Bangalore Cyber Crime 
ರಾಜ್ಯ

ವಾಟ್ಸಾಪ್​ಗೆ ಬರುವ ಬ್ಯಾಂಕ್​ ಮೆಸೇಜ್​ ಕ್ಲಿಕ್ ಮಾಡುವ ಮುನ್ನ ಹುಷಾರ್​; ನಕಲಿ ಬ್ಯಾಂಕ್ ಮ್ಯಾನೇಜರ್ ಜಾಲಕ್ಕೆ ಸಿಲುಕಿ 6.06 ಲಕ್ಷ ಕಳೆದುಕೊಂಡ ಅಜ್ಜ

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ 6.06 ಲಕ್ಷ ರೂ. ಕಳೆದುಕೊಂಡ 81 ವರ್ಷದ ವೃದ್ಧ
  • ವಾಟ್ಸಾಪ್​ಗೆ ಬಂದಿದ್ದ ಬ್ಯಾಂಕ್​​ ಮೆಸೇಜ್​ ಕ್ಲಿಕ್ ಮಾಡಿದ ಹಿನ್ನೆಲೆ ಹಣ ದೋಚಿದ ವಂಚಕರು
  • ಬ್ಯಾಂಕ್ ಅಧಿಕಾರಿಗಳು ಯಾವುದೇ ಯೋಜನೆಗೆ ಸಂಬಂಧಿಸಿದ ವಿವರ ವಾಟ್ಸಾಪ್ ಸಂದೇಶ ಕಳಿಸಲ್ಲ ಎಂದ ಪೊಲೀಸರು
Bangalore Cyber Crime: ಕಳೆದ ಕೆಲ ದಿನದ ಹಿಂದೆ ಶಿವಾಜಿನಗರದ ನಿವಾಸಿಯಾದ ವೃದ್ಧೆಯೊಬ್ಬರು ಡಿಜಿಟಲ್​ ಅರೆಸ್ಟ್​ಗೊಳಗಾಗಿ 24 ಕೋಟಿ ಹಣ ಕಳೆದುಕೊಂಡಿದ್ದ ಘಟನೆ ಬೆಳಕಿಗೆ ಬಂದಿತ್ತು. ಆ ಬೆನ್ನಲ್ಲೇ ಬೆಂಗಳೂರಿನ ಹಿರಿಯ ನಾಗರಿಕರೊಬ್ಬರು ತಮ್ಮ ಜೀವಮಾನದ ಉಳಿತಾಯದ ಹಣವನ್ನು ಕಳೆದುಕೊಂಡಿದ್ದಾರೆ.
ಬೆಂಗಳೂರಿನ ಬಿನ್ನಿಪೇಟೆ ನಿವಾಸಿಯಾದ 81 ವರ್ಷದ ನಿವೃತ್ತ ವೃದ್ಧನಿಗೆ ಸೈಬರ್​​ ವಂಚಕರು, ಬ್ಯಾಂಕ್​ ಮ್ಯಾನೇಜರ್​ ಹೆಸರಲ್ಲಿ 6.06 ಲಕ್ಷ ರೂ. ವಂಚಿಸಿದ್ದಾರೆ. ಈ ಬಗ್ಗೆ ಅವರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು, ಶಂಕಿತ ಆರೋಪಿ ಇಂಡಸ್ಇಂಡ್ ಬ್ಯಾಂಕಿನ ಮ್ಯಾನೇಜರ್ ಎಂದು ಹೇಳಿಕೊಂಡು ವೃದ್ಧನಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ದೂರಿನಲ್ಲಿ ಏನಿದೆ?

ಪಿಂಚಣಿ ಡೆಬಿಟ್ ಕಾರ್ಡ್​ಗಾಗಿ 81 ವರ್ಷದ ವೃದ್ಧ ಅರ್ಜಿ ಸಲ್ಲಿಸಿದ್ದೀರಾ. ಇದರಡಿಯೇ ಕೆಲಸವಾಗುತ್ತಿದ್ದೆ. ಇದಕ್ಕಾಗಿ ನಿಮ್ಮ ಖಾತೆ ಮತ್ತು ಇತರ ದಾಖಲೆಗಳ ವಿವರ ಬೇಕು. ಅದನ್ನು ಕಳುಹಿಸಲು ಲಿಂಕ್​ ನೀಡಲಾಗುತ್ತದೆ. ಅದರ ಮೂಲಕ ವಿವರ ನೀಡಿ ಎಂದು ವಂಚಕ ಹೇಲಿಕೊಮಡಿದ್ದನು.
ಅವರ ಮಾತನ್ನು ಅನುಮಾನಿಸದೆ, ಆತ ಹೇಳಿದ್ದನ್ನೇ ಅನುಕರಿಸಿದ ವೃದ್ಧ, ಲಿಂಕ್​ ಬಂದ ಕೂಡಲೇ ಅದರ ಮೇಲೆ ಕ್ಲಿಕ್​ ಮಾಡಿದ ಆ ಕೂಡಲೇ ವಂಚಕರು ಹಣವನ್ನು ಅವರ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಮೊಬೈಲ್‌ಗೆ ಬಂದ ಹಣ ಕಡಿತದ ಸಂದೇಶಗಳನ್ನು ಗಮನಿಸಿದಾಗ ಹಿರಿಯ ನಾಗರಿಕರು ತಾವು ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ತಮ್ಮ ಖಾತೆಯಿಂದ ಒಟ್ಟು 6.6 ಲಕ್ಷ ರೂಪಾಯಿಗಳು ಮಾಯವಾಗಿರುವುದನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಸಂತ್ರಸ್ತ ವೃದ್ಧ ಕೊಟ್ಟ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ಅಪರಿಚಿತರಿಂದ ಬರುವ ಕರೆಗಳನ್ನು ಸ್ವೀಕರಿಸಬೇಡಿ, ಯಾವುದೇ ಮೆಸೇಜ್​ ಲಿಂಕ್​ಗಳ ಮೇಲೆ ಕ್ಲಿಕ್​ ಮಾಡಬೇಡಿ ಎಂದು ಸೈಬರ್​ ಕ್ರೈಂ ಪೊಲೀಸರು ಮನವಿ ಮಾಡಿದ್ದಾರೆ. ಅಲ್ಲದೆ, ಬ್ಯಾಂಕ್ ಅಧಿಕಾರಿಗಳು ಯಾವುದೇ ಯೋಜನೆಗೆ ಸಂಬಂಧಿಸಿದ ವಿವರಗಳನ್ನು ವಾಟ್ಸಾಪ್ ಮೂಲಕ ಹಂಚಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

24 ಕೋಟಿ ಕಳೆದುಕೊಂಡ ಅಜ್ಜಿ

74 ವರ್ಷದ ನಿವೃತ್ತ ಶಿಕ್ಷಕಿಯೊಬ್ಬರು ಡಿಜಿಟಲ್​ ಅರೆಸ್ಟ್​ಗೆ ಒಳಗಾಗಿದ್ದರು. ನಿಮ್ಮ ಬ್ಯಾಂಕ್ ಖಾತೆಗಳು ಅಕ್ರಮ ಹಣ ವರ್ಗಾವಣೆಪ್ರಕರಣದಲ್ಲಿ ಭಾಗಿಯಾಗಿವೆ. ನೀವು 'ಡಿಜಿಟಲ್ ಅರೆಸ್ಟ್'ನಲ್ಲಿದ್ದೀರಿ, ಈ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳಬಾರದು" ಎಂದು ತೀವ್ರ ಒತ್ತಡ ಹೇರಿ ಹೆದರಿಸಿದ್ದರು. 22 ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 24 ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದರು. ಇಷ್ಟಾದರೂ ವಂಚಕರ ಹಣದ ದಾಹ ತೀರದೆ, ಮತ್ತಷ್ಟು ಹಣಕ್ಕಾಗಿ ಪೀಡಿಸುತ್ತಿದ್ದರು.ಚಿನ್ನದ ಆಭರಣಗಳನ್ನು ಅಡವಿಡಲು ತೆರಳಿದ್ದರು. ವೃದ್ಧೆ ಇಷ್ಟೊಂದು ದೊಡ್ಡ ಪ್ರಮಾಣದ ಚಿನ್ನವನ್ನು ತಂದಿರುವುದನ್ನು ಕಂಡು ಅನುಮಾನಗೊಂಡ ಬ್ಯಾಂಕ್ ಅಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ಕೊಟ್ಟ ನಂತರ ಪ್ರಕರಣ ಬೆಳಕಿಗೆ ಬಂದಿದೆ, (ಏಜೆನ್ಸೀಸ್).