ಹುಮನಾಬಾದ್ ತಾಲೂಕಿನ ಕನಕಟ್ಟಾ ಸರ್ಕಾರಿ ಪ್ರೌಢಶಾಲೆ ರಾಷ್ಟ್ರಮಟ್ಟದಲ್ಲಿ ವಂದೇ ಮಾತರಂ ನಾಟ್ಯ ಮಹೋತ್ಸವಕ್ಕೆ ಆಯ್ಕೆಯಾಗಿದ್ದರಿಂದ ಮುಖ್ಯ ಶಿಕ್ಷಕ ವೀರಣ್ಣ ಜಮಖಂಡಿ, ಸಹ ಶಿಕ್ಷಕ ಸೋಮನಾಥ ಎಸ್.ಜಿ. ಅವರನ್ನು ಗ್ರಾಪಂ ಮಾಜಿ ಅಧ್ಯಕ್ಷ ಮನೋಜ ಮಾನೆ, ಸಂತೋಷ ಮುಸ್ತಾಪುರೆ, ಶಿವಕುಮಾರ ಶಂಕರಶೆಟ್ಟಿ, ಶಂಕ್ರಯ್ಯ ಸ್ವಾಮಿ, ತಾನಾಜಿ ಬಿರಾದಾರ ಸನ್ಮಾನಿಸಿದರು.
- ರಾಷ್ಟ್ರಮಟ್ಟದ ನಾಟ್ಯ ಮಹೋತ್ಸವಕ್ಕೆ
ಹುಮನಾಬಾದ್: ಕೇಂದ್ರ ಸಂಸ್ಕೃತಿ ಸಚಿವಾಲಯ ಅಧೀನದ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ (ಸಿಸಿಆರ್ಟಿ) ಹಾಗೂ ಸಂಗೀತ ನಾಟಕ ಅಕಾಡೆಮಿ ಸಹಯೋಗದಡಿ ಆಯೋಜಿಸಿದ ವಂದೇ ಮಾತರಂ ನಾಟ್ಯ ಮಹೋತ್ಸವಕ್ಕೆ ಕರ್ನಾಟಕದಿಂದ ಏಕೈಕ ಕನಕಟ್ಟಾ ಸರ್ಕಾರಿ ಪ್ರೌಢಶಾಲೆ ಆಯ್ಕೆಯಾಗಿದೆ.
ವಂದೇ ಮಾತರಂ ಗೀತೆಯ 150ನೇ ವರ್ಷದ ಸ್ಮರಣಾರ್ಥ ಹಾಗೂ ಕವಿರತ್ನ ಕಾಳಿದಾಸ ಜಯಂತಿ ನಿಮಿತ್ತ ಜು.15ರಂದು ನಡೆದ ಕಾರ್ಯಕ್ರಮ ರಾಷ್ಟ್ರಾದ್ಯಂತ ಏಕಕಾಲಕ್ಕೆ ಪ್ರಸಾರಗೊಂಡಿತ್ತು. ಈ ಸಾಧನೆ ಗುರುತಿಸಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮನೋಜ ಮಾನೆ, ಸಂತೋಷ ಮುಸ್ತಾಪುರೆ, ಶಿವಕುಮಾರ ಶಂಕರಶೆಟ್ಟಿ, ಶಂಕ್ರಯ್ಯ ಸ್ವಾಮಿ, ತಾನಾಜಿ ಬಿರಾದಾರ ಇತರರು ಶಿಕರನ್ನು ಗೌರವಿಸಿದರು. ಸಿಸಿಆರ್ಟಿ ನವದೆಹಲಿ ಸಾಂಸ್ಕೃತಿಕ ಸಂಘದ ಸದಸ್ಯರಾಗಿ ಆಯ್ಕೆಯಾದ ಸಹ ಶಿಕ್ಷಕ ಸೋಮನಾಥ ಎಸ್.ಜಿ. ಅವರನ್ನೂ ಸನ್ಮಾನಿಸಲಾಯಿತು.
ಮನೋಜ ಮಾನೆ ಮಾತನಾಡಿ, ಶಿಕ್ಷಕರ ಸಮರ್ಪಣಾ ಭಾವದ ಸೇವೆಯಿಂದ ಸರ್ಕಾರಿ ಶಾಲೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರು. ಮುಖ್ಯಶಿಕ ಮಹಾವೀರ ಜಮಖಂಡಿ ಮಾತನಾಡಿ, ಗ್ರಾಮಸ್ಥರ ಸಹಕಾರ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದರು. ಶಿಕ್ಷಕರಾದ ವಿಮಲಾಬಾಯಿ, ಉಮಾ ಪಾಠಕ್, ಗೌರಮ್ಮ, ಸಮೀರಾ ಫಾತಿಮಾ, ಕರುಣಾ, ಜಯಶ್ರೀ, ಜಗನ್ನಾಥ ಬೇಂದ್ರೆ ಹಾಗೂ ಜಗದೀಶ ಉಪಸ್ಥಿತರಿದ್ದರು.
"
ರಾಜ್ಯದಿಂದ ಏಕೈಕ ಸರ್ಕಾರಿ ಶಾಲೆ ಜತೆ ಸಿಸಿಆರ್ಟಿ ಸಾಂಸ್ಕೃತಿಕ ಸಂಘದ ಸದಸ್ಯನಾಗಿ ನಾನು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಈ ಅವಕಾಶವನ್ನು ವಿದ್ಯಾರ್ಥಿಗಳಲ್ಲಿ ಭಾರತೀಯ ಕಲೆ, ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಆಸಕ್ತಿ ಬೆಳೆಸಲು ಬಳಸಿಕೊಳ್ಳುತ್ತೇನೆ. ಈ ಸಾಧನೆಗೆ ಮುಖ್ಯಶಿಕರು, ಸಹ ಶಿಕ್ಷಕರು ಹಾಗೂ ಗ್ರಾಮಸ್ಥರ ಪೋತ್ಸಾಹವೇ ಕಾರಣ.
— > ಸೋಮನಾಥ ಎಸ್.ಜಿ. ಸಹ ಶಿಕ್ಷಕ