Senior JDS leader P. Hanumayya passes away 
ರಾಜ್ಯ

ಜೆಡಿಎಸ್​ ಹಿರಿಯ ಮುಖಂಡ ಪಿ.ಹನುಮಯ್ಯ ನಿಧನ

ಚಿಂತಾಮಣಿ: ತಾಲೂಕಿನ ಮಿಟ್ಟಹಳ್ಳಿ ಮಜರಾ ಯರ್ರಪ್ಪಲ್ಲಿ ಗ್ರಾಮದ ನಿವಾಸಿ, ಜೆಡಿಎಸ್​ ಹಿರಿಯ ಮುಖಂಡ ಪಿ.ಹನುಮಯ್ಯ (91) ಶುಕ್ರವಾರ ಬೆಳಗ್ಗೆ ನಿಧನರಾದರು.
ಮೃತರಿಗೆ ಪತ್ನಿ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಚಿಲಕಲನೇರ್ಪು ಹೋಬಳಿ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಎಪಿಎಂಸಿ ನಿರ್ದೇಶಕರಾಗಿ ಮತ್ತು ಜಿಪಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.ಸಂಜೆ ಅವರ ಸ್ವ&ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಿತು.