ಶೆಟ್ಟಿಕೆರೆ Camp ಹೋಬಳಿಯ ನವಿಲೆ ಗ್ರಾಮದ ಕಲ್ಪವೃಕ್ಷ ಜ್ಞಾನ ವಿಕಾಸ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸ್ವ-&ಉದ್ಯೋಗ ಪ್ರೇರಣಾ ಶಿಬಿರವನ್ನು ತಾಲೂಕು ಯೋಜನಾಧಿಕಾರಿ ಶಾಲಿನಿ ಉದ್ಘಾಟಿಸಿದರು. ಒಕ್ಕೂಟದ ಅಧ್ಯೆ ರೇಣುಕಮ್ಮ, ಡೇರಿ ನಿರ್ದೇಶಕರಾದ ಶೈಲಾ, ರಾಧಾ, ಲತಾ, ಕವಿತಾ ಇತರರು ಇದ್ದರು.
ಮಹಿಳಾ ಸಬಲೀಕರಣ, ಮೂಲಸೌಕರ್ಯ ಅಭಿವೃದ್ಧಿಗೆ ಪೂರಕವಾದ ಆರ್ಥಿಕ
ವ್ಯವಸ್ಥೆ ನಿಮಾರ್ಣ ಹಾಗೂ ಜ್ಞಾನ ವಿಕಾಸ ಕೇಂದ್ರಗಳ ಸ್ಥಾಪನೆಯ ಪ್ರಮುಖ ಉದ್ದೇಶ ಮಹಿಳೆಯರನ್ನು ಆರ್ಥಿಕ, ಸಾಮಾಜಿಕವಾಗಿ ಸಬಲರನ್ನಾಗಿಸುವುದಾಗಿದೆ ಎಂದು ತಾಲೂಕು ಯೋಜನಾಧಿಕಾರಿ ಶಾಲಿನಿ ತಿಳಿಸಿದರು.
ಶೆಟ್ಟಿಕೆರೆ ಹೋಬಳಿಯ ನವಿಲೆ ಗ್ರಾಮದ ಕಲ್ಪವೃಕ್ಷ ಜ್ಞಾನ ವಿಕಾಸ ಕೇಂದ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ ಸ್ವ-ಉದ್ಯೋಗ ಪ್ರೇರಣಾ ಶಿಬಿರದಲ್ಲಿ ಮಾತನಾಡಿದರು.
ತರಬೇತುದಾರೆ ರೂಪಾ ಮಹಿಳೆಯರಿಗೆ ಸೀರೆ ಕುಚ್ಚು ಹಾಕುವುದು, ಬಾಗಿಲು ತೋರಣ, ಮ್ಯಾಟ್ ತಯಾರಿಸುವ ಪ್ರಾಯೋಗಿಕ ತರಬೇತಿ ನೀಡಿ ಬಳಿಕ ಮಾತನಾಡಿದ ಅವರು "ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸ್ವ-ಉದ್ಯೋಗ ಅಗತ್ಯ. ಅದಕ್ಕೆ ಪೂರಕವಾಗಿ ಕೌಶಲಾಧಾರಿತ ತರಬೇತಿ ನೆರವಾಗುತ್ತವೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನೀಡಲಾಗುವ ತರಬೇತಿಗಳನ್ನು ಪ್ರತಿಯೊಬ್ಬರು ಸದ್ಬಳಸಿಕೊಂಡು ಆರ್ಥಿಕವಾಗಿ ಸದೃಢ ಕುಟುಂಬ ಕಟ್ಟಿಕೊಳ್ಳಬೇಕು ಎಂದರು.
ಜ್ಞಾನ ವಿಕಾಸ ಸಮನ್ವಯಾಧಿಕಾರಿ ಜಯಶೀಲಾ, ಸೇವಾ ಪ್ರತಿನಿಧಿ ಮಲ್ಲಿಗೆಯಮ್ಮ ಇದ್ದರು.