ಶ್ರೀನಿವಾಸಪುರದ ರೇಷ್ಮೆಗೂಡು office opening ಮಾರುಕಟ್ಟೆಯಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರು ರೇಷ್ಮೆ ಇಲಾಖೆಯ ವಿಭಾಗದ ಸಹಾಯಕ ನಿರ್ದೇಶಕರ ಕಚೇರಿ ಉದ್ಘಾಟಿಸಿದರು. ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ರೂಪೇಶ್​, ಬಿ.ಎಂ.ರೇಷ್ಮೆ ಗೂಡು ಮಾರುಕಟ್ಟೆಯ ಸಹಾಯಕ ನಿರ್ದೇಶಕ ಸಂಗನ ಬಸಯ್ಯ ಇದ್ದರು. 
ರಾಜ್ಯ

ರೇಷ್ಮೆ ಕೃಷಿ ರೈತರ ಪಾಲಿನ ವರದಾನ office opening

ಶ್ರೀನಿವಾಸಪುರ: ರೇಷ್ಮೆ ಕೃಷಿಯು ರೈತರ ಪಾಲಿಗೆ ಆರ್ಥಿಕ ಜೀವಾಳವಾಗಿದೆ. office opening ಇದು ರೈತರ ಆದಾಯ ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಉದ್ಯಮದಲ್ಲಿ ಖರ್ಚು ಕಡಿಮೆ ಮಾಡಿ ಲಾಭ ಹೆಚ್ಚಿಸುವ ಹಾದಿಯಲ್ಲಿ ಇಲಾಖೆ ನೀಡುವ ತಂತ್ರಾನವನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ರೇಷ್ಮೆ ಗೂಡು ಮಾರುಕಟ್ಟೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ರೇಷ್ಮೆ ಇಲಾಖೆಯ ವಿಭಾಗದ ಸಹಾಯಕ ನಿರ್ದೇಶಕರ ಕಚೇರಿ ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಗುಣಮಟ್ಟದ ರೇಷ್ಮೆ ಗೂಡುನ್ನು ಬೆಳೆದು ಆರ್ಥಿಕವಾಗಿ ಸಮಾಜದಲ್ಲಿ ಮುಂದೆ ಬರಬೇಕು ಎಂದರು
ಈ ೇತ್ರದ ರೈತರು ಮತ್ತೆ ರೇಷ್ಮೆ ಕೃಷಿಗೆ ಮರಳುವ ಮೂಲಕ ಹಿಂದಿನ ಖ್ಯಾತಿ ಮರುಕಳಿಸುವಂತೆ ಮಾಡಬೇಕು. ಒಂದು ಕಾಲದಲ್ಲಿ ಶ್ರೀನಿವಾಸಪುರ ತಾಲೂಕು ರೇಷ್ಮೆಯಲ್ಲಿ ಹೆಸರು ಪಡೆದಿತ್ತು. 1985ರ ದಶಕದಲ್ಲಿ ರೇಷ್ಮೆಪ್ರತಿ ಊರಲ್ಲೂ ಬೆಳೆಯುತ್ತಿದ್ದರು. ಕಾಲಕ್ರಮೇಣ ಇದು ಮಾಯವಾಗುತ್ತಿದೆ. ದಯಮಾಡಿ ರೈತರು ಟೊಮ್ಯಾಟೊ&ಮಾವು ಕಡಿಮೆ ಮಾಡಿ ರೇಷ್ಮೆ ಉತ್ಪಾದಿಸುವಂತೆ ಕಿವಿಮಾತು ಹೇಳಿದರು.
ಈಗಿನ ಕಾಂಗ್ರೆಸ್​ ಸರ್ಕಾರ ಯಾವುದೇ ನೇಮಕಾತಿ ಮಾಡದಿರುವುದರಿಂದ ಸರ್ಕಾರಿ ಕಚೇರಿಗಳಲ್ಲಿ ನೌಕರರು ಇಲ್ಲದೆ ಸಾರ್ವಜನಿಕರು ಕೆಲಸಗಳು ವಿಳಂಬವಾಗುತ್ತದೆ. ಜನರಿಗೆ ಕೇವಲ ಗ್ಯಾರಂಟಿ ನೀಡಿ ಉದ್ಯೋಗಭರ್ತಿ ಮಾಡುತ್ತಿಲ್ಲ ಎಂದರು.
ಪುರಸಭೆ ಮಾಜಿ ಅಧ್ಯ ಅಂಬೇಡ್ಕರ್​ ಪಾಳ್ಯ ಮುನಿಯಪ್ಪ, ರೇಷ್ಮೆ ಇಲಾಖೆಯ ಸಿಬ್ಬಂದಿ ಗೀತಾ, ಪುರುಷೋತ್ತಮ್​, ಸಂಪತ್​, ನವ್ಯಾ ಇದ್ದರು.