ಮುಗಳಿಹಾಳ ಗ್ರಾಪಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ವಿಶೇಷ ಗ್ರಾಮ ಸಭೆಯಲ್ಲಿ ಪಿಡಿಒಗಳಾದ ವೈ.ಎನ್.ಮೂಡಅಲಗಿ, ಅಮಿತ್ ನಾಯಿಕ, ಕರೆಪ್ಪ ದೊಡ್ಡನವರ ಇದ್ದರು.
ಮುಗಳಿಹಾಳ: ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಅಂಗವಿಕಲರ ದಿನಾಚರಣೆ ಹಾಗೂ ಅಂಗವಿಕಲರ ವಿಶೇಷ ಸಭೆ ಮಂಗಳವಾರ ಜರುಗಿತು. ಪಿಡಿಒ ವೈ.ಎನ್.ಮೂಡಲಗಿ ಮಾತನಾಡಿ, ಎಲ್ಲ ಅಂಗವಿಕಲರಿಗೆ ಸರ್ಕಾರದ ಸೌಲಭ್ಯ ತಲುಪಿಸಲಾಗುವುದು. ಅಂಗವಿಕಲರ ಕೆಲಸ&ಕಾರ್ಯಗಳನ್ನು ತುರ್ತಾಗಿ ಮಾಡಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಸದಾಶಿವ ಕಡಬಿ, ಪಿಡಿಒ ಅಮಿತ್ ನಾಯಿಕ, ಕರೆಪ್ಪ ದೊಡ್ಡನವರ, ವಿಆರ್ಡಬ್ಲ್ಯು ಕಲ್ಲಪ್ಪ ಕಳ್ಳಿಗುದ್ದಿ, ಮುತ್ತು ದಳವಾಯಿ, ಮಂಜು ದಳವಾಯಿ, ಶಿವಪ್ಪ ಶಿಂತ್ರಿ, ರಮೇಶ ತಳವಾರ, ಸುರೇಶ ಇಳಿಗೇರ ಇತರರಿದ್ದರು.