Selling counterfeit cigarettes 
ರಾಜ್ಯ

ನಕಲಿ ಸಿಗರೇಟ್​ ಮಾರಾಟ

ಚಿಕ್ಕಬಳ್ಳಾಪುರ ಡೆಸ್ಕ್
ಚಿಂತಾಮಣಿ: ನಗರದ ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಯ ನಕಲಿ ಸಿಗರೇಟ್​ ಮಾರಾಟ ಮಾಡುತ್ತಿದ್ದ ಅಂಗಡಿಯೊಂದರ ಮೇಲೆ ಕಂಪನಿ ಬ್ರ್ಯಾಂಡ್​ ಪ್ರೊಟೆಕ್ಷನ್​ ಅಧಿಕಾರಿಗಳು, ಸ್ಥಳಿಯ ಪೊಲೀಸರು ಜಂಟಿ ದಾಳಿ ನಡೆಸಿ ನಕಲಿ ಸಿಗರೇಟ್​ ಪ್ಯಾಕೆಟ್​ಗಳನ್ನು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಕೆಲವು ದಿನಗಳಿಂದ ನಗರದ ಎಂಜಿ ರಸ್ತೆಯಲ್ಲಿ ಅಂಗಡಿಯಲ್ಲಿ ನಕಲಿ ಸಿಗರೇಟ್​ ದಾಸ್ತಾನು ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಕಂಪನಿ ಬ್ರ್ಯಾಂಡ್​ ಪ್ರೊಟೆಕ್ಷನ್​ ವಿಭಾಗಕ್ಕೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆ ಕಾರ್ಯಾಚರಣೆಗಿಳಿದ ವ್ಯವಸ್ಥಾಪಕರು, ಪೊಲೀಸರ ನೆರವಿನೊಂದಿಗೆ ಅಂಗಡಿ ಮೇಲೆ ದಾಳಿ ನಡೆಸಿದ್ದಾರೆ.
ವಿವಿಧ ಮಾದರಿ ನಕಲಿ ಸಿಗರೇಟ್​ ಬಾಕ್ಸ್​ಗಳು ಪತ್ತೆಯಾಗಿವೆ. ಮೇಲ್ನೋಟಕ್ಕೆ ಅಸಲಿ ಪ್ಯಾಕೆಟ್​ಗಳಂತೆಯೇ ಕಾಣುವ ನಕಲಿ ಉತ್ಪನ್ನಗಳು ಗ್ರಾಹಕರ ದಿಕ್ಕು ತಪ್ಪಿಸುತ್ತಿದ್ದವು. ನಕಲಿ ಸಿಗರೇಟ್​ ಮಾರಾಟಕ್ಕೆ ಸಂಬಂಧಿಸಿದಂತೆ ಬ್ರ್ಯಾಂಡ್​ ಪ್ರೊಟೆಕ್ಷನ್​ ಮತ್ತು ನಕಲಿ ವಿರೋಧಿ ಸೇವಾ ಪೂರೈಕೆದಾರ ಅನ್ವೇಶ್​ ಐಪಿಆರ್​ ಸರ್ವೀಸಸ್​ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಶ್ರೀನಿವಾಸ್​ ಎಂಬುವವರು ನೀಡಿದ ದೂರಿನ ಮೇಲೆ ಚಿಂತಾಮಣಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.