ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ 
ರಾಜ್ಯ

ವಿಚಾರ ಸಂಕಿರಣ

ಪಂಕಜ ಕೆ.ಎಂ.

ಪ್ರಮುಖ ಮುಖ್ಯಾಂಶಗಳು

  • ಸಮಕಾಲೀನ ಸಂದರ್ಭ ವಿಷಯ
  • ಮೂರು ವಿಷಯಗಳ ಕುರಿತು ಗೋಷ್ಠಿಗಳು
ಬೆಂಗಳೂರು: ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನವು ಜ. 6ರಂದು ಬೆಳಗ್ಗೆ 10ರಿಂದ  ಮಧ್ಯಾಹ್ನ 2.00 ಗಂಟೆವರೆಗೆ ‘‘ವಿಮರ್ಶೆ: ಸಮಕಾಲೀನ ಸಂದರ್ಭ ವಿಷಯ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮ ಆಯೋಜಿಸಿದೆ. 
ನಗರದ ಕನ್ನಡ ಭವನದಲ್ಲಿನ ನಯನ ಸಭಾಂಗಣದಲ್ಲಿ ನಡೆಯಲಿರುವ ಸಂಕಿರಣವನ್ನು ಕವಿ ಪ್ರೊ. ಎಚ್.ಎಸ್. ಶಿವಪ್ರಕಾಶ್ ಉದ್ಘಾಟಿಸಲಿದ್ದಾರೆ. ಪ್ರತಿಷ್ಠಾನದ ಅಧ್ಯಕ್ಷ  ಮೋಹನಕುಮಾರ್ ಕೊಂಡಜ್ಜಿ ಅಧ್ಯಕ್ಷತೆ ವಹಿಸಲಿದ್ದಾರೆ. 
ಕಾರ್ಯಕ್ರಮದಲ್ಲಿ 3 ಗೋಷ್ಠಿಗಳಿದ್ದು, ‘ಭಾರತೀಯ ಸಂದರ್ಭ’ ವಿಷಯ ಕುರಿತು ಭೋಪಾಲ್‌ನ ಹಿರಿಯ ಲೇಖಕ ಡಾ. ಉದಯನ್ ವಾಜಪೇಯಿ,  ‘ಕನ್ನಡದ ಸಂದರ್ಭ’ ಕುರಿತು ಹಿರಿಯ ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಮತ್ತು ‘ದಲಿತ ಮತ್ತು ಮಹಿಳಾ ಸಂದರ್ಭ’ ಕುರಿತು ಹಿರಿಯ ವಿಮರ್ಶಕಿ ತಾರಿಣಿ ಶುಭದಾಯಿನಿ ಅವರು ಮಾತನಾಡಲಿದ್ದಾರೆ ಎಂದು ಪ್ರತಿಷ್ಠಾನ ತಿಳಿಸಿದೆ.