್ಯಾನಕ್ಕೆ ಸಮಯ ಮೀಸಲಿಡಿ

ಚಿಕ್ಕಬಳ್ಳಾಪುರ ಡೆಸ್ಕ್
ಚಿಂತಾಮಣಿ: ಭಾರತದ ಪ್ರಾಚಿನ ಋಷಿಮುನಿಗಳು ಜಗತ್ತಿಗೆ ಯೋಗವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಶ್ರೀ ಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್​ ಹೇಳಿದರು.meditation
ಕ್ಷೇತ್ರ ಕೈವಾರದ ಸದ್ಗುರು ಶ್ರೀಯೋಗಿನಾರೇಯಣ ಮಠದಲ್ಲಿ ಯೋಗ ದಿನದಲ್ಲಿ ಮಾತನಾಡಿ, ಭಾರತ ಯೋಗದ ಉಗಮ ಸ್ಥಾನವಾಗಿದ್ದು, ಇಂದಿನ ಧಾವಂತದ ಬದುಕಿನಲ್ಲಿ ಮನಸ್ಸಿನ ಪ್ರಶಾಂತತೆಗೆ ಯೋಗ ಸಹಕಾರಿ ಎಂದರು.
ಪ್ರವಚನಕಾರ ತಳಗವಾರ ಆನಂದ್​ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾನವನು ಆಧುನಿಕ ಶೈಲಿಯ ಜೀವನ ಪದ್ಧತಿಗೆ ಒಗ್ಗಿಕೊಳ್ಳುತ್ತಿರುವುದರಿಂದ ಮಾನಸಿಕ ಒತ್ತಡ, ಖಿನ್ನತೆಯಂತಹ ಹಲವಾರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾನೆ. ಎಷ್ಟೇ ಕೆಲಸದ ಒತ್ತಡವಿದ್ದರೂ ಯೋಗ, ವ್ಯಾಯಾಮ ಹಾಗೂ ಧ್ಯಾನಕ್ಕೆ ಸಮಯ ಮೀಸಲಿಡಬೇಕು ಎಂದರು.