ಹಿರಿಯ ಸಕ್ಕರೆ ಉದ್ಯಮಿ ರಾಜಾಭಾವು ಶಿರಗಾಂವಕರ (91)  
ರಾಜ್ಯ

ಕಬ್ಬು ಬೆಳೆಗಾರರ ಆರ್ಥಿಕ ಅಭಿವೃದ್ಧಿಗೆ ದೊಡ್ಡ ಶಕ್ತಿ ಕೇಂದ್ರ, ಹಿರಿಯ ಸಕ್ಕರೆ ಉದ್ಯಮಿ ರಾಜಾಭಾವು ನಿಧನ

ಪ್ರಮುಖ ಮುಖ್ಯಾಂಶಗಳು

  • ಕಬ್ಬು ಬೆಳೆಗಾರರ ಆರ್ಥಿಕ ಅಭಿವೃದ್ಧಿಗೆ ದೊಡ್ಡ ಶಕ್ತಿ ಕೇಂದ್ರ
  • ಹಿರಿಯ ಸಕ್ಕರೆ ಉದ್ಯಮಿ ರಾಜಾಭಾವು ಶಿರಗಾಂವಕರ (91) ನಿಧನ
ಬೆಳಗಾವಿ: ಕಾಗವಾಡ ತಾಲೂಕಿನ ಉಗಾರ್ ಪಟ್ಟಣದ ಹಿರಿಯ ಸಕ್ಕರೆ ಉದ್ಯಮಿ ರಾಜಾಭಾವು ಶಿರಗಾಂವಕರ (91) ಗುರುವಾರ ಕೊಲ್ಲಾಪುರ ನಿವಾಸದಲ್ಲಿ ಕೊನೆಯುಸಿರೆಳೆದರು.
ಕಾಗವಾಡ ತಾಲೂಕಿನ ಉಗಾರ ಪಟ್ಟಣದ ಉಗಾರ ಸಕ್ಕರೆ ಕಾರ್ಖಾನೆಯ ಮಾಲೀಕರಾಗಿದ್ದ ಅವರು, ಹಿರಿಯ ಸಕ್ಕರೆ ಉದ್ಯಮಿ ಹಾಗೂ ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದಾರೆ. ಉಗಾರ ಸಕ್ಕರೆ ಕಾರ್ಖಾನೆಯ ಸಂಪೂರ್ಣ ಏಳಿಗೆಗಾಗಿ ಶ್ರಮಿಸುವ ಮೂಲಕ ಈ ಭಾಗದಲ್ಲಿ ಕಬ್ಬು ಬೆಳೆಗಾರ ರೈತರ ಆರ್ಥಿಕ ಅಭಿವೃದ್ಧಿಗೆ ದೊಡ್ಡ ಶಕ್ತಿಯಾಗಿ ನಿಂತಿದ್ದರು.
ನವದೆಹಲಿಯ ಇಂಡಿಯನ್ ಶುಗರ್ ಎಕ್ಸಿಮ್ ಕಾರ್ಪೊರೇಷನ್ (ಐಎಸ್‌ಇಸಿ) ಅಧ್ಯಕ್ಷರಾಗಿ ಒಂದಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು‌‌. ಉಗಾರ ಲಯನ್ಸ್ ಕ್ಲಬ್‌ನ ಸಂಸ್ಥಾಪಕ, ಸಾಂಗ್ಲಿಯ ನೂತನ ಬುದ್ಧಿಬಲ ಸಂಸ್ಥೆಯ ಸಂಸ್ಥಾಪಕರಾಗಿಯೂ ಗುರುತಿಸಿಕೊಂಡಿದ್ದರು. ಪುತ್ರ, ಪುತ್ರಿಯನ್ನು ಅಗಲಿರುವ ರಾಜಾಭಾವು ಅವರ ಅಂತ್ಯಕ್ರಿಯೆ ಸ್ವಗ್ರಾಮ ಉಗಾರದಲ್ಕಿಯಲ್ಲಿ ಗುರುವಾರ ಸಂಜೆ ನೆರವೇರಲಿದೆ.